ಯಂಗ್ ಆಗಿ ಕಾಣಲು ಫೇಶಿಯಲ್ ಯೋಗ..! – (Best Anti Aging Facial exercises..)

  • by

ಯೋಗಾ ಈಗಾಗಲೇ ಅನೇಕರಿಗೆ ತಿಳಿದಿರುವಂತೆ ನಿಮ್ಮ ಮುಖದ ಸ್ನಾಯುಗಳನ್ನು ಟೋನ್ ಮಾಡುವ ಮಾರ್ಗವಾಗಿದೆ. ಮನಸ್ಸು ಹಾಗೂ ದೇಹದ ನಡುವಿನ ಏಕತೆಯನ್ನು ಯೋಗಾ ಸಾಕಾರಗೊಳಿಸುತ್ತದೆ. ಫೇಶಿಯಲ್ ಯೋಗವನ್ನು ಮುಖದ ಸ್ನಾಯುಗಳನ್ನು ಬಳಸಿ ಮಾಡಲಾಗುತ್ತದೆ. ಇದು ತ್ವಚೆಯನ್ನು ಪುನಶ್ಚೇತನಗೊಳಿಸಲು ಸಹಾಯ ಮಾಡುತ್ತದೆ. ನಮ್ಮ ದಿನ ನಿತ್ಯದ ಜೀವನದಲ್ಲಿ ಯೋಗದ ಮಹತ್ವವನ್ನು ನಾವು ಅರಿತಿದ್ದೇವೆ. ಯೋಗ ವಿಶ್ವದ ಅನೇಕ ಭಾಗಗಳಲ್ಲಿ ವಿಶೇಷ ಮಹತ್ವ ಪಡೆದುಕೊಂಡಿದೆ. ಈಗಾಗ್ಲೇ ಅನೇಕರಿಗೆ ತಿಳಿದಿರುವಂತೆ ಯೋಗ ಮನಸ್ಸು, ದೇಹ, ಹಾಗೂ ಚಿಂತನೆ ಮತ್ತು ಕ್ರಿಯೆಯ ನಡುವಿನ ಏಕತೆಯನ್ನು ಸಾಕಾರಗೊಳಿಸುತ್ತದೆ. ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಾಮರಸ್ಯವನ್ನು ಸಂಕೇತಿಸುತ್ತದೆ. ಫೇಶಿಯಲ್ ಯೋಗ ಮುಖದ ಸ್ನಾಯುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.


Facial exercises, benefits,ಫೇಶಿಯಲ್ ಯೋಗಾ, ಆರೋಗ್ಯ ಪ್ರಯೋಜನಗಳು

ಫೇಶಿಯಲ್ ಯೋಗ ಎಂದರೇನು…?


ಪೇಶಿಯಲ್ ಯೋಗವು ನೈಸರ್ಗಿಕವಾಗಿ ನಿಮ್ಮನ್ನು ಸುಂದರವಾಗಿಸುತ್ತದೆ. ಅಕಾಲಿಕ ವಯಸ್ಸಾಗುವಿಕೆಯನ್ನು ಇತ್ತೀಚಿನ ದಿನಗಳಲ್ಲಿ ಅನೇಕರು ಎದುರಿಸುತ್ತಿದ್ದಾರೆ. ತ್ವಚೆಯ ವಯಸ್ಸಾಗುವಿಕೆಯನ್ನು ತಡೆಗಳಲ್ಲೂ ಮಾರ್ಕೆಟ್ ನಲ್ಲಿ ಸೀಗುವ ಕ್ರೀಮ್ ಗಳ ಮೊರ ಹೋಗುವುದನ್ನು ನೋಡುತ್ತಿರುತ್ತೇವೆ. ಆದರೆ ಮನೆಯಲ್ಲೇ ಈ ಯೋಗಾ ಮಾಡುವುದರಿಂದ ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳಬಹುದು. ಫೇಶಿಯಲ್ ಯೋಗವು ನಿಮ್ಮ ಮುಖದ ಸ್ನಾಯುಗಳನ್ನು ಬಿಗಿಯಾಗಿ, ಪುನರ್ಯೌವನಗೊಳಿಸುತ್ತದೆ. ಹೊಸದಾಗಿ, ವಯಸ್ಸಾಗುವಿಕೆಯನ್ನು ತಡೆಗಟ್ಟುತ್ತದೆ. ಮುಖದ ಸ್ನಾಯುಗಳಿಗೆ ಆಮ್ಲಜನಕವನ್ನು ನೀಡುವ ಮೂಲಕ ನೆರವಾಗುತ್ತದೆ. ಪ್ರತಿ ದಿನ ಸುಮಾರು 10 ನಿಮಿಷಗಳ ಕಾಲ ಈ ಯೋಗ ಅಭ್ಯಾಸ ಮಾಡುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಫೇಶಿಯಲ್ ಯೋಗ ಪ್ರಯೋಜನಗಳು
ಫೇಶಿಯಲ್ ಯೋಗದಿಂದ ಅನೇಕ ಪ್ರಯೋಜನಗಳನ್ನು ಕಾಣಬಹುದಾಗಿದೆ.

ವಯಸ್ಸಾಗುವಿಕೆಯನ್ನು ತಡೆಗಟ್ಟುತ್ತದೆ.

ಇತ್ತೀಚಿನ ದಿನಗಳಲ್ಲಿ ಮುಖದಲ್ಲಿ ನೆರಿಗೆ ಹಾಗೂ ಸುಕ್ಕುಗಳ ಸಮಸ್ಯೆಯನ್ನು ಅನೇಕ ಮಹಿಳೆಯರು ಎದುರಿಸುತ್ತಿರುತ್ತಾರೆ. ನಿಮ್ಮ ವಯಸ್ಸಾಗುವಿಕೆಯನ್ನು ತಡೆಗಟ್ಟಲು ಫೇಶಿಯಲ್ ವ್ಯಾಯಾಮ ಮಾಡಬಹುದು. ಇದು ತ್ವಚೆಯ ನೇರಿಗೆಯನ್ನು ನಿವಾರಿಸುವುದಲ್ಲದೇ, ಚರ್ಮದ ಆರೋಗ್ಯ ಕಾಪಾಡುತ್ತದೆ.


Facial exercises, benefits,ಫೇಶಿಯಲ್ ಯೋಗಾ, ಆರೋಗ್ಯ ಪ್ರಯೋಜನಗಳು

ಶಾಂತಗೊಳಿಸಲು ಯೋಗ

ಈ ಯೋಗವು ನಿಮ್ಮನ್ನು ಶಾಂತಗೊಳಿಸುತ್ತದೆ. ಅನಿಯಮಿತ ಜೀವನಶೈಲಿಯಿಂದಾಗಿ ಒಂದೇ ಸ್ಥಳದಲ್ಲಿ 8 ಗಂಟೆಗಳ ಕಾಲ ಕುಳಿತುಕೊಂಡು ಕೆಲಸ ಮಾಡುವವರು ಬೆನ್ನುಹುರಿ, ಕುತ್ತಿಗೆ, ಸ್ನಾಯುಗಳ ಸಮಸ್ಯೆ ಎದುರಿಸುತ್ತಿರುತ್ತಾರೆ. ಫೇಶಿಯಲ್ ಯೋಗವು ಈ ಭಾಗಗಳಲ್ಲಿ ಉದ್ವೇಗವನ್ನು ಕಡಿಮೆ ಮಾಡುತ್ತದೆ. ಮತ್ತು ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ.

ಕೊಬ್ಬನ್ನು ನಿವಾರಿಸುತ್ತದೆ

ಫೇಶಿಯಲ್ ಯೋಗವು ಗಲ್ಲದ ಮೇಲಿನ ಕೊಬ್ಬನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಫೇಶಿಯಲ್ ಯೋಗದಿಂದ ನೈಸರ್ಗಿಕ ಸೌಂದರ್ಯ ನಿಮ್ಮದಾಗಿಸಿಕೊಳ್ಳಬಹುದು. ನೈಸರ್ಗಿಕವಾಗಿ ಹೊಳೆಯುವ ಚರ್ಮ ಹಾಗೂ ಮುಖದ ಸ್ನಾಯುಗಳ ಆರೋಗ್ಯವನ್ನು ಕಾಪಾಡಬಹುದು.

ಫೇಶಿಯಲ್ ಯೋಗಗಳು

ಫಿಶ್ ಭಂಗಿ

ಇದು ಮೀನಿನ ಆಕಾರದ ಭಂಗಿಯಾಗಿದೆ. ಮುಖದ ಕೆನ್ನೆಯ ಸ್ನಾಯುಗಳನ್ನು ಬಿಗಿಗೊಳಿಸಲು ಸಹಾಯ ಮಾಡುತ್ತದೆ. ಮುಖದ ಕುಗ್ಗುವಿಕೆಯನ್ನು ತಪ್ಪಿಸುತ್ತದೆ. ನಿಮ್ಮ ಕೆನ್ನೆಯ ಒಳಭಾಗವನ್ನು ಹೀರುವ ಮೂಲಕ ಮೀನಿನ ಮುಖವನ್ನು ರಚಿಸುವುದಾಗಿದೆ

ಕಣ್ಣುಗಳನ್ನು ತಿರುಗಿಸುವ ಭಂಗಿ 2 ತೋರು ಬೆರಳನ್ನು ಹುಬ್ಬಿನ ಮೂಲೆಯಲ್ಲಿ ಇಟ್ಟುಕೊಳ್ಳಿ. ಮತ್ತು ಹುಬ್ಬನ್ನ ನಿಧಾನವಾಗಿ ಒತ್ತುತ್ತಾ ಸಾಗಿ, ಕಣ್ಣುಗಳ ಸುತ್ತವು ಪ್ರೆಸ್ ಮಾಡಿ. ಇದರ ವಿರುದ್ಧ ದಿಕ್ಕಿನಲ್ಲೂ ಇದನ್ನು ಪುನರಾವರ್ತಿಸಿ. ಮೂಗು ಮತ್ತು ಕಣ್ಣುಗಳ ಕೆಳಗೂ ಮಾಡಿ. ಇದನ್ನು ನಾಲ್ಕು ಬಾರಿ ಪುನರಾವರ್ತಿಸಿ.

ಕೆನ್ನೆಯ ಬಲೂನ್

ಉಸಿರಾಟ ನಡೆಸಿ ನಿಮ್ಮ ಬಾಯಿಯನ್ನು ಮುಚ್ಚಿಕೊಳ್ಳಿ. ಬಲೂನ್ ನಂತೆ ನಿಮ್ಮ ಕೆನ್ನೆಗಳನ್ನು ಮಾಡಿ. ಇದನ್ನು 5 ಸಲ
ಪುನರಾವರ್ತನೆ ಮಾಡಬಹುದು. ಇದು ನಿಮ್ಮ ಕೆನ್ನೆಗಳನ್ನು ಆರೋಗ್ಯಯುತವಾಗಿ ಸರಿಯಾದ ಆಕಾರ ಹೊಂದಲು ನೆರವಾಗುತ್ತದೆ.

ನಮ್ಮ Spark.Live ಎಕ್ಸ್ ಪರ್ಟ್, ಯೋಗ ಶಿಕ್ಷಕಿ ರಶ್ಮಿ ಅವರೊಂದಿಗೆ ಸಮಗ್ರ ಆರೋಗ್ಯದ ಬಗ್ಗೆ ಮಾಹಿತಿ, ಸಲಹೆ ಪಡೆಯಿರಿ. ಪ್ರತಿದಿನ: ವಾರದ ದಿನಗಳು ಮಾತ್ರ, ಬೆಳಿಗ್ಗೆ 10 ರಿಂದ ಮಧ್ಯಾಹ್ನ 12 ಗಂಟೆಯವರೆಗೆ, ಸಂಜೆ 6ರಿಂದ 7ಗಂಟೆಯವರೆಗೆ ರಶ್ಮಿಯವರನ್ನು ಸಂಪರ್ಕಿಸಬಹುದು. Spark.Live.ನಲ್ಲಿ ಸೆಷನ್ ಬುಕ್ ಮಾಡಿ, ಅವರ ಜತೆ ಮಾತನಾಡಬಹುದು.

ಎಕ್ಸ್ ಪರ್ಟ್ ಬಗ್ಗೆ ಪರಿಚಯ
ರಶ್ಮಿ
ಫಿಟ್ನೆಸ್ ಹಾಗೂ ಯೋಗ ಶಿಕ್ಷಕಿ

Facial exercises, benefits,ಫೇಶಿಯಲ್ ಯೋಗಾ, ಆರೋಗ್ಯ ಪ್ರಯೋಜನಗಳು

ರಶ್ಮಿಯವರು ಯೋಗ ವಿಜ್ಞಾನ ಮತ್ತು ಮಾನವ ಪ್ರಜ್ಞೆ ಎಂಬ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರು ಯೋಗ ಶಿಕ್ಷಕಿಯಾಗಿದ್ದಾರೆ. ಕಳೆದ 15 ವರ್ಷಗಳಿಂದ ಆಸಕ್ತರಿಗೆ ಯೋಗ ಹೇಳಿ ಕೊಡುತ್ತಿದ್ದಾರೆ. ಯಾರೇ ಆಸಕ್ತರಿದ್ದರು ಅವರಿಗೆ ಫಿಟ್ನೆಸ್ ಕಾಪಾಡಿಕೊಳ್ಳುವುದು ಹಾಗೂ ಯಾವುದೇ ತರಹದ ಆರೋಗ್ಯ ಸಮಸ್ಯೆಗೆ ಯೋಗ ಮತ್ತು ಆಹಾರದ ಮೂಲಕ ಸೂಕ್ತ ಮಾರ್ಗದರ್ಶನ ನೀಡುತ್ತಾರೆ. ಹಲವಾರು ವರ್ಷಗಳ ಸೇವೆಯನ್ನು ಗುರುತಿಸಿ ಒಂದು ಸಂಸ್ಥೆಯಿಂದ ಇವರಿಗೆ ರಾಜೀವ್ ಗಾಂಧಿ ಏಕತಾ ಪ್ರಶಸ್ತಿಗೆ ಆಯ್ಕೆ ಮಾಡಿ ಇವರನ್ನು ಹುರಿದುಂಬಿ ಸಿದ್ದಾರೆ. ಪೌರ ಕಾರ್ಮಿಕರ ಆರೋಗ್ಯ ಕಾಪಾಡಲು ನಿಯಮಿತ ಯೋಗಾಭ್ಯಾಸ ಹೇಳಿಕೊಡುತ್ತಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ