ಕೊರೊನಾ ವೈರಸ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ದೇಶದಲ್ಲಿ ಮುನ್ನೇಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಾಲಿವುಡ್ ನ ಖ್ಯಾತ ನಟರಾದ ಅಮಿತಾಬ್ ಬಚ್ಚನ್, ಶಿಲ್ಪಾ ಶೆಟ್ಟಿ, ವರುಣ್ ಧವನ್ ಹಾಗೂ ಪ್ರಿಯಾಂಕಾ ಛೋಪ್ರಾ ಸೇರಿದಂತೆ ಇತರರು ತಮ್ಮ ಅಭಿಮಾನಿಗಳಿಗೆ ಸುರಕ್ಷತಾ ಮಾರ್ಗಸೂಚಿಗಳನ್ನು ಹಂಚಿಕೊಳ್ಳುವ ಮೂಲಕ, ಅರಿವು ಮೂಡಿಸುತ್ತಿದ್ದಾರೆ. ಕೊರೊನಾ ವೈರಸ್ ಕುರಿತಂತೆ ಹೇಗೆ ಮುನ್ನೇಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ತಮ್ಮ ಫ್ಯಾನ್ಸ್ ಗೆ, ಫಾಲೋವರ್ಸ್ ಗೆ ಸಾಮಾಜಿಕ ಮಾಧ್ಯಮದಲ್ಲಿ ಬಾಲಿವುಡ್ ಸೆಲೆಬ್ರಿಟಿಗಳು ಬಗ್ಗೆ ಸಲಹೆ ನೀಡಿದ್ದಾರೆ.
ಬಿಗ್ ಬಿ ಅಮಿತಾಬ್ ಬಚ್ಚನ್
ಬಾಲಿವುಡ್ ನ ಹಿರಿಯ ನಟ, ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಕೊರೊನಾ ವೈರಸ್ ಕುರಿತಂತೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಈ ಬಗ್ಗೆ ಟ್ವೀಟರ್ ನಲ್ಲಿ ವಿಡಿಯೋ ಮಾಡಿ ಪೋಸ್ಟ್ ಮಾಡಿರುವ ಬಿಗ್ ಬಿ, ವಿಶ್ವದಾದ್ಯಂತ ಕೊರೊನಾ ಹರಡುತ್ತಿರುವ ಬಗ್ಗೆ ಹಾಗೂ ಅದನ್ನು ತಡೆಗಟ್ಟುವ ಪ್ರಾಥಮಿಕ ಸಲಹೆ ಗಳನ್ನು ನೀಡುತ್ತಿರುವ ವೀಡಿಯೋವನ್ನು ಅಪಲೋಡ್ ಮಾಡಿದ್ದಾರೆ.

ವರುಣ್ ಧವನ್
ಬಾಲಿವುಡ್ ನ ಪ್ರತಿಭಾನ್ವಿತ ನಟ ವರುಣ್ ಧವನ್ ಕೂಡಾ ಕೊರೊನಾ ಕುರಿತು ಜಾಗೃತಿ ಮೂಡಿಸಿದ್ದಾರೆ. ಭೂಮಿಯ ಚಿತ್ರವೊಂದಕ್ಕೆ ಮಾಸ್ಕ್ ಹಾಕಿ ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ನಾವೆಲ್ಲರೂ ವೈರಸ್ ವಿರುದ್ಧ ಹೋರಾಡುತ್ತಿದ್ದೇವೆ. ಮಾನವ ಜನಾಂಗವು ಅತ್ಯಂತ ಸ್ವಾರ್ಥಿ ಎಂದು ಅರಿತುಕೊಳ್ಳುವ ಸಮಯವಿದು ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.

ಶಿಲ್ಪಾ ಶೆಟ್ಟಿ
ಬಾಲಿವುಡ್ ನಟಿ, ಫಿಟ್ ನೆಸ್ ಐಕಾನ್ ಶಿಲ್ಪಾಶೆಟ್ಟಿ ಕೂಡಾ ಕೊರೊನಾ ಎಂಬ ಮಾಹಾಮಾರಿ ಬಗ್ಗೆ ಮುನ್ನಚ್ಚರಿಕೆ ಕ್ರಮ ಹೇಗೆ ತೆಗೆದುಕೊಳ್ಳಬೇಕು ಎಂಬ ಬಗ್ಗೆ ವೀಡಿಯೋವನ್ನು ಇನ್ ಸ್ಚಾಗ್ರಾಮ್ ನಲ್ಲಿ ಅಪಲೋಡ್ ಮಾಡಿ, ಸಲಹೆ ನೀಡಿದ್ದಾರೆ. ಮನೆಯಲ್ಲಿ ಇರುವಾಗ ರೋಗ ನಿರೋಧಕ ಶಕ್ತಿ ಹೇಗೆ ಹೆಚ್ಚಿಸಿಕೊಳ್ಳಬೇಕು ಎಂಬುದರ ಕುರಿತು ಶಿಲ್ಪಾ ಶೆಟ್ಟಿ ತನ್ನ ಫಾಲೋವರ್ಸ್ ಗೆ ಹಾಗೂ ಅಭಿಮಾನಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ.
ಸಮಯದ ಕೊರತೆ ಅನೇಕರಿಗೆ ವ್ಯಾಯಾಮ ಮಾಡಲು ಆಗದೇ ಇರುವುದು ಪ್ರಮುಖ ಕಾರಣವಾಗಿದೆ. ವಾರದಲ್ಲಿ ಕನಿಷ್ಠ 4 ಬಾರಿ ವ್ಯಾಯಾಮ ಮಾಡುವ ಮೂಲಕ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಮೂಲಕ ನಮ್ಮನ್ನು ನಾವು ರಕ್ಷಿಸಿಕೊಳ್ಳಲು, ಈ ಅಮೂಲ್ಯವಾದ ಸಮಯವನ್ನು ಬಳಸಿಕೊಳ್ಳಬಹುದು ಎಂದು ಶಿಲ್ಪಾ ಶೆಟ್ಟಿ ಹೇಳಿದ್ದಾರೆ.

ಪ್ರಿಯಾಂಕಾ ಛೋಪ್ರಾ
ಪಿಗ್ಗಿ ತನ್ನ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ವಿವಿಧ ಕಾರ್ಯಕ್ರಮಗಳಲ್ಲಿ ತಾವು ನಮಸ್ತೆ ಸೂಚಿಸುವ ಫೊಟೋಗಳನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಪ್ರಿಯಾಂಕಾ ಜನರಿಗೆ ಅರಿವು ಮೂಡಿಸಿದ್ದಾರೆ. ಅಲ್ಲದೇ ಕೊರೊನಾ ವೈರಸ್ ತಡೆಗಟ್ಟಲು ಜನರೊಂದಿಗೆ ದೈಹಿಕ ಸಂಪರ್ಕವನ್ನು ಮಿತಿಗೊಳಿಸಿ ಎಂದು ಸೂಚಿಸಿದ್ದಾರೆ. ಪ್ರಿಯಾಂಕಾ ಛೋಪ್ರಾ ಇದಕ್ಕೆ ಶೀರ್ಷಿಕೆ ಕೂಡಾ ನೀಡಿದ್ದಾರೆ.ನಮಸ್ತೆ ಮೂಲಕ ಜನರನ್ನು ಸ್ವಾಗತಿಸಲು ಹಳೆಯದಾದರೂ, ಇದು ಹೊಸ ಮಾರ್ಗವಾಗಿದೆ. ದಯವಿಟ್ಟು ಎಲ್ಲರೂ ಸುರಕ್ಷಿತವಾಗಿರಿ. ಕೈ ತೊಳೆಯುವುದು ಮತ್ತು ಸುರಕ್ಷಿತವಾಗಿರುವುದು ಕ್ರಮವಾಗಿದೆ ಎಂದು ತಿಳಿಸಿದ್ದಾರೆ.

ಕತ್ರಿನಾ ಕೈಫ್
ಸೆಲೆಬ್ರಿಟಿ ಫಿಟ್ನೆಸ್ ತರಬೇತುದಾರ ಯಾಸ್ಮಿನ್ ಜತೆ ಕತ್ರಿನಾ ಕೈಫ್ ಮನೆಯಲ್ಲಿದ್ದಾಗ ಸಕ್ರೀಯರಾಗಿರುವುದು ಹೇಗೆ.. ಎಂಬ ಬಗ್ಗೆ ತಿಳಿಸಲು ಬಾಲಿವುಡ್ ನಟಿ ಕತ್ರೀನಾ ಕೈಫ್ ತಮ್ಮ ಫಿಟ್ನೆಸ್ ತರಬೇತುದಾರರ ಜತೆಗೆ ಯೋಗಾ ಸೇರಿದಂತೆ ಮೊದಲಾದ ಚಟುವಟಿಕೆಗಳಲ್ಲಿ ತೊಡಗಿರುವ ವೀಡಿಯೋವನ್ನು ಅಪಲೋಡ್ ಮಾಡಿದ್ದಾರೆ.

ಅನುಪಮ್ ಖೇರ್
ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಕೂಡಾ ವೀಡಿಯೋ ಪೋಸ್ಟ್ ಮಾಡಿದ್ದಾರೆ. ಕೈ ಕುಲುಕುವ ಅಥವಾ ತಬ್ಬಿಕೊಳ್ಳುವ ಬದಲು ನಮಸ್ತೆ ಮೂಲಕ ಜನರನ್ನು ಸ್ವಾಗತಿಸುವಂತೆ ತಮ್ಮ ಅಭಿಮಾನಿಗಳಿಗೆ ಕರೆ ನೀಡಿದ್ದಾರೆ. ಹೀಗಾಗಿ ದೈಹಿಕ ಸಂಪರ್ಕದ ಮೂಲಕ ರೋಗಾಣುಗಳು ಹರಡದಂತೆ ಎಚ್ಚರಿಕೆ ನೀಡಿದ್ದಾರೆ.

ಒಬ್ಬರಿಗೊಬ್ಬರು ಶುಭಾಷಯ ಕೋರುವ ಉತ್ತಮ ಮಾರ್ಗವೆಂದರೆ ಕೈಕು ಲುಕುವುದು ಅಲ್ಲ. ಆದ್ರೆ ನಮಸ್ತೆ ಹೇಳುವ ಮೂಲಕ ಸಾಂಪ್ರದಾಯಿಕ ಭಾರತೀಯ ಶುಭಾಷಯ ವಿಧಾನ ಅನುಸರಿಸಿ. ಇದರಿಂದ ಸೋಂಕಿಗೆ ಒಳಗಾಗುವುದನ್ನು ತಪ್ಪಿಸಬಹುದು ಎಂದು ಸಲಹೆ ನೀಡಿದ್ದಾರೆ.