ಸೌಂದರ್ಯವನ್ನು ನೈಸರ್ಗಿಕವಾಗಿ ಹೆಚ್ಚಿಸಲು ಮತ್ತು ಉತ್ತಮ ಆರೋಗ್ಯ ಕಾಪಾಡಲು ಹಸುವಿನ ದೇಸಿ ತುಪ್ಪ ಉತ್ತಮ ಆಯ್ಕೆಯಾಗಬಲ್ಲದ್ದು. ಆಯುರ್ವೇದದ ಪ್ರಕಾರ, ಔಷಧಿಗಳು ಮತ್ತು ಗಿಡ ಮೂಲಿಕೆಗಳ ತಯಾರಿಕೆಯಲ್ಲಿ ದೇಸಿ ತುಪ್ಪವನ್ನು ಬಳಸಲಾಗುತ್ತದೆ. ಹಿಂದಿನ ತಲೆ ಮಾರುಗಳಿಂದ ದೇಸಿ ತುಪ್ಪವನ್ನ ಬಳಸಲಾಗುತ್ತಿತ್ತು. ದೈನಂದಿನ ಆಹಾರದಲ್ಲಿ ದೇಸಿ ತುಪ್ಪವನ್ನು ಬಳಸುತ್ತೇವೆ. ಕೆಮ್ಮು , ಶೀತಕ್ಕೂ ದೇಸಿ ತುಪ್ಪವನ್ನು ಬಳಸಲಾಗುತ್ತದೆ. ಜನರು ದೇಸಿ ತುಪ್ಪವನ್ನು ಕೇವಲ ಆಹಾರದಲ್ಲಿ ಮಾತ್ರ ಬಳಕೆ ಮಾಡಲ್ಲ. ಕೂದಲಿನ ಹಾಗೂ ಚರ್ಮದ ಆರೋಗ್ಯ ಕಾಪಾಡಲು ಬಳಸಲಾಗುತ್ತದೆ. ಕೂದಲು ಹಾಗೂ ಚರ್ಮದ ಆರೋಗ್ಯಕ್ಕಾಗಿ ದೇಸಿ ತುಪ್ಪವನ್ನು ಹೇಗೆ ಬಳಸಬೇಕು? ಈ ಕುರಿತು ಮಾಹಿತಿ ಇಲ್ಲಿದೆ.

ದೇಸಿ ತುಪ್ಪದ ವಿಶೇಷತೆ ಏನು..?
ದೇಸಿ ತುಪ್ಪದ ಮುಖ್ಯ ವಾಗಿ ಹಸುವಿನ ತಳಿಗಳಿಂದ ಮಾತ್ರ ಪಡೆಯಲಾಗುತ್ತದೆ. ದೇಸಿ ತುಪ್ಪದಿಂದ ಮಾಡಿದ ಫೇಸ್ ಪ್ಯಾಕ್ ನಿಮ್ಮ ಮುಖವನ್ನು ಸುಧಾರಿಸುತ್ತದೆ. ಇದು ಆಯುರ್ವೇದ ಪ್ರಯೋಜನಗಳನ್ನು ಪಡೆದಿದೆ. ಶುದ್ಧ ದೇಸಿ ತುಪ್ಪದ ಪೌಷ್ಟಿಕಾಂಶ ಹಾಗೂ ಶುದ್ಧತೆ ಮೌಲ್ಯ ಅಧಿಕವಾಗಿರುತ್ತದೆ. ಗರ್ಭಾವಸ್ಥೆಯಲ್ಲಿ ಮಹಿಳೆಯರಿಗೆ ಹಾಗೂ ಮಗು ಜನನದ 6-8 ತಿಂಗಳವರೆಗೂ ಇದು ಅತ್ಯುತ್ತಮ ಆಹಾರ ಪದಾರ್ಥವಾಗಿದೆ.
ದೇಸಿ ತುಪ್ಪದ ಫೇಸ್ ಪ್ಯಾಕ್ ಮಾಡುವುದು ಹೇಗೆ?
1 ಟೀ ಸ್ಪೂನ್ ದೇಸಿ ತುಪ್ಪ ತೆಗೆದುಕೊಳ್ಳಿ.ಕಚ್ಚಾ ಹಾಲಿನ ಹನಿಗಳು, ಸ್ವಲ್ಪ ಚಿಟಿಕೆ ಅರಶಿಣ ಪುಡಿ ಸೇರಿಸಿ. ಸ್ವಲ್ಪ ಕೇಸರಿ ಮಿಶ್ರಣ ಮಾಡಿ. ನೀವು ಸ್ಕ್ರಬ್ ಮಾಡಲು ಬಯಸಿದರೆ, ಅದಕ್ಕೆ ಗ್ರಾಂ ಹಿಟ್ಟು ಮತ್ತು ರೋಸ್ ವಾಟರ್ ಸೇರಿಸಿ. ಒಂದು ಬಟ್ಟಲಿನಲ್ಲಿ ಎಲ್ಲಾ ಪದಾರ್ಥಗಳನ್ನು ಒಟ್ಟಿಗೆ ಮಿಶ್ರಣ ಮಾಡಿ. ಈ ಮಿಶ್ರಣವನ್ನು ನಿಮ್ಮ ಮುಖ ಹಾಗೂ ಕತ್ತಿನ ಮೇಲೆ ಬ್ರಷ್ ನಿಂದ ಅಥವಾ ಬೆರಳುಗಳಿಂದ ಹಚ್ಚಿ. ೧೫ ನಿಮಿಷದ ನಂತರ ಮುಖ ತೊಳೆಯಿರಿ.
ಪ್ರಯೋಜನಗಳೇನು..?
ಡಾರ್ಕ್ ಸರ್ಕಲ್ ಗಳನ್ನು ನಿವಾರಿಸುತ್ತದೆ. ನಿದ್ರೆಗೂ ಮುನ್ನ , ಈ ಫೇಸ್ ಪ್ಯಾಕ್ ನ್ನು ನಿಮ್ಮ ಮುಖಕ್ಕೆ , ವಿಶೇಷವಾಗಿ ನಿಮ್ಮ ಕಣ್ಣುಗಳ ಸುತ್ತಲು ಹಚ್ಚಿ, ತೆಳುವಾಗಿ ಹಚ್ಚಬಹುದು. ಅರ್ಧ ಗಂಟೆ ನಂತರ ಬಿಡಿ. ಕೆಲವು ದಿನಗಳವರೆಗೆ ಇದನ್ನು ನಿರಂತರವಾಗಿ ನಿಮ್ಮ ಮುಖದ ಮೇಲೆ ಹಚ್ಚುವುದರಿಂದ ಕೆಲವೇ ದಿನಗಳಲ್ಲಿ ವ್ಯತ್ಯಾಸ ಕಾಣಬಹುದು.

ಮೃದು ಚರ್ಮ
ತುಪ್ಪದಲ್ಲಿನ ಕೊಬ್ಬಿನಾಮ್ಲಗಳು ಮುಖದಲ್ಲಿ ರಕ್ತ ಸಂಚಲನವನ್ನು ಹೆಚ್ಚಿಸುತ್ತವೆ. ಸ್ನಾನ ಮಾಡುವ ಮೊದಲು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಬಹುದು. ಇದು ನಿಮಗೆ ಮೃದು ಹಾಗೂ ನಯವಾದ ಚರ್ಮವನ್ನು ನೀಡುತ್ತದೆ. ಒಣ ಚರ್ಮ ಹೊಂದಿದ್ದರೆ, ತುಪ್ಪವನ್ನು ನೀರಿನಲ್ಲಿ ಬೆರೆಸಿ ಮಸಾಜ್ ಮಾಡಿ. ಇದನ್ನು 15 ನಿಮಿಷಗಳ ನಂತರ ಬಿಟ್ಟು ನೀರಿನಿಂದ ತೊಳೆಯಿರಿ. ದೇಸಿ ತುಪ್ಪ ತಲೆಹೊಟ್ಟು ಹಾಗೂ ಕೂದಲಿನ ಬಿರುಕು ನಿವಾರಿಸುತ್ತದೆ.
ನಿಮ್ಮ ಮಂದ ಹಾಗೂ ನಿರ್ಜೀವ ಚರ್ಮವನ್ನು ಹೊಸದಾಗಿ ಪಡೆಯಲು ಫೇಸ್ ಪ್ಯಾಕ್ ಬಳಸಬಹುದು. ಈ ಮಿಶ್ರಣವನ್ನು ನಿಮ್ಮ ಮುಖ ಮತ್ತು ಕುತ್ತಿಗೆಗೆ ಹಚ್ಚಿ, 20 ನಿಮಿಷಗಳ ಬಿಟ್ಟು ತೊಳೆಯಿರಿ. ಇದರಿಂದ ಮುಖದ ಕಾಂತಿ ಹೆಚ್ಚಿಸಿಕೊಳ್ಳಬಹುದು.
ಅಕಾಲಿಕ ವಯಸ್ಸಾಗುವಿಕೆಯನ್ನು ತಡೆಗಟ್ಟಲು ದೇಸಿ ತುಪ್ಪ ಉತ್ತಮ ಆಯ್ಕೆ ಎಂದು ಹೇಳಬಹುದು. ಮುಖದ ಮೇಲೆ ತುಪ್ಪದ ಬಳಕೆ ನಿಯಮಿತವಾಗಿ ಉಪಯೋಗಿಸುವುದರಿಂದ ಚರ್ಮದ ಪದರಗಳ ಒಳಗೆ ಹೋಗಿ, ವಯಸ್ಸಾಗುವಿಕೆಯನ್ನು ತಡೆಗಟ್ಟುತ್ತದೆ. ಚರ್ಮದ ಕೋಶಗಳನ್ನು ಆರೋಗ್ಯ ಕರವಾಗಿರಿಸುವುದಲ್ಲದೇ,
ಯಂಗ್ ಆಗಿ ಕಾಣುವಂತೆ ಮಾಡುತ್ತದೆ. ಪ್ರತಿ ದಿನ ಬೆಳಿಗ್ಗೆ ಮತ್ತು ರಾತ್ರಿ ಮಲಗುವ ಮುನ್ನ ತುಪ್ಪವನ್ನು ಮುಖಕ್ಕೆ ಹಚ್ಚಿಕೊಳ್ಳಿ. ಇದರ ನಂತರ , ಸ್ವಲ್ಪ ಸಮಯ ಬಿಟ್ಟು ಮಸಾಜ್ ಮಾಡಿ.

ಕಣ್ಣುಗಳ ಆಯಾಸ ಕಡಿಮೆಯಾಗುತ್ತದೆ..!
ಈ ಸಮಸ್ಯೆಯಿಂದ ಅನೇಕ ಮಹಿಳೆಯರು ಇತ್ತೀಚಿನ ದಿನಗಳಲ್ಲಿ ತೊಂದರೆ ಗೀಡಾಗುತ್ತಾರೆ. ಏಕೆಂದರೆ ಬಹುತೇಕ ಎಲ್ಲರಿಗೂ ಹೆಚ್ಚಿನ ಕೆಲಸ, ನಿದ್ರೆ ಯ ಕೊರತೆ ಎದುರಿಸುತ್ತಾರೆ. ಆಗಾಗ್ಗೆ ಪುರುಷರು ಮತ್ತು ಮಹಿಳೆಯರು ಕಣ್ಣುಗಳ ಕಪ್ಪಾಗುವುದನ್ನು ನಿವಾರಿಸಲು ಬ್ಯೂಟಿ ಪಾರ್ಲರ್ ಗೆ ಹೋಗಿ, ಹಣವನ್ನು ಖರ್ಚು ಮಾಡುತ್ತಾರೆ. ಮುಖಕ್ಕೆ ತುಪ್ಪ ಹಚ್ಚುವುದರಿಂದ ನಿಮ್ಮ ಕಣ್ಣಿನ ಕೆಳಗಡೆ ಇರುವ ಕಪ್ಪು ಕಲೆಗಳನ್ನು ಕಡಿಮೆ ಮಾಡುತ್ತದೆ. ರಾತ್ರಿ ಮಲಗುವ ಮುನ್ನ ಕಣ್ಣು ರೆಪ್ಪೆಗಳ ಕೆಳಗೆ ಮತ್ತು ಕಣ್ಣುಗಳ ಸುತ್ತಲು ತುಪ್ಪವನ್ನು ಹಚ್ಚಿ, ಮುಖ ತೊಳೆಯಬಹುದು. ಮರು ದಿನ ಬೆಳಿಗ್ಗೆ ನೀರಿನಿಂದ ಮುಖ ತೊಳೆಯಿರಿ. ಕೆಲವು ದಿನಗಳವರೆಗೆ ಇದನ್ನು ನಿಯಮಿತವಾಗಿ ಮಾಡುವುದರಿಂದ ಹಲವು ಪ್ರಯೋಜನಗಳನ್ನು ಕಾಣಬಹುದು.