ಮನುಷ್ಯನ ಸೌಂದರ್ಯ ಹೆಚ್ಚುವುದು ದೇಹದಿಂದಲ್ಲ, ಒಳ್ಳೆಯ ಮನಸ್ಸಿನಿಂದ.. ಸ್ಪರ್ಧಾತ್ಮಕ ಯುಗದಲ್ಲಿ ಮನುಷ್ಯನ ಬಾಹ್ಯ ಸೌಂದರ್ಯಕ್ಕೆ ಹೆಚ್ಚು ಪ್ರಾಶ್ಯಸ್ತ ನೀಡಲಾಗುತ್ತದೆ. ಬದಲಾಗುತ್ತಿರುವ ಸಮಯದೊಂದಿಗೆ ನಾವು ಬದಲಾಗಬೇಕು.. ಅದರಲ್ಲೂ ಬ್ಯೂಟಿ ವಿಷಯಕ್ಕೆ ಬಂದರೆ, ಎಲ್ಲರಲ್ಲೂ ನಾನು ಸುಂದರವಾಗಿ ಕಾಣಿಸಬೇಕು ಎಂದು ಬಯಕೆ ಇರುತ್ತದೆ. ಇದು ವ್ಯಕ್ತಿತ್ವದ ಪ್ರಮುಖ ಭಾಗವೆಂದು ನಾವು ಪರಿಗಣಿಸುತ್ತೇವೆ. ಬೇರೆ ರೀತಿಯಲ್ಲಿ ಹೇಳುವುದಾದರೂ, ಇತ್ತೀಚಿನ ದಿನಗಳಲ್ಲಿ ಸೌಂದರ್ಯದ ಬಗ್ಗೆ ಆಲೋಚನೆ ಬದಲಾಗಿದೆ.
ಅನೇಕ ದೊಡ್ಡ ದೊಡ್ಡ ಕಾಸ್ಮೆಟಿಕ್ ಕಂಪನಿಗಳು ಈಗ ಬಣ್ಣ ಹೊಳಪಾಗಿಸಲು, ಕಾಂತಿ ಹೆಚ್ಚಿಸಲು ಕ್ರೀಮ್ ಗಳನ್ನು ತಯಾರಿಸಲು ಮತ್ತು ಮಾರಾಟ ಮಾಡಲು ಪ್ರಾರಂಭಿಸುತ್ತಿರುವುದು ಇದೇ ಕಾರಣಕ್ಕಾಗಿ, ಮುಖವನ್ನು ಬಿಳಿಪಾಗಿಸಲು ಮಾರುಕಟ್ಟೆಯಲ್ಲಿ ಹಲವು ಕ್ರೀಮ್ ಗಳಿವೆ. ಆದ್ರೆ ಸರಿಯಾದ ಬ್ರ್ಯಾಂಡ್ ಕ್ರೀಮ್ ಗಳನ್ನೇ ಆಯ್ಕೆ ಮಾಡಿಕೊಳ್ಳಬೇಕು. 10 ಅತ್ಯುತ್ತಮ ಮುಖವನ್ನು ಶುದ್ಧೀಕರಿಸುವ ಹಾಗೂ ಬಿಳುಪಾಗಿಸುವ ಕ್ರೀಮ್ ಗಳ ಬಗ್ಗೆ ಮಾಹಿತಿ ಇಲ್ಲಿದೆ.

ಅತ್ಯುತ್ತಮ ಫೇರ್ ನೆಸ್ ಕ್ರೀಮ್ ಗಳು….
1. ಕಾಯಾ ಸ್ಕಿನ್ ಕ್ಲಿನಿಕ್ ಪಿಗ್ಮೆಂಟೇಶನ್ ರಿಡ್ಯೂಸಿಂಗ್ ಕಾಂಪ್ಲೆಕ್ಸ್ …
ಕಾಯಾ ಸ್ಕಿನ್ ಕ್ಲಿನಿಕ್ ಬಗ್ಗೆ ಈಗಾಗಲೇ ನಿಮ್ಗೆ ಗೊತ್ತಿರಬಹುದು. ಸೌಂದರ್ಯ ಮತ್ತು ತ್ವಚೆಯ ಕ್ಷೇತ್ರದಲ್ಲಿ ಪ್ರಸಿದ್ಧ ಪಡೆದಿರುವ ಕಂಪನಿ. ಈ ಕ್ರೀಮ್ ಡಾರ್ಕ್ ಸರ್ಕಲ್ ಗಳನ್ನು , ಸುಕ್ಕು, ಮತ್ತು ಕಲೆಗಳನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಿಮ್ಮ ಮುಖದ ಹಾಗೂ ಮೈಬಣ್ಣ ಹೆಚ್ಚಿಸುತ್ತದೆ.
ಅನುಕೂಲ
ಈ ಕ್ರೀಮ್ ತೇವಾಂಶವನ್ನು ಉಳಿಸಿ, ನಿಮ್ಮ ಚರ್ಮವನ್ನು ಒಣಗದಂತೆ ರಕ್ಷಿಸುತ್ತದೆ. ಮೊಡವೆ ಕಲೆಗಳನ್ನು ಕಡಿಮೆ ಮಾಡುತ್ತದೆ.
ಅನಾನುಕೂಲ
ಈ ಕ್ರೀಮ್ ಬೆಲೆ ಇತರ ಕ್ರೀಮ್ ಗಳ ಬೆಲೆಗಿಂತ ಸ್ವಲ್ಪ ಹೆಚ್ಚಾಗಿದೆ. ಎಲ್ಲಾ ರೀತಿಯ ಸ್ಕಿನ್ ಹೊಂದಿರುವ ಜನರು ಈ ಕ್ರೀಮ್ ನ್ನು ಬಳಕೆ ಮಾಡಬಹುದಾಗಿದೆ.

2 ಓಲೇ ವೈಟ್ ರೇಡಿಯನ್ಸ್ ಅಡ್ವಾನ್ಸ್ ಫೇರ್ ನೆಸ್ ಬ್ರೈಟನಿಂಗ್ ಇಂಟೆನ್ಸಿವ್ ಕ್ರೀಮ್
ಓಲೇ ಬ್ರ್ಯಾಂಡ್ ನ ಉತ್ಪನ್ನಗಳು ಇತ್ತೀಚೆಗೆ ಹೆಚ್ಚು ಉಪಯುಕ್ತವಾಗುತ್ತಿವೆ. ಮುಖದ ಸೌಂದರ್ಯವನ್ನು ಹೆಚ್ಚಿಸಲು, ಓಲೆ ವೈಟ್ ರೇಡಿಯನ್ಸ್ ಕ್ರೀಮ್ ಸಹ ಉತ್ತಮ ಪರಿಣಾಮಕಾರಿ ಕ್ರೀಮ್ ಆಗಿದೆ. ಇದು ಚರ್ಮವನ್ನು ಸೂರ್ಯನ ಹಾನಿಕಾರಕ ಕಿರಣಗಳಿಂದ ರಕ್ಷಿಸುತ್ತದೆ. ನಿಮ್ಮ ಮುಖದ ಹೊಳಪನ್ನು ಹೆಚ್ಚಿಸುತ್ತದೆ. ಮಾತ್ರವಲ್ಲ ಇದು ದೀರ್ಘಕಾಲದವರೆಗೂ ಇರುತ್ತದೆ. ಮುಖದ ಕಲೆಗಳನ್ನು ಕಡಿಮೆ ಮಾಡುತ್ತದೆ.
ಅನುಕೂಲ
ಈ ಕ್ರೀಮ್ ನಲ್ಲಿರುವ ಎಸ್ ಪಿಎಪ್ -24 ನಿಮ್ಮ ಚರ್ಮವನ್ನು ಹಾನಿಕಾರಕ ಕಿರಣಗಳಿಂದ ರಕ್ಷಿಸುತ್ತದ. ಇದು ಮುಖದ ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ.
ಅನಾನುಕೂಲ
ರೀತಿಯ ನೈಸರ್ಗಿಕ ಪದಾರ್ಥಗಳನ್ನು ಇದು ಹೊಂದಿಲ್ಲ. ಈ ಕ್ರೀಮ್ ಬೇಸಿಗೆಯಲ್ಲಿ ಚರ್ಮವನ್ನು ಜಿಗುಟಾಗಿಸಬಹುದು. ಈ ಕ್ರೀಮ್ ಎಲ್ಲಾ ರೀತಿಯ ಚರ್ಮಕ್ಕೆ ಸಹಕಾರಿ.

3. ಲ್ಯಾಕ್ಮಿ ಪರ್ಫೆಕ್ಟ್ ಫೇರ್ ನೆಸ್ ಡೇ ಕ್ರೀಮ್
ಲ್ಯಾಕ್ಮಿ ಕಾಸ್ಮೆಟಿಕ್ ಜಗತ್ತಿನಲ್ಲಿ ಹಳೆಯ ಹಾಗೂ ವಿಶ್ವಾಸಾರ್ಹ ಬ್ರ್ಯಾಂಡ್ ಗಳಲ್ಲಿ ಒಂದು. ಈ ಕಂಪನಿ ತಯಾರಿಸಿದ ಸನ್ ಸ್ಕ್ರೀನ್ ಮತ್ತು ಕೋಲ್ಡ್ ಕ್ರೀಮ್ ಉತ್ತಮವೆಂದು ಪರಿಗಣಿಸಲಾಗಿದೆ. ಲ್ಯಾಕ್ಮಿ ಫರ್ಪೆಕ್ಟ್ ಫೆರ್ ನೆಸ್ ಕ್ರೀಮ್ ಯಶಸ್ವಿ ಉತ್ಪನ್ನಗಳ ಪಟ್ಟಿಗೆ ಇದನ್ನು ಸೇರಿಸಲಾಗಿದೆ. ಈ ಕ್ರೀಮ್ ಮುಖದ ಹೊಳಪನ್ನು ಹೆಚ್ಚಿಸುವುದಲ್ಲದೇ, ಕಲೆಗಳನ್ನು ನಿವಾರಿಸುತ್ತದೆ. ಚರ್ಮದ ತೇವಾಂಶವನ್ನು ಉಳಿಸಿಕೊಳ್ಳಲು ನೆರವಾಗುತ್ತದೆ.
ಅನುಕೂಲ
ಇದು ಮುಖದ ಮೇಲಿನ ಕಲೆಗಳನ್ನು ಕಡಿಮೆ ಮಾಡುತ್ತದೆ.
ಈ ಕ್ರೀಮ್ ಸನ್ ಸ್ಕ್ರೀನ್ ನಂತೆ ಕಾರ್ಯನಿರ್ವಹಿಸುತ್ತದೆ.
ಅನಾನೂಕೂಲ
ಈ ಕ್ರೀಮ್ ಹಚ್ಚಿಕೊಂಡರೆ ಮುಖದ ಹೊಳಪು ಸ್ವಲ್ಪ ಸಮಯದವರೆಗೆ ಮಾತ್ರ ಇರುತ್ತದೆ. ಇದನ್ನು ಹೆಚ್ಚಾಗಿ ಹಚ್ಚಿದರೆ, ಮುಖದ ಮೇಲೆ ಬಿಳಿ ಪದರದಂತೆ ಕಾಣಬಹುದು. ಎಲ್ಲಾ ರೀತಿಯ ಚರ್ಮಕ್ಕೆ ಇದನ್ನು ಉಪಯೋಗಿಸಬಹುದು.

4 . ಲೋಟಸ್ ಹರ್ಬಲ್ ವೈಟ್ ಗ್ಲೋ ಸ್ಕಿನ್ ವೈಟನಿಂಗ್, ಬ್ರೈಟನಿಂಗ್
ಲೋಟಸ್ ಹರ್ಬಲ್ ವೈಟ್ ಗ್ಲೋ ಕ್ರೀಮ್ ಮುಖದ ಸೌಂದರ್ಯವನ್ನು ಹೆಚ್ಚಿಸಲು ಅನೇಕ ಗುಣಗಳನ್ನು ಪಡೆದಿದೆ. ಲೋಟಸ್ ಕಂಪನಿ ತಯಾರಿಸಿರುವ ಈ ಕ್ರೀಮ್ , ಮುಖದ ಬಣ್ಣವನ್ನು ಹೆಚ್ಚಿಸುತ್ತದೆ. ಸೂರ್ಯನ ಹಾನಿಕಾರಕ ಕಿರಣಗಳಿಂದ ಚರ್ಮವನ್ನು ರಕ್ಷಿಸುತ್ತದೆ. ಅಲ್ಲದೇ, ನಿಮ್ಮ ಮುಖವನ್ನು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ.
ಅನುಕೂಲ
ಈ ಕ್ರೀಮ್ ಪ್ಯಾರಾಬೆನ್ ಎಂಬ ರಾಸಾಯನಿಕವನ್ನು ಹೊಂದಿರುತ್ತದೆ. ಅಷ್ಟು ಎಫೆಕ್ಟಿವ್ ಆಗಿ ಪರಿಣಾಮ ಉಂಟು ಮಾಡುವುದಿಲ್ಲಯ ಎಲ್ಲಾ ರೀತಿ ಚರ್ಮಕ್ಕೆ ಇದನ್ನು ಹಚ್ಚಬಹುದು.
5. ಫೇರ್ & ಲವ್ಲಿ ಅಡ್ವಾನ್ಸ್ ಮಲ್ಡಿ ವಿಟಮಿನ್ ಫೆರ್ ನೆಸ್ ಕ್ರೀಮ್
ಫೇರ್ ಆಂಡ್ ಲವ್ಲಿ ಪ್ರೊಡೆಕ್ಟ್ ಗಳು ಭಾರತದಾಂದ್ಯತ ಹೆಚ್ಚು ಜನಪ್ರಿಯ ಪಡೆದುಕೊಂಡಿವೆ. ನಗರಗಳಲ್ಲಿ, ಹಳ್ಳಿಗಳಲ್ಲಿ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಫೇರ್ ಆಂಡ್ ಲವ್ಲಿಯನ್ನು ವ್ಯಾಪಕವಾಗಿ ಬಳಸಲಾಗುತ್ತದೆ.
6. ಕ್ಲೀನ್ ಆಂಡ್ ಕ್ಲಿಯರ್ ಫೆರ ನೆಸ್ ಕ್ರೀಮ್
ಚರ್ಮವನ್ನು ಹೊಳೆಯುವಂತೆ ಮಾಡಲು ಇದು ಸಹಾಯಕಾರಿ. ಸೂರ್ಯನ ಹಾನಿಕಾರಕ ಕಿರಣಗಳಿಂದ ಇದು ಚರ್ಮವನ್ನು ರಕ್ಷಿಸುತ್ತದೆ. ಕ್ಲೀನ್ ಆಂಡ್ ಕ್ಲಿಯರ್ ಕಂಪನಿ ಕ್ರೀಮ್ ಜತೆಗೆ ನ್ಯಾಯಯುತ ಪ್ರಮಾಣ ಸಹ ನೀಡುತ್ತದೆ. ಇದು ಮುಖದ ಹೊಳಪನ್ನು ಹೆಚ್ಚಿಸುತ್ತದೆ.