ನಾವೆಲ್ಲರೂ ಆಗಾಗ್ಗೆ ವಿಪರೀತ ಮಟ್ಟದ ಮಾಯುಮಾಲಿನ್ಯ ಹಾಗೂ ಸೂರ್ಯನ ಯುವಿ ಕಿರಣಗಳಿಗೆ ಒಡ್ಡಿಕೊಳ್ಳುತ್ತಿರುತ್ತೇವೆ. ಇವೆರಡೂ ಕೂದಲಿಗೆ ಸಾಕಷ್ಟು ಹಾನಿಯನ್ನುಂಟು ಮಾಡಬಹುದು. ನೈಸರ್ಗಿಕ ಚಿಕಿತ್ಸೆ ಕೆಲಮೊಮ್ಮೆ ನಮಗೆ ತಿಳಿದಿದ್ದರೂ, ಕೂದಲಿನ ವಿಚಾರಕ್ಕೆ ಬಂದಾಗ ಹೆಚ್ಚು ನಿರ್ಲಕ್ಷ್ಯ ಮಾಡುತ್ತೇವೆ.

ಲಾಕ್ ಡೌನ್ ಸಮಯದಲ್ಲಿ ದೈಹಿಕ ಹಾಗೂ ಮಾನಸಿಕವಾಗಿ ಫಿಟ್ ಆಗಿರಬೇಕಾದದ್ದು ತುಂಬಾ ಅವಶ್ಯಕ. ದೈನಂದಿನ ಬದುಕಿನಲ್ಲಿ ಜಿಮ್, ಫಿಟ್ನೆಸ್ ಕಾಪಾಡಿಕೊಳ್ಳಲು ಅನೇಕ ಜನರು ಜಿಮ್ ಗೆ, ವರ್ಕೌಟ್ ಸೆಂಟರ್ ಗಳಿಗೆ ಹೋಗುತ್ತಿದ್ದರೆ, ಆದರೆ ಅದು ಈಗ ಸಾಧ್ಯವಾಗ್ತಿಲ್ಲ. ಹಾಗಾಗಿ ಬಾಲಿವುಡ್ ಖ್ಯಾತನಾಮರು ಫಿಟ್ನೆಸ್ ಹೇಗೆ ಕಾಪಾಡಿಕೊಳ್ಳಬೇಕು ಎಂದು ಟಿಪ್ಸ್ ನೀಡಿದ್ದಾರೆ.ಅನೇಕ ಜನರು ಮನೆಯಲ್ಲೇ ತಮ್ಮ ಮನೆಗೆಲಸದ ಜತೆ ಫಿಟ್ನೆಸ್ ಯೋಗ ಮಾಡುತ್ತಿದ್ದಾರೆ. ಅನೇಕ ಸೆಲೆಬ್ರಿಟಿಗಳು ಸಹ ಫಿಟ್ನೆಸ್ ಹೇಗೆ ಕಾಪಾಡಿಕೊಳ್ಳಬೇಕು ಎಂಬುದರ ಬಗ್ಗೆ ಹೇಳಿದ್ದಾರೆ.
ಶಿಲ್ಪಾ ಶೆಟ್ಟಿ ಕುಂದ್ರಾ
ಬಾಲಿವುಡ್ ನಟಿ, ಫಿಟ್ನಸ್ ದಿವಾ ತಮ್ಮ ಉದ್ಯಾನವನ್ನು ಸ್ವಚ್ಚಗೊಳಿಸುತ್ತಿರುವ ದೃಶ್ಯ ಕಂಡು ಬಂದಿದೆ. ಸ್ವಚ್ಛಗೊಳಿಸುವುದು ಕೂಡಾ ಫಿಟ್ನೆಸ್ ನ್ನು ಕಾಪಾಡಿಕೊಳ್ಳಬಹುದು ಎಂದು ತಿಳಿದು ಬಂದಿದೆ.
ಕತ್ರಿನಾ ಕೈಫ್
ಬಿ-ಟೌನ್ ಬೆಡಗಿ ಕತ್ರೀನಾ ಕೈಫ್ ಕೂಡಾ ಲಾಕ್ ಡೌನ್ ಸಮಯದಲ್ಲಿ ಫಿಟ್ ಆಗಿರಲು ಕೈಯಲ್ಲಿ ಪೊರಕೆ ಹಿಡಿದು ಮನೆ ಸ್ವಚ್ಛಗೊಳಿಸುತ್ತಿರುವ ದೃಶ್ಯ ಸೆರೆಯಾಗಿದೆ. ಮನೆ ಕೆಲಸವನ್ನು ತಾವೇ ಮಾಡುವಲ್ಲಿ ನಿರತರಾಗಿದ್ದಾರೆ.
ವಿಕ್ಕಿ ಕೌಶಲ್
ನಟ ವಿಕ್ಕಿ ಕೌಶಲ್ ಅವರು ತಮ್ಮ ಮನೆಯಲ್ಲಿ ಫ್ಯಾನ್ ನ್ನು ಸಚ್ಛಗೊಳಿಸಿದ್ರು. ಈ ವಿಡಿಯೋವನ್ನು ಶೇರ್ ಮಾಡಿದ್ದು, ಸಧೃಡವಾಗಿರಲು ಮನೆಕೆಲಸ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.

ಶೃತಿ ಹಾಸನ್
ನಟಿ ಶೃತಿ ಹಾಸನ್ ಸಹ ಹೂಪ್ ಹೇಗೆ ಮಾಡಬೇಕೆಂದು ತಮ್ಮ ಅಭಿಮಾನಿಗಳಿಗೆ ಸಲಹೆ ನೀಡಿರುವ ವಿಡೀಯೋ ರಿಲೀಸ್ ಮಾಡಿದ್ದಾರೆ. ನಿಮ್ಮ ವ್ಯಾಯಾಮದ ಸಮಯದಲ್ಲಿ ಮೋಜು ಮಾಡಲು ಬಯಸಿದರೆ ಇದನ್ನು ಪ್ರಯತ್ನಿಸಿ ಎಂದು ಶೃತಿ ತಿಳಿಸಿದ್ದಾರೆ.
ಹಿನಾ ಖಾನ್
ಟೆಲಿವಿಷನ್ ತಾರೆ ಹಿನಾ ಖಾನ್ ಇನ್ ಸ್ಟಾಗ್ರಾಮ್ ನಲ್ಲಿ ತುಂಬಾ ಆ್ಯಕ್ಟಿವ್ ಆಗಿದ್ದಾರೆ. ಹೀನಾ ಖಾನ್ ಬಟ್ಟೆಗಳನ್ನು ತೊಳೆಯುವುದು ಅಥವಾ ಕ್ಯಾಲೋರಿಗಳನ್ನು ಬರ್ನ್ ಮಾಡುವಲ್ಲಿ ಸಹಾಯ ಮಾಡುತ್ತದೆ.
ಅನುಷ್ಕಾ ಶರ್ಮಾ
ಕೋವಿಡ್ -19 ಲಾಕ್ ಡೌನ್ ಸಮಯದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಎಲ್ಲರಿಗೂ ಮುಖ್ಯ. ಆದರೆ ಕೆಲಮೊಮ್ಮೆ ಪ್ರೇರಣೆ ಬೇಕಾಗುತ್ತದೆ. ಚಿಂತಿಸಬೇಡಿ. ಅನುಷ್ಕಾ ಶರ್ಮಾ ಇಲ್ಲಿದ್ದಾರೆ. ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತು ಅವರ ಪತಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಲಾಕ್ ಡೌನ್ ಮಧ್ಯೆ ಪ್ರತಿದಿನ ಆರೋಗ್ಯಕರ ಜೀವನಶೈಲಿಯ ಜೀವನವನ್ನು ಆನಂದಿಸುತ್ತಿದ್ದಾರೆ.