ಶೀತ, ಜ್ವರದಂತಹ ಸಮಸ್ಯೆಗಳು ರೋಗ ನಿರೋಧಕ ಶಕ್ತಿಯ ಕೊರತೆಯ ಲಕ್ಷಣಗಳು ಎನ್ನಬಹುದು.ಆದ್ದರಿಂದ ಕೊರೊನಾ ವೈರಸ್ ಹರಡುವುದನ್ನು ತಪ್ಪಿಸಬೇಕಾದರೆ, ಮೊದಲು ಪ್ರತಿರಕ್ಷಣಾ ಅಂದರೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕಾಗುತ್ತದೆ. ಆದ್ರೆ ರೋಗನಿರೋಧಕ ಶಕ್ತಿ ಹೆಚ್ಚಿಸಲು ಸರಳ ವಾದ ವಿಧಾನಗಳನ್ನು ಅನುಸರಿಸಬಹುದು. ಅಂಥ ಸರಳ ವಿಧಾನಗಳಲ್ಲಿ ನೀರು ಕುಡಿಯುವ ವಿಧಾನ ಕೂಡಾ ಒಂದು.. ನೀರು ಅತ್ಯುತ್ತಮ ನೈಸರ್ಗಿಕ ಔಷಧಿಗಲ್ಲಿ ಒಂದು ಎಂದು ಹೇಳಬಹುದು.

ರೋಗ ನಿರೋಧಕ ಶಕ್ತಿ ಹೆಚ್ಚಲು ನೀರು ಕುಡಿಯಬೇಕೇ..?
ಜ್ವರ ಹಾಗೂ ನೆಗಡಿಯ ವಿರುದ್ಧ ಹೋರಾಡಲು ಒಂದು ಉತ್ತಮ ವಿಧಾನವೆಂದರೆ ಹೆಚ್ಚು ನೀರು ಕುಡಿಯುವುದು. ರಕ್ತವನ್ನು ವೇಗವಾಗಿ ಪಂಪ್ ಮಾಡಲು ನೆರವಾಗುತ್ತದೆ. ನೀವು ಶೀತ ಹಾಗೂ ಜ್ವರದಂತಹ ಸಮಸ್ಯೆಗಳನ್ನು ಎದುರಿಸುತ್ತಿರುವಾಗ, ಕೊರೊನಾ ವೈರಸ್ ಸೋಂಕು ತಗುಲುವ ಸಾಧ್ಯತೆ ಹೆಚ್ಚು. ಇದೆಲ್ಲಾ ದುರ್ಬಲ ರೋಗ ನಿರೋಧಕ ಶಕ್ತಿಯ ಲಕ್ಷಣವಾಗಿದೆ. ಆದ್ದರಿಂದ ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಉತ್ತಮ ಮಾರ್ಗವೆಂದರೆ, ಹೆಚ್ಚು ನೀರು ಕುಡಿಯುವುದು. ಹೌದು, ರೋಗ ನಿರೋಧಕ ಶಕ್ತಿ ಹೆಚ್ಚಲು ನೀರು ಸಹಾಯ ಮಾಡುತ್ತದೆ.
ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಿರಿ…!
ಆರೋಗ್ಯದಿಂದ ಇರಲು ಹಾಗೂ ರೋಗಗಳಿಂದ ದೂರ ವಿರಲು ಸರಳ ಮಾರ್ಗವೆಂದರೆ ನೀರು ಕುಡಿಯುವುದು. ನೀರು ಕುಡಿಯುವುದರಿಂದ ಜ್ವರ ಹಾಗೂ ಶೀತದಂತಹ ಕಾಯಿಲೆಗಳನ್ನು ತಡೆಗಟ್ಟಬಹುದು. ಪ್ರತಿ ದಿನ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುತ್ತಿದ್ದರೆ ಈ ರೋಗಗಳಿಂದ ಚೇತರಿಸಿಕೊಳ್ಳಬಹುದು. ದೇಹದಲ್ಲಿ ನೀರಿನ ಕೊರತೆ ಉಂಟಾದಾಗ ಅನೇಕ ಅನಾರೋಗ್ಯ ಸಮಸ್ಯೆಗಳು ಕಾಡುತ್ತವೆ. ಹೀಗಾಗಿ ಹೆಚ್ಚಿನ ಪ್ರಮಾಣದಲ್ಲಿ ದ್ರವ ಆಹಾರಗಳನ್ನು ಸೇವಿಸಬೇಕಾಗುತ್ತದೆ. ಅಲ್ಲದೇ, ನೀರಿನ ಕೊರತೆಯಿಂದ ಸೋಂಕು ಸಮಸ್ಯೆಗಳು ಹೆಚ್ಚಾಗಬಹುದು. ರಕ್ತದಲ್ಲಿ ಸಕ್ಕರೆಮಟ್ಟ ಅಸಮತೋಲನಕ್ಕೆ ಕಾರಣವಾಗಬಹುದು.

ಆದ್ದರಿಂದ ಪ್ರತಿ ದಿನ 1 ಲೀಟರ್ ಗಿಂತಲೂ ಅಧಿಕ ನೀರನ್ನು ಸೇವಿಸಬೇಕು ಇದು ದೇಹಕ್ಕೆ ಸೋಂಕನ್ನು ತಡೆದುಕೊಳ್ಳುವ ಶಕ್ತಿಯನ್ನು ನೀಡುತ್ತದೆ. ಸರಿಯಾದ ಪ್ರಮಾಣದ ನೀರು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ನೀರಿನ ಸೇವನೆ ವೈರಸ್ ವಿರುದ್ಧ ಹೋರಾಡಲು ಎನರ್ಜಿ ನೀಡುತ್ತದೆ.
ದೇಹದಲ್ಲಿ ನೀರಿನ ಪ್ರಮಾಣ ಹೆಚ್ಚಿಸಲು ತರಕಾರಿ, ಹಣ್ಣುಗಳನ್ನು ಸಹ ಸೇವಿಸಬಹುದಾಗಿದೆ.
ನೀರು ಏಕೆ ಮುಖ್ಯ..?
ಅಲರ್ಜಿ ಮತ್ತು ಅನಾರೋಗ್ಯಕ್ಕೆ ಒಳಗಾಗುವುದು ಜೀವನದಲ್ಲಿ ಎದುರಾಗುವ ಸಮಸ್ಯೆಗಳಲ್ಲಿ ಒಂದು. ನಿಮ್ಮ ದೇಹಕ್ಕೆ ವಿಶೇಷವಾಗಿ ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ನೀರು ಪವಾಡಗಳನ್ನು ಮಾಡಬಹುದು. ಇದು ನೈಸರ್ಗಿಕ ರೋಗ ನಿರೋಧಕ ವರ್ಧಕ ಎಂದು ಹೇಳಬಹುದು. ಆರೋಗ್ಯ ಹಾಗೂ ಯೋಗಕ್ಷೇಮವನ್ನು ಕಾಪಾಡುತ್ತದೆ.
ನೀರು ಕುಡಿಯುವುದರಿಂದ ಆಗುವ ಪ್ರಯೋಜನಗಳು…!
ಇದು ದೇಹದ ಆಮ್ಲಜನಕವನ್ನು ಪಂಪ್ ಮಾಡುತ್ತದೆ
ಕುಡಿಯುವ ನೀರಿನಿಂದ ನೀವು ಹಲವು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ನೀರು ಅಂಗಾಂಶಗಳಿಗೆ, ರಕ್ತಕಣಗಳಿಗೆ ಆಮ್ಲಜನಕವನ್ನು ಒದಗಿಸುತ್ತದೆ. ದೈಹಿಕವಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ನೀರು ಟಾಕ್ಸಿನ್, ಫ್ರೀ ರಾಡಿಕಲ್ ಗಳನ್ನು ಹೊರಹಾಕುತ್ತದೆ. ಮೂತ್ರಪಿಂಡದ ಮೂಲಕ ದೇಹದಿಂದ ವಿಷಕಾರಿಯನ್ನು ಹೊರಹಾಕಲು ನೀರು ಸಹಾಯ ಮಾಡುತ್ತದೆ. ಪ್ರತಿರಕ್ಷಣಾ ಕಾರ್ಯವನ್ನು ಹೆಚ್ಚಿಸುತ್ತದೆ.

ಗುಣಮಟ್ಟದ ನಿದ್ರೆಗೆ ಸಹಾಯ ಮಾಡುತ್ತದೆ
ನಿಮಗೆ ಉತ್ತಮ ನಿದ್ರೆಯಾಗುತ್ತಿಲ್ಲವೆಂದರೆ, ಚಿಂತೆ ಮಾಡಬೇಕಿಲ್ಲ. ಈ ಸಮಸ್ಯೆಯನ್ನು ಪರಿಹರಿಸಲು ನೀರು ಸಹಾಯ ಮಾಡುತ್ತದೆ. ನೀರು ಕುಡಿಯುವುದರಿಂದ ಮೆದುಳಿಗೆ ಮೆಲಟೋನಿನ್ ಮತ್ತು ಇತರ ನಿದ್ರೆಯನ್ನು ಉಂಟು ಮಾಡುವ ರಾಸಾಯನಿಕಗಳು ಉತ್ಪತ್ತಿಯಾಗುತ್ತವೆ. ಇದರ ಫಲಿತಾಂಶ ಉತ್ತಮ ಗುಣಮಟ್ಟದ ವಿಶ್ರಾಂತಿ ದೊರೆಯುತ್ತದೆ.
ನೀರು ಇಂದ್ರಿಯಗಳನ್ನು ಶುದ್ಧಗೊಳಿಸುತ್ತದೆ
ದೇಹವನ್ನು ಶುದ್ಧೀಕರಿಸಲು ನೀರು ಅಮೃತದಂತೆ ಕೆಲಸ ಮಾಡುತ್ತದೆ. ನಿಮ್ಮ ಇಂದ್ರಿಯ ಅಂಗಗಳಿಗೆ ಚರ್ಮ, ಕಣ್ಣು ಮತ್ತು ಬಾಯಿಯ ಲೋಳೆ ಪೋರೆಗಳ ಮೇಲೆ ತೇವಾಂಶವನ್ನು ಕಾಪಾಡುತ್ತದೆ. ಈ ಭಾಗಗಳಲ್ಲಿ ತೇವಾಂಶವುಳ್ಳ ವಾತಾವರಣ ಸಾಂಕ್ರಾಮಿಕ ಬ್ಯಾಕ್ಟೇರಿಯಾಗಳನ್ನು ತಡೆಯುತ್ತದೆ.
ರಕ್ಷಣಾತ್ಮಕ
ನಿಯಮಿತವಾಗಿ ಹೆಚ್ಚು ನೀರು ಕುಡಿಯುವುದರಿಂದ ಒಣ ಚರ್ಮಕ್ಕೆ ವಿದಾಯ ಹೇಳಬಹುದು. ಚರ್ಮದ ತೇವಾಂಶದ ಸ್ಥಿತಿಸ್ಥಾಪಕತ್ವ ಕಾಪಾಡಲು ನೆರವಾಗುತ್ತದೆ. ಟ್ಯಾಪ್ ನೀರನ್ನು ಕುಡಿಯಬೇಡಿ. ರೋಗ ನಿರೋಧಕ ಸ್ನೇಹಿ ನೀರನ್ನೇ ಸೇವಿಸಿ.
ಸ್ನಾಯುಗಳಿಗೆ ಒಳ್ಳೆಯದು
ನಿಮ್ಮ ಸ್ನಾಯುಗಳಲ್ಲಿ ಶೇ 79 ರಷ್ಟು ನೀರು ಇರುತ್ತದೆ. ನಿಮ್ಮ ದೇಹ ಶೇ 2 ರಷ್ಟು ನೀರಿನ ಅಂಶವನ್ನು ಕಳೆದುಕೊಳ್ಳುವುದರಿಂದ ನಿಮಗೆ ಆಯಾಸವಾಗಬಹುದು. ಇದು ನಿಮ್ಮ ಪ್ರೇರಣಾ ಶಕ್ತಿ ಮೇಲೆ ಕೆಲಸ ಮಾಡುತ್ತದೆ. ಆಹಾರವನ್ನು ಜೀರ್ಣಿಸಿಕೊಳ್ಳಲು ನೀರು ಸಹಾಯ ಮಾಡುತ್ತದೆ. ಪೋಷಕಾಂಶಗಳನ್ನು ಹೀರಿಕೊಳ್ಳಲು ಅನುವ ಮಾಡಿಕೊಡುತ್ತದೆ.
ಕೊಬ್ಬನ್ನು ಬರ್ನ್ ಮಾಡಲು, ತೂಕ ಇಳಿಕೆ
ಕುಡಿಯುವ ನೀರಿನ ಅತ್ಯಂತ ಆಶ್ಚರ್ಯಕರ ಪ್ರಯೋಜನವೆಂದರೆ ಇದು ಕೊಬ್ಬನ್ನು ಬರ್ನ್ ಮಾಡುತ್ತದೆ. ಅಲ್ಲದೇ ನಿಮ್ಮ ತೂಕವನ್ನು ನಿಯಂತ್ರಣದಲ್ಲಿಡುತ್ತದೆ. ಹಸಿವು ನಿವಾರಕವಾಗಿ ಕೆಲಸ ಮಾಡುತ್ತದೆ.
ಆರೋಗ್ಯಕರ ಚರ್ಮಕ್ಕಾಗಿ
ನಿಮ್ಮ ಚರ್ಮ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿರುತ್ತದೆ. ಆಗ ಚರ್ಮ ಶುಷ್ಕತೆ, ಕಾಂತಿ ಕಳೆದುಕೊಳ್ಳುವು , ಸುಕ್ಕುಗಟ್ಟುವುದು ಹಲವು ಸಮಸ್ಯೆಗಳು ಉಂಟಾಗಬಹುದು. ಆದ್ರೆ ನೀರು ಕುಡಿಯುವವುದರಿಂದ ಆರೋಗ್ಯಕರ ಚರ್ಮ ಹಾಗೂ ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು. ನೀರು ವಿಷವನ್ನು ಹೊರಹಾಕಲು ಸಹಾಯ ಮಾಡುವುದಲ್ಲದೇ, ಗುಳ್ಳೆಗಳನ್ನು ನಿವಾರಿಸುತ್ತದೆ. ಚರ್ಮವನ್ನು ಮೃದುವಾಗಿಡಲು ಸಹಾಯ ಮಾಡುತ್ತದೆ.