ಬೆಳಿಗ್ಗೆ ಎದ್ದ ತಕ್ಷಣ ಒಂದು ಕಪ್ ಚಹಾ ಕುಡಿದರೆ ಅದೇನೋ ಆಹ್ಲಾದ, ಹಾಗೂ ತಾಜಾತನ ಅನುಭವ ಉಂಟಾಗುತ್ತದೆ. ಟೀ ಅನೇಕ ಫ್ಲೇವರ್ ವಿವಿಧ ಪ್ರಕಾರಗಳಲ್ಲಿ ಕಂಡು ಬರುತ್ತವೆ. ಅದರಲ್ಲಿ ಬ್ಲ್ಯಾಕ್ ಟೀ ಕೂಡಾ ಒಂದು ನೀವು ಪ್ರತಿ ದಿನ ಉತ್ತಮ ಗುಣಮಟ್ಟದ ಬ್ಲ್ಯಾಕ್ ಟೀ ಕುಡಿಯುತ್ತಿದ್ದರೆ, ರೋಗ ನಿರೋಧಕ ಹೆಚ್ಚಿಸಿಕೊಳ್ಳಬಹುದು. ಅಲ್ಲದೇ ಅನೇಕ ಕಾಯಿಲೆಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಬಹುದು.
ಬ್ಲ್ಯಾಕ್ ಟೀಯನ್ನು ಅತ್ಯುತ್ತಮ ಪಾನೀಯ ಎಂದು ಹೇಳಲಾಗುತ್ತದೆ. ಬ್ಲ್ಯಾಕ್ ಟೀ ಅನೇಕ ರೀತಿಯ ವೈರಸ್ ಗಳಿಂದ ರಕ್ಷಿಸುತ್ತದೆ. ಪೌಷ್ಠಿಕ ತಜ್ಞರು ಪ್ರತಿ ದಿನ ಬ್ಲ್ಯಾಕ್ ಟೀ ಸೇವಿಸುವಂತೆ ಸಲಹೆ ನೀಡುತ್ತಾರೆ. ನಿಜಕ್ಕೂ ಕಪ್ಪು ಚಹಾ ವೈರಸ್ ಗಳನ್ನು ಹಾಗೂ ಬ್ಯಾಕ್ಟೇರಿಯಾಗಳನ್ನು ತಡೆಗಟ್ಟುತ್ತದೆಯೇ… ಜ್ವರ , ಶೀತವನ್ನು ದೂರ ಮಾಡುತ್ತದೆಯೇ.. ಎಂಬ ಬಗ್ಗೆ ಇಲ್ಲಿದೆ ಡಿಟೇಲ್ಸ್.

ಸದ್ಯ ಭಾರತದಲ್ಲಿ ಕೊರೊನಾ ವೈರಸ್ ಅಪಾಯ ಎಲ್ಲರನ್ನೂ ಕಾಡುತ್ತಿದೆ. ಇದಲ್ಲದೇ ಹವಾಮಾನದಲ್ಲಿ ಬದಲಾವಣೆಯಿಂದಾಗಿ, ಅನೇಕ ವೈರಸ್ ಗಳು , ಬ್ಯಾಕ್ಟೇರಿಯಾ, ಜ್ವರ, ಸೋಂಕು ಹಾಗೂ ರೋಗಗಳ ಅಪಾಯ ಹೆಚ್ಚಾಗಿದೆ. ಈ ರೋಗಗಳು, ವೈರಸ್ ಗಳು ಹಾಗೂ ಸೋಂಕುಗಳಿಂದ ರಕ್ಷಿಸಲು ಅತ್ಯುತ್ತಮ ಮಾರ್ಗವೆಂದರೆ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು. ನಮ್ಮ ದೇಹ ಎಲ್ಲಾ ರೀತಿಯ ಸೋಂಕು ಅಥವಾ ವೈರಸ್ ವಿರುದ್ಧ ಹೋರಾಡಲು ಸಾಧ್ಯ. ಆದ್ರೆ ಸರಿಯಾದ ಆಹಾರ ಪದ್ಧತಿ ಅಳವಡಿಸಿಕೊಳ್ಳದೇ, ಕೆಲವರು ತಪ್ಪು ಮಾಡುತ್ತಾರೆ. ಆಗ ರೋಗಗಳಿಂದ ರಕ್ಷಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ನೀವು ಹೆಚ್ಚು ಯೋಚಿಸಬೇಕಿಲ್ಲ. ಬ್ಲ್ಯಾಕ್ ಟೀ ಅಥವಾ ಕಪ್ಪು ಚಹಾ ಸೇವಿಸುವುದರಿಂದ ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಹುದು.
ವೈರಸ್, ಬ್ಯಾಕ್ಟೇರಿಯಾ ತಡೆಗಟ್ಟುತ್ತಾ ಬ್ಲ್ಯಾಕ್ ಟೀ..!
ತಜ್ಞರ ಪ್ರಕಾರ, ಬ್ಲ್ಯಾಕ್ ಟೀ ಎಲ್ಲಾ ರೀತಿಯ ವೈರಸ್ ಮತ್ತು ಬ್ಯಾಕ್ಟೇರಿಯಾವನ್ನು ತೆಡೆಗಟ್ಟುತ್ತದೆ. ನಿಮ್ಮ ಪ್ರಾಣ ಉಳಿಸುತ್ತದೆ ಎಂದು ಖಾತರಿ ಪಡಿಸಲಾಗುವುದಿಲ್ಲ. ಆದ್ರೆ ರೋಗ ನಿರೋಧಕ ಶಕ್ತಿ ಉತ್ತಮವಾಗಿದ್ದರೆ, ಬ್ಯಾಕ್ಟೇರಿಯಾ ವಿರುದ್ಧ ಹೋರಾಡಲು ಸಾಧ್ಯವಾಗುತ್ತದೆ. ನಿಮ್ಮ ಜೀವನಶೈಲಿ, ತೆಗೆದುಕೊಳ್ಳುವ ಆಹಾರ, ವ್ಯಾಯಾಮ, ನೀವು ಪ್ರತಿ ದಿನ ಕುಡಿಯುವ ನೀರಿನ ಪ್ರಮಾಣ ಮುಂತಾದ ಅನೇಕ ವಿಷಯಗಳು ರೋಗ ನಿರೋಧಕ ಶಕ್ತಿ ಹೆಚ್ಚಲು ಸಹಾಯ ಮಾಡುತ್ತವೆ. ಆದ್ದರಿಂದ ಈ ಎಲ್ಲಾ ಸಂಗತಿಗಳ ಬಗ್ಗೆ ಗಮನ ಹರಿಸಬೇಕು..

‘ಬ್ಲ್ಯಾಕ್ ಟೀ’ ಪ್ರಯೋಜನಗಳು!
ಬ್ಲ್ಯಾಕ್ ಟೀಯಲ್ಲಿ ಉತ್ಕರ್ಷಣಾ ನಿರೋಧಕಗಳು ಹೆಚ್ಚಾಗಿರುತ್ತವೆ. ಇದು ನಿಮ್ಮನ್ನು ಅನೇಕ ರೋಗಗಳಿಂದ ರಕ್ಷಿಸುತ್ತದೆ. ಮನೆಯಲ್ಲಿ ತಯಾರಿಸಿದ ಬ್ಲ್ಯಾಕ್ ಟೀ ಕುಡಿಯುವುದರಿಂದ ಅನೇಕ ಹೃದ್ರೋಗ ರೋಗಿಗಳ ಹೃದಾಯಾಘಾತದ ಅಪಾಯ ಕಡಿಮೆಯಾಗುತ್ತದೆ. ಕಪ್ಪು ಚಹಾ ನಿಮ್ಮ ಕೊಲೆಸ್ಟ್ರಾಲ್ ನ್ನು ನಿಯಂತ್ರಿಸುತ್ತದೆ. ರಕ್ತದೋತ್ತಡ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಯಾವಾಗ, ಎಷ್ಟು ಚಹಾ ಕುಡಿಬೇಕು..?
ಪ್ರತಿ 4 ಗಂಟೆಗೊಮ್ಮೆ ದಿನಕ್ಕೆ 3 ಕಪ್ ಬ್ಲ್ಯಾಕ್ ಟೀ ಸೇವಿಸಬಹುದು. ಅಧಿಕ ರಕ್ತದೋತ್ತಡದಿಂದ ಬಳಲುತ್ತಿರುವ ರೋಗಿಗಳು ಇದನ್ನು ಸೇವಿಸಬಹುದು. ಅಲ್ಲದೇ ಮಧುಮೇಹ ರೋಗಿಗಳಪ 45 ನಿಮಿಷಗಳ ಆಹಾರದ ನಂತರ 1 ಕಪ್ ಬ್ಲ್ಯಾಕ್ ಟೀ ಸೇವಿಸಿದರೆ, ಅವರ ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿರುತ್ತದೆ.

ಆ್ಯಸಿಡಿಟಿ ಉಂಟಾಗುವುದಿಲ್ಲ.
ಜನರು ಸಾಮಾನ್ಯವಾಗಿ ಚಹಾ ಅಥವಾ ಕಾಫಿ ಕುಡಿಯುವುದರಿಂದ ಆ್ಯಸಿಡಿಟಿ ಆಗುತ್ತದೆ ಎಂದು ಭಾವಿಸುತ್ತಾರೆ. ಆದ್ರೆ ತಜ್ಞರ ಪ್ರಕಾರ, ಟೀ- ಕಾಫಿ ಸೇವಿಸುವುದರಿಂದ ಆ್ಯಸಿಡಿಟಿ ಉಂಟಾಗುವುದಿಲ್ಲ. ಚಹಾ ಕಾಫಿ ಕುಡಿದರೆ ಆ್ಯಸಿಡಿಟಿ ಉಂಟಾಗುವುದಿಲ್ಲ.
ಅಲ್ಲದೇ ಬ್ಲ್ಯಾಕ್ ಟೀ ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ. ಕಪ್ಪು ಚಹಾದಲ್ಲಿರುವ ಕಂಡು ಬರುವ ಪಾಲಿಫಿನಾಲ್ ಗಳು ಉತ್ತಮ ಬ್ಯಾಕ್ಟೇರಿಯಾದ ಬೆಳವಣಿಗೆಯನ್ನು ಉತ್ತೇಜಿಸುತ್ತವೆ. ಅಲ್ಲದೇ ಆರೋಗ್ಯಕರ ಕರುಳನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಕಪ್ಪು ಚಹಾದಲ್ಲಿ ಆಂಟಿ ಮೈಕ್ರೋಬಿಯಲ್ ಗುಣಲಕ್ಷಣಗಳಿವೆ. ಇವು ಹಾನಿಕಾರಕ ಬ್ಯಾಕ್ಟೇರಿಯಾಗಳನ್ನು ಕೊಲ್ಲುತ್ತದೆ. ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಧಿಕ ರಕ್ತದೋತ್ತಡ ಹೃದಯ ಆರೋಗ್ಯ, ದೃಷ್ಟಿ ದೋಷ, ಮೂತ್ರಪಿಂಡದ ವೈಫಲ್ಯ ಉಂಟು ಮಾಡಬಹುದು. ಹೀಗಾಗಿ ರಕ್ತದೋತ್ತಡ ಕಡಿಮೆ ಮಾಡುವಲ್ಲಿ ಬ್ಲ್ಯಾಕ್ ಟೀ ಪ್ರಮುಖ ಪಾತ್ರ ವಹಿಸುತ್ತದೆ.