ಇತ್ತೀಚಿನ ದಿನಗಳಲ್ಲಿ ನೈಸರ್ಗಿಕವಾಗಿ ಕೂದಲನ್ನು ಕಾಪಾಡಿಕೊಳ್ಳಬಹುದು. ಅದರಲ್ಲೂ ನೈಸರ್ಗಿಕ, ಕೂದಲಿಗೆ ಒಳ್ಳೆಯದು ಎಂದು ಹೇಳುವ ಸಾಕಷ್ಟು ಶ್ಯಾಂಪುಗಳನ್ನು ಕಂಡು ಹಿಡಿಯುವುದು ಸುಲಭದ ಮಾತಲ್ಲ. ಇವೆಲ್ಲವುಗಳಿಂದ ಉತ್ತಮ ಫಲಿತಾಂಶ ನೀಡುವುದಿಲ್ಲ. ತೆಂಗಿನ ಎಣ್ಣೆ ಶ್ಯಾಂಪುಗಳು ಇತ್ತೀಚಿನ ದಿನಗಳಲ್ಲಿ ಉತ್ತಮ ಫಲಿತಾಂಶವನ್ನು ನೀಡುತ್ತಿದ್ದು, ಸಾಕಷ್ಟು ಜನಪ್ರಿಯತೆಯನ್ನು ಗಳಿಸಿವೆ. ಒಣ ನೆತ್ತಿ, ತಲೆಹೊಟ್ಟು, ತುರಿಕೆ, ಕೂದಲು ಉದರುವಿಕೆ ಹೀಗೆ ಹಲವು ಕೂದಲಿನ ಸಮಸ್ಯೆಗಳಿಗೆ ತೆಂಗಿನ ಎಣ್ಣೆಯ ಶ್ಯಾಂಪುಗಳು ಅದ್ಭುತವಾಗಿ ಕೆಲಸ ಮಾಡುತ್ತವೆ. ತೆಂಗಿನ ಎಣ್ಣೆಯಲ್ಲಿ ಜೀವಸತ್ವಗಳು ಹಾಗೂ ಕಬ್ಬಿಣ ಸಮೃದ್ಧವಾಗಿರುವುದರಿಂದ ಈ ಶ್ಯಾಂಪುಗಳು ನಿಮ್ಮ ಕೂದಲನ್ನು ಗಟ್ಟಿಯಾಗಿ, ಆರೋಗ್ಯಕರವಾಗಿ ಮತ್ತು ಹೊಳೆಯುವಂತೆ ಮಾಡುತ್ತದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯುತ್ತಮ ತೆಂಗಿನ ಎಣ್ಣೆಯಿಂದ ಕೂಡಿದ ಶ್ಯಾಂಪುಗಳು.

ಓಜಿಎಕ್ಸ್ ಎಕ್ಸ್ಟಾ ಸ್ಟ್ರೆಂಥ್ ರೆಮಿಡಿ ಮತ್ತು ತೆಂಗಿನ ಎಣ್ಣೆ ತೈಲ ಶ್ಯಾಂಪು (OGX Extra Coconut Miracle Oil Shampoo)
ನಿಮ್ಮ ಹಾನಿಗೊಳಗಾದ ಕೂದಲಿಗೆ , ಸೂಪರ್ ಹೈಡ್ರೇಟಿಂಗ್ ಮತ್ತು ಡ್ಯಾಮೇಜ್ ರಿಪೇರಿ ತೆಂಗಿನ ಎಣ್ಣೆ ಶಾಂಪೂನಲ್ಲಿದೆ. ಈ ಶ್ಯಾಂಪು ಜಿಗುಟಾಗುವುದಿಲ್ಲ. ಈ ಶ್ಯಾಂಪುವನ್ನು ನೀವು ಪ್ರಯತ್ನಿಸಹುದು. ನಿಯಮಿತ ಬಳಕೆಯು ಕೂದಲು ಒಡೆಯುವುದು ಮತ್ತು ತೆಳುವಾಗುವುದನ್ನು ಕಡಿಮೆ ಮಾಡುತ್ತದೆ.
ಮಾಯ್ಯಿ ಮಾಯಿಶ್ಚೈರಸರ್ ಕರ್ಲ್ ಕ್ವಿಂಚ್ ಹಾಗೂ ತೆಂಗಿನ ಶ್ಯಾಂಪು
(Maui Moisture Curl Quench + Coconut Oil Shampoo)
ಈ ಶ್ಯಾಂಪು ನಿಮ್ಮ ಕೂದಲಿನ ತೇವಾಂಶವನ್ನು ಕಾಪಾಡುತ್ತದೆ. ಅಲೋವೆರಾ ಅಂಶಗಳನ್ನು ಹೊಂದಿರುವ ಈ ಶ್ಯಾಂಪು ನಿಮ್ಮ ನೆತ್ತಿಯ ಪಿಹೆಚ್ ಸಮತೋಲನವನ್ನು ಕಾಪಾಡುತ್ತದೆ. ಹಾಗೂ ಹೈಡ್ರೀಕರಿಸಲು ಸಹಾಯ ಮಾಡುತ್ತದೆ. ಕೂದಲಿಗೆ ನೈಸರ್ಗಿಕ ಹೊಳಪನ್ನು ನೀಡುತ್ತದೆ.
ಪಾಮರ್ ನ ತೆಂಗಿನ ಎಣ್ಣೆ ಫಾರ್ಮುಲಾ ಕಂಡೀಷನಿಂಗ್ ಶಾಂಪು
(Palmer’s Coconut Oil Formula Conditioning Shampoo)
ಈ ಶಾಂಪು ಕೂದಲನ್ನು ಬಲಪಡಿಸುವುದಲ್ಲದೇ, ಒಣ ನೆತ್ತಿಯನ್ನು ತಡೆಗಟ್ಟುತ್ತದೆ. ನಿಮ್ಮ ಕೂದಲಿನ ಹೊಳಪನ್ನು ಹೆಚ್ಚಿಸುತ್ತದೆ. ಹಾನಿಗೊಳಗಾದ ಕೂದಲನ್ನು ಹೈಡ್ರೇಟ್ ಮಾಡುತ್ತದೆ. ಆದ್ದರಿಂದ ಕೂದಲಿನ ಜಿಡ್ಡು ಹಾಗೂ ಮಂದವಾಗುತ್ತಿದೆ ಎಂದು ಭಾವಿಸಿದಾಗಲೆಲ್ಲಾ, ಈ ತೆಂಗಿನ ಎಣ್ಣೆ ಶ್ಯಾಂಪು ಬಳಸಬಹುದು. ಮತ್ತು ಹೊಳಪನ್ನು ಹೆಚ್ಚಿಸಿಕೊಳ್ಳಬಹುದು.

ಎಸೆನ್ಸ್ ತೆಂಗಿನ ಎಣ್ಣೆ ಶಾಂಪು
(Desert Essence Coconut Shampoo)
ಈ ಶ್ಯಾಂಪು ನಿಮ್ಮ ಕೂದಲಿಗೆ ಹೆಚ್ಚು ಹೊಳಪು. ಮೃದುತ್ವ ಮತ್ತು ಪೋಷಣೆಯನ್ನು ನೀಡುತ್ತದೆ. ಆಲಿವ್ ಹಾಗೂ ಜೊಜೊಬಾ ಎಣ್ಣೆಗಳ ಅದ್ಧುತ ಸಂಯೋಜನೆಯನ್ನು ಇದು ಒಳಗೊಂಡಿದೆ. ಶಿಯಾ ಬೆಣ್ಣೆ ಹಾಗೂ ರೋಸ್ಮರಿ ಎಲೆಗಳ ಸಾರಗಳಂತಹ ನೈಸರ್ಗಿಕ ಪದಾರ್ಥಗಳೊಂದಿಗೆ ಇದನ್ನು ತಯಾರಿಸಲಾಗಿದೆ.
ಕ್ರೀಮಿ ತೆಂಗಿನ ಎಣ್ಣೆ ಶಾಂಪು
(Creamy Coconut Oil Shampoo)
ದೈನಂದಿನ ಬಳಕೆಗೆ ಇದು ಅದ್ಭುತವಾಗಿದೆ. ಈ ಶಾಂಪು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ಕೂದಲು ಉದರುವಿಕೆಯನ್ನು ನಿಯಂತ್ರಿಸುತ್ತದೆ. ತುರಿಕೆ , ಶುಷ್ಕತೆ ಮುಂತಾದ ಸಮಸ್ಯೆಗಳನ್ನು ನಿಯಂತ್ರಿಸುತ್ತದೆ. ನಿಮ್ಮ ತಲೆ ಬುಡವನ್ನು ಹೈಡ್ರೇಟ್ ಮಾಡುತ್ತದೆ. ಆರೋಗ್ಯಕರ ಕೂದಲು ಪಡೆಯಲು ನೆರವಾಗುತ್ತದೆ.

ಆರ್ಗೆನಿಕ್ ಡಾಕ್ಟರ್ ವರ್ಜಿನ್ ತೆಂಗಿನ ಎಣ್ಣೆ
(Organic Doctor Organic Virgin Coconut Oil Shampoo)
ಈ ತೆಂಗಿನ ಎಣ್ಣೆ ಶಾಂಪು ನಿಮ್ಮ ಕೂದಲಿನ ಹೊಳಪನ್ನು ಹೆಚ್ಚಿಸುತ್ತದೆ. ಆರೋಗ್ಯಕರವಾಗಿ ಕಾಣುವಂತೆ ಮಾಡುತ್ತದೆ. ಈ ಶಾಂಪು ನಿಮ್ಮ ಕೂದಲಿನ ಬುಡವನ್ನು ಹೈಡ್ರೇಟ್ ಮಾಡುವುದಲ್ಲದೇ, ಕೂದಲು ಉದರುವಿಕೆ ಸಮಸ್ಯೆಯನ್ನು ತಡೆಗಟ್ಟುತ್ತದೆ. ನೀವು ಯಾವುದೇ ಪ್ರಕಾರದ ಅಲರ್ಜಿಯನ್ನು ಹೊಂದಿದ್ದರೆ ಇದನ್ನು ಉಪಯೋಗಿಸಬೇಡಿ. ತಡೆಹೊಟ್ಟು ಮುಂತಾದ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.
ಶಿಯಾ ಮಾಯಿಶ್ಚರೈಸರ್ 100 ಪರ್ಸೆಂಟ್ ವರ್ಜಿನ್ ತೆಂಗಿನ ಎಣ್ಣೆ ಶಾಂಪು
(Shea Moisture 100% Virgin Coconut Oil Daily Hydration Shampoo)
ಈ ಶಾಂಪು ಡೀಪ್ ಕಂಡೀಷನಿಂಗ್ ನೀಡುವುದಲ್ಲದೇ, ಇದು ಕೂದಲಿನ ಕಲ್ಮಶವನ್ನು ತೆಗೆದು ಹಾಕುತ್ತದೆ. ಕೂದಲನ್ನು ನಿಧಾನವಾಗಿ ಹೈಡ್ರೇಟ್ ಮಾಡುತ್ತದೆ. ಸಲ್ಫೇಟ್ ರಹಿತ ಶಾಂಪು ಇದಾಗಿದ್ದು, ಇದು ನೈಸರ್ಗಿಕ ಹೊಳಪನ್ನು ಹೆಚ್ಚಿಸುತ್ತದೆ. ನಿಮ್ಮ ಕೂದಲನ್ನು ಮೃದುವಾಗಿ ಮಾಡುತ್ತದೆ.
ಸಲ್ಫೇಟ್ ಫ್ರೀ ಕೊಕೋನೇಟ್ ಆಯಿಲ್ ಶಾಂಪು..
(Proclaim Anti-Breakage Sulphate-Free Coconut Oil Shampoo)
ನಿಮ್ಮ ಹಾನಿಗೊಳಗಾದ ಕೂದಲನ್ನು ಪುನಶ್ಚೇತನಗೊಳಿಸಲು ಸಹಾಯ ಮಾಡುತ್ತದೆ. ನಿಮ್ಮ ಕೂದಲಿಗೆ ಆಳವಾದ ಕಂಡೀಷನಿಂಗ್ ನೀಡುತ್ತದೆ. ಮತ್ತು ಕೂದಲನ್ನು ಆರೋಗ್ಯಕರವಾಗಿರಿಸುತ್ತದೆ.