ಪ್ರೀತಿ, ಪ್ರೇಮ ಎಂಬ ಪದವನ್ನು ವ್ಯಾಖ್ಯಾನ ಮಾಡುವುದು ಕಷ್ಟ. ಪ್ರೀತಿ ಎಂಬುದು ಅನ್ಯೋನ್ಯತೆ, ಬದ್ಧತೆ ಹಾಗೂ ಭಾವೋದ್ರೇಕ ಎಂಬ ಮೂರು ವಿಭಿನ್ನ ಅಂಶಗಳನ್ನು ಒಳಗೊಂಡಿರುತ್ತದೆ ಎಂದು ಮನಶಾಸ್ತ್ರಜ್ಞ ರಾಬರ್ಟ್ ಸ್ಟೆರ್ನ್ ಬರ್ಗ್ ವರ್ಣಿಸುತ್ತಾರೆ. ಹೀಗೆ ಯಾರ ಮೇಲೆ ಯಾವಾಗ ಪ್ರೀತಿ ಹುಟ್ಟುತ್ತದೆ ಹೇಳೋಕೆ ಆಗಲ್ಲ. ಇಂದಿನ ಯೂಥ್ಸ್ ಅವಳೇ ನನ್ನ ಪ್ರಿಯತಮೆ, ಅವನೇ ನನ್ನ ಪ್ರಿಯಕರ ಅಂತಾ ಹೇಳಿಕೊಂಡು, ಸುತ್ತಾಡುತ್ತಿರುತ್ತಾರೆ. ಆಮೇಲೆ ಯಾವುದೋ ಒಂದು ಸಣ್ಣ ವಿಚಾರಕ್ಕೆ ಮನಸ್ತಾಪ ಉಂಟಾಗಿ ಇಬ್ಬರ ನಡುವಿನ ಪ್ರೀತಿ, ಫ್ರೆಂಡ್ ಶಿಪ್ ಮುರಿದು ಹೋಗುತ್ತದೆ.ಆದ್ದರಿಂದ ಗೆಳೆಯ ಅಥವಾ ಗೆಳತಿ ಹೊಂದುವುದರಿಂದ ಆಗುವ ಅನುಕೂಲಗಳು ಹಾಗೂ ಅನಾನುಕೂಲಗಳ ಬಗ್ಗೆ ಇಲ್ಲಿದೆ ಡಿಟೇಲ್ಸ್.
ಬಾಯ್ ಫ್ರೆಂಡ್ ಹಾಗೂ ಗರ್ಲ್ ಫ್ರೆಂಡ್ ಹೃದಯಕ್ಕೆ ತುಂಬಾ ಹತ್ತಿರವಾಗಿರುತ್ತಾರೆ. ಮತ್ತು ದಿನವಿಡೀ ತುಂಬಾ ಮಾತನಾಡುತ್ತಿರುತ್ತಾರೆ. ನಿಮ್ಮ ಜೀವನಕ್ಕೆ ತುಂಬಾ ಆಪ್ತರಾಗಿರುತ್ತಾರೆ. ನಿಮಗೇನು ಇಷ್ಟ. ಯಾವುದು ಇಷ್ಟವಾಗುವುದಿಲ್ಲ.. ನಿಮಗೆ ಯಾವುದು ಸಂತೋಷ ನೀಡುತ್ತದೆ ಎಲ್ಲವನ್ನು ಕಪಲ್ಸ್ ಪ್ರತಿ ದಿನ ಹಂಚಿಕೊಳ್ಳಲು ಪ್ರಾರಂಭಿಸುತ್ತಾರೆ. ಈ ಕಾರಣದಿಂದಾಗಿ ಜೀವನದ ಪ್ರತಿ ಕ್ಷಣದಲ್ಲಿಯೂ, ಪ್ರತಿ ಕ್ಷಣದಲ್ಲಿಯೂ ಜತೆಯಾಗಿ ನಿಲ್ಲುತ್ತಾರೆ.

ಪ್ರೀತಿಪಾತ್ರರನ್ನು ಚೆನ್ನಾಗಿ ನೋಡಿಕೊಳ್ಳುವುದು!
ಸಾಮಾನ್ಯವಾಗಿ ಕಪಲ್ಸ್ ಶಾಪಿಂಗ್ ಜತೆ ಜತೆಯಾಗಿ ಹೋಗುತ್ತಾರೆ. ನಿಮ್ಮ ಆರೋಗ್ಯಕ್ಕೆ ಕೆಟ್ಟಿದ್ದರೆ ಕಾಳಜಿ ತೋರುತ್ತಾರೆ. ನಿಮ್ಮ ಮೂಡ್ ಹಾಳಾಗಿದ್ದರೆ, ಏನಾದರೂ ಮಾಡಿ ನಿಮ್ಮನ್ನು ಖುಷಿಯಾಗಿಡಲು ಪ್ರಯತ್ನಿಸುತ್ತಾರೆ.
ಭಾವನಾತ್ಮಕ ಬೆಂಬಲ (ಎಮೋಷನಲ್ ಸಂಪೋರ್ಟ್)
ಗೆಳೆಯ ಅಥವಾ ಗೆಳತಿ ಭಾವನಾತ್ಮಕ ಬೆಂಬಲವನ್ನು ಒಬ್ಬರನೊಬ್ಬರು ಪಡೆಯುತ್ತಾರೆ. ನೀವು ದುಃಖ , ಕೋಪ, ಅಥವಾ ಒತ್ತಡಕ್ಕೆ ಒಳಗಾದಾಗ ನಿಮ್ಮ ಸಂಗಾತಿ ಜತೆಗೆ ಹಂಚಿಕೊಳ್ಳಬಹುದು. ಅಂತಹ ಸಮಯದಲ್ಲಿ ನಿಮ್ಮ ಪ್ರೀತಿ , ಪಾತ್ರರೊಡನೆ ಮಾತನಾಡುವುದು. ನಿಮ್ಮ ಹೃದಯವನ್ನು ಹಗುರಗೊಳಿಸುತ್ತಾರೆ. ಅದೇ ಸಮಯದಲ್ಲಿ ನೀವು ಅನೇಕ ಸಂದರ್ಭದಲ್ಲಿ ವಿಷಯಗಳ ಬಗ್ಗೆ ನಿಮ್ಮ ಸಂಗಾತಿ ಯಿಂದ ಮಾರ್ಗದರ್ಶನ ಪಡೆಯಬಹುದು. ನಿಮ್ಮಲ್ಲಿರುವ ಗೊಂದಲವನ್ನು ನಿವಾರಿಸಲು ಇದು ಸಹಾಯ ಮಾಡುತ್ತದೆ.

ಪರಸ್ಪರ ಅವಲಂಬನೆ
ನೀವು ಸಂಬಂಧದಲ್ಲಿರುವಾಗ ಅನೇಕ ಪ್ರಕಾರದ ಪ್ರಯೋಜನಗಳನ್ನು ಕಾಣಬಹುದು. ಟಿಕೆಟ್ ಬುಕ್ ಮಾಡಲು, ನೀವು ಅಡುಗೆ ಮಾಡಲು ಮನಸ್ಸಿಲ್ಲದಿದ್ದರೂ, ನಿಮ್ಮ ಸಂಗಾತಿಗೆ ಹೇಳಿ ತರಲು ಹೇಳುವುದು.. ಹೊರಗಡೆ ಹೋಗಲು ಮನಸ್ಸಿಲ್ಲದಿದ್ದಾಗ, ಸಂಗಾತಿಗೆ ಹೇಳುವುದು. ಇವೆಲ್ಲ ಅತ್ಯಂತ ಸುಲಭಗೊಳಿಸುತ್ತದೆ. ನಿಮ್ಮ ಕೆಲಸದ ಬಗ್ಗೆ ಗಮನ ಹರಿಸಲು ನಿಮಗೆ ಹೆಚ್ಚು ಸಮಯ ಸೀಗುತ್ತದೆ.
ಪ್ರತಿ ಕ್ಷಣ ಸಂಗಾತಿಯನ್ನೇ ಹುಡುಕುವುದು.!
ಕಪಲ್ಸ್ ಮೊಬೈಲ್ ನಲ್ಲೆ ಯಾವಾಗಲೂ ಕನೆಕ್ಟ್ ಆಗಿರುತ್ತಾರೆ. ಮಸೇಜ್, ಕಾಲ್ ಯಾವುದೇ ಇರಲಿ ಯಾವಾಗಲೂ ಟಚ್ ಅಲ್ಲಿ ಇರುತ್ತಾರೆ. ಇದರ ಮಧ್ಯೆ ತುಂಬಾ ಭೇಟಿ ಕೂಡಾ ಆಗುತ್ತಾರೆ. ಪ್ರತಿ ದಿನ ಸಂಗಾತಿ ಜತೆ ಇರುವುದರಿಂದ ಅವರಿಂದ ಪ್ರೀತಿ, ಮತ್ತು ಕಾಳಜಿ ಸೀಗುವುದಲ್ಲದೇ, ಸಂತೋಷದಿಂದ ಇರಲು ಸಾಧ್ಯವಾಗುತ್ತದೆ.
ಅನಾನೂಕೂಲಗಳೇನು..?
ಏಕಾಂಗಿ!
ನಿಮ್ಮ ಗರ್ಲ್ ಫ್ರೆಂಡ್ ಹಾಗೂ ಬಾಯ್ ಫ್ರೆಂಡ್ ಬೇರೆ ಕಡೆಗೆ ಟ್ರಾನ್ಸ್ ಫರ್ ಆದಾಗ, ನಿಮ್ಮನ್ನು ಬಿಟ್ಟು ದೂರ ಹೋಗಬೇಕಾದ ಸಂದರ್ಭ ಬಂದಾಗ ಬ್ರೇಕ್ ಆಗುವ ಆತಂಕ ಕಾಡುತ್ತದೆ.

ಸ್ವಯಂ ಅವಂಲಬನೆ ಮರೆಯಬೇಡಿ.!
ಸ್ವಯಂ ಅವಲಂಬನೆ ಯಾವತ್ತಿಗೂ ಮರೆಯಬಾರದು. ಸಂಗಾತಿ ಹಾಗೂ ನಿಮ್ಮ ಮಧ್ಯೆ ಜಗಳ ಅಥವಾ ಬ್ರೇಕ್ ಅಪ್ ಆದಾಗ, ಸಣ್ಣ ಸಣ್ಣ ವಿಚಾರಗಳು ತುಂಬಾ ಕ್ಲಿಷ್ಟಕರವಾಗುತ್ತವೆ. ಆದ್ದರಿಂದ ಬೆೇರೆಯವರ ಮೇಲೆ ಅವಲಂಬಿತರಾಗದೇ, ನಿಮ್ಮ ಕೆಲಸಗಳನ್ನು ನೀವೇ ಮಾಡಿಕೊಳ್ಳುವುದು ಉತ್ತಮ. ನಿಮ್ಮ ಪ್ರೀತಿ ಪಾತ್ರರ ಅನುಪಸ್ಥಿತಿಯಲ್ಲಿಯೂ ನಿಮ್ಮನ್ನು ಗಟ್ಟಿಯಾಗಿಡಲು ಇದು ಸಹಕಾರಿಯಾಗುತ್ತದೆ.
ಭಾವನಾತ್ಮಕವಾಗಿ ದುರ್ಬಲರಾಗುವುದು.!
ಒಬ್ಬರ ಮೇಲೆ ಭಾವನಾತ್ಮಕ ಅವಲಂಬನೆ ನಿಮ್ಮನ್ನು ದುರ್ಬಲಗೊಳಿಸುತ್ತದೆ. ಸವಾಲುಗಳನ್ನು ಹಾಗೂ ಭಾವನಾತ್ಮಕ ಒತ್ತಡವನ್ನು ಎದುರಿಸಲು, ಅವುಗಳಿಗೆ ಪರಿಹಾರ ಕಂಡು ಕೊಳ್ಳುವುದನ್ನು ನೀವು ಮರೆಯುತ್ತೀರಿ. ಅಂತಹ ಪರಿಸ್ಥಿತಿಯಲ್ಲೂ ನೀವು ನಿಮ್ಮ ಗೆಳೆಯ ಅಥವಾ ಗೆಳತಿ ಜತೆಗೆ ಮಾತನಾಡದಿದ್ದರೆ, ಇದು ನಿಮ್ಮನ್ನು ಇನ್ನಷ್ಟು ನಕಾರಾತ್ಮಗೊಳಿಸಬಹುದು, ಯಾಕಂದರೆ ಕಷ್ಟದ ಸಯಮದಲ್ಲಿ ಸಂಗಾತಿ ಜತೆಗಿಲ್ಲ ಎಂದು ನಿಮಗನಿಸಲು ಶುರುವಾಗುತ್ತದೆ. ಇದು ಡಬಲ್ ಎಮೋಷನಲ್ ಸ್ಟ್ರೆಸ್. ಖಿನ್ನತೆಗೆ ಕಾರಣವಾಗುವ ಸಾಧ್ಯತೆ ಹೆಚ್ಚಿರುತ್ತದೆ.
ನಿಮ್ಮ ಬಗ್ಗೆ ಕೇರ್ ತೆಗೆದುಕೊಳ್ಳುವುದನ್ನು ಮರೆಯುವುದು
ಕಪಲ್ಸ್ ಒಬ್ಬರ ನೊಬ್ಬರು, ಕಾಳಜಿ ವಹಿಸುವಲ್ಲಿ ನಿರತರಾಗಿದ್ದರೆ, ತಮ್ಮ ಬಗ್ಗೆ ಕಾಳಜಿ ವಹಿಸುವುದನ್ನು ನಿರ್ಲಕ್ಷಿಸುತ್ತಾರೆ. ನಿಮಗೆ ಸರಿಯಾಗಿ ನಿದ್ರೆ ಮಾಡುವುದಕ್ಕೆ ಸಮಯ ಸೀಗುವುದಿಲ್ಲ. ಹೆಚ್ಚು ಮಾತನಾಡುವುದು, ತಲೆನೋವು, ಇದ್ರಿಂದ ಆರೋಗ್ಯ ಹದಗೆಡಬಹುದು. ಚರ್ಮದ ತೊಂದರೆಗೂ ಕಾರಣವಾಗಬಹುದು. ಪ್ರೀತಿ ಪಾತ್ರರನ್ನು ನೋಡಿಕೊಳ್ಳುವ ಭರದಲ್ಲಿ ತಮ್ಮ ಬಗ್ಗೆ ಕೇರ್ ತೆಗೆದುಕೊಳ್ಳುವುದನ್ನು ತುಂಬಾ ಜನ ಮರೆಯುತ್ತಾರೆ.