ಸೌಂದರ್ಯ ಮತ್ತು ಗ್ಲಾಮರ್ ಜಗತ್ತಿನ ಭಾಗವಾಗಲು ಪ್ರತಿಯೊಬ್ಬರು ಪ್ರಯತ್ನಿಸುತ್ತಾರೆ. ದೋಷರಹಿತ ಚರ್ಮವನ್ನು ನಾವೆಲ್ಲರೂ ಬಯಸುತ್ತೇವೆ. ಅದರಂತೆ ಮಾರ್ಕೆಟ್ ನಲ್ಲಿ ಸೀಗುವ ಸೌಂದರ್ಯ ವರ್ಧಕ ಪ್ರೊಡೆಕ್ಟ್ ಗಳನ್ನು ಖರೀದಿಸುತ್ತೇವೆ. ಆದರೆ ಹೊರಗಡೆ ಸೀಗುವ ಸೌಂದರ್ಯ ವರ್ಧಕ ಪ್ರೊಡೆಕ್ಟ್ ಗಳಿಂದ ಸೌಂದರ್ಯ ಹಾಳಾಗಬಹುದು. ಹಾಗಾಗಿ ನೈಸರ್ಗಿಕ ವಸ್ತುಗಳನ್ನು ಬಳಸಿ ಆರೋಗ್ಯ ಹಾಗೂ ಸೌಂದರ್ಯ ಕಾಪಾಡಿಕೊಳ್ಳಬಹುದು.ಅದರಲ್ಲೂ ತೆಂಗಿನ ಎಣ್ಣೆ ರಾತ್ರಿ ಸಮಯದಲ್ಲಿ ಹಚ್ಚುವುದರಿಂದ ಅನೇಕ ಪ್ರಯೋಜನಗಳನ್ನು ಕಾಣಬಹುದು.
ರಾತ್ರಿ ವೇಳೆ ತೆಂಗಿನ ಎಣ್ಣೆ ಹಚ್ಚುವುದರಿಂದ ಕೂದಲು ಮೃದುಗೊಳಿಸುವುದಲ್ಲದೇ ತಲೆಹೊಟ್ಟು ಸಮಸ್ಯೆ ವಿರುದ್ಧ ಹೋರಾಡುತ್ತದೆ
ಒಣ ಚರ್ಮವನ್ನು ತೇವಗೊಳಿಸಿ ಮಗುವಿನ ಚರ್ಮದಂತೆ ಮೃದುಗೊಳಿಸುತ್ತದೆ.ಶೇವಿಂಗ್ ಕ್ರೀ ಮತ್ತು ರೇಸರ್ ನಿಂದ ಉರಿ ಕಾಣಿಸಿಕೊಂಡಾಗ ಕೊಬ್ಬರಿ ಎಣ್ಣೆ ಹಚ್ಚಿಕೊಂಡಾಗ ರಿಲೀಫ್ ಕಾಣಬಹುದು.

ಕಣ್ಣು ರೆಪ್ಪೆಗಳನ್ನು ವರ್ಧಿಸಿ ಬೆಳೆಯಲು ಸಹಾಯ ಮಾಡುತ್ತದೆ. ವಿವಿಧ ಬಗೆಯ ಕಜ್ಜಿ ಮತ್ತು ಸೋರಿಯಾಸಿಸ್ ನಿವಾರಿಸುತ್ತದೆ.
ಉಗುರಿನ ಸುತ್ತ ಇರುವ ದಪ್ಪ ಚರ್ಮಕ್ಕೆ ಹಚ್ಚುವುದರಿಂದ ಉಗುರಿನ ಬೆಳವಣಿಗೆ ಮತ್ತು ದೋಷಯುತವಾದ ಉಗುರನ್ನು ನಯವಾಗಿ ಮಾಡುತ್ತದೆ.
ರಾತ್ರಿ ತೆಂಗಿನ ಹಚ್ಚುವುದರಿಂದ ಅನೇಕ ಚರ್ಮದ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಆಗಾಗ್ಗೆ ಮಹಿಳೆಯರು ತಮ್ಮ ಕೂದಲಿಗೆ ತೆಂಗಿನ ಎಣ್ಣೆಯನ್ನು ಬಳಸುತ್ತಾರೆ. ಇದು ಮಾತ್ರವಲ್ಲ. ನಮ್ಮ ಬೆವರಿನ ವಾಸನೆಯನ್ನು ಸಹ ತೆಗೆದು ಹಾಕುತ್ತದೆ. ಆದರೆ ರಾತ್ರಿಯಲ್ಲಿ ಮಲಗುವ ಮೊದಲು ತೆಂಗಿನ ಎಣ್ಣೆಯನ್ನು ಬಳಸುವುದರಿಂದ ನಿಮ್ಮ ಚರ್ಮದ ಅನೇಕ ತೊಂದರೆಗಳನ್ನು ನಿವಾರಿಸಬಹುದು ಎಂದು ತಿಳಿದರೆ ಆಶ್ಚರ್ಯವಾಗಬಹುದು. ಇದು ನಿಮ್ಮ ಚರ್ಮವನ್ನು ಸುಂದರಗೊಳಿಸುತ್ತದೆ. ತೆಂಗಿನಎಣ್ಣೆಯ ಹಲವು ಪ್ರಯೋಜನಗಳ ಬಗ್ಗೆ ತಿಳಿಯೋಣ.
ಬಲವಾದ ಮತ್ತು ಹೊಳೆಯುವ ಉಗುರುಗಳಿಗಾಗಿ ತೆಂಗಿನ ಎಣ್ಣೆ
ತೆಂಗಿನ ಎಣ್ಣೆಯನ್ನು ಬಳಸುವುದರಿಂದ ನಿಮ್ಮ ಉಗುರುಗಳು ಬಲವಾಗುವುದಲ್ಲದೇ, ಹೊಳೆಯುತ್ತವೆ. ರಾತ್ರಿ ಮಲಗುವ ಮುನ್ನ ಕೊಬ್ಬರಿ ಎಣ್ಣೆಯನ್ನು ತೆಗೆದುಕೊಂಡು ಉಗುರುಗಳಿಗೆ ಮಸಾಜ್ ಮಾಡಿ. ಅಲ್ಲದೇ, ಇದು ಶಿಲೀಂದ್ರ ವಿರೋಧಿ ಗುಣಗಳನ್ನು ಹೊಂದಿದ.ಇದು ಉಗುರಿನ ಸೋಂಕಿನಿಂದ ನಿಮ್ಮನ್ನು ರಕ್ಷಿಸುತ್ತದೆ.
ಸ್ಟ್ರೆಚ್ ಮಾರ್ಕ್ ಗಾಗಿ
ಕೊಬ್ಬರಿ ಎಣ್ಣೆ ಸ್ಟ್ರೆಚ್ ಮಾರ್ಕ್ಸ್ ಸಮಸ್ಯೆಯನ್ನು ನಿವಾರಿಸಲು ಕೆಲಸ ಮಾಡುತ್ತದೆ. ಸಮಸ್ಯೆಯ ಇರುವ ಜಾಗಕ್ಕೆ ಕೊಬ್ಬರಿ ಎಣ್ಣೆಯನ್ನು ಹಚ್ಚಿ ಐದು ನಿಮಿಷಗಳ ಕಾಲ ಮಸಾಜ್ ಮಾಡಿ. ಇದು ಸ್ಟ್ರೆಚ್ ಮಾರ್ಕ್ಸ್ ಸಮಸ್ಯೆಯನ್ನು ನಿವಾರಿಸುತ್ತದೆ.
ಆರೋಗ್ಯಕರ ಹಾಗೂ ಚರ್ಮಕ್ಕಾಗಿ
ನೀವು ಆರೋಗ್ಯಕರ ಮತ್ತು ಹೊಳೆಯುವ ಚರ್ಮವನ್ನು ಪಡೆಯಲು ಬಯಸಿದರೆ, ನೀವು ಕೊಬ್ಬರಿ ಎಣ್ಣೆಯನ್ನು ಬಳಸಬಹುದು. ಇದು ನಿಮ್ಮ ಚರ್ಮವನ್ನು ತೇವಗೊಳಿಸುತ್ತದೆ. ಕೊಬ್ಬರಿ ಎಣ್ಣೆಯನ್ನು ತ್ವಚೆಯ ಮೇಲೆ ತೇಳುವಾಗಿ ಹಚ್ಚಿ, ಬೆಳಿಗ್ಗೆ ಮುಖವನ್ನು ನೀರಿನಿಂದ ತೊಳೆದು ಕೊಳ್ಳಬೇಕು.

ಚರ್ಮದ ಸುಕ್ಕುಗಳಿಗೆ
ಚರ್ಮದ ಸುಕ್ಕನ್ನು ತಡೆಯಲು ಕೊಬ್ಬರಿ ಎಣ್ಣೆ ತುಂಬಾ ಪ್ರಯೋಜನಕಾರಿಯಾಗಿದೆ. ಇದನ್ನು ಬಳಸಲು ನೀವು ತೆಂಗಿನ ಎಣ್ಣೆಯನ್ನು ನಿಮ್ಮ ಮುಖದ ಮೇಲೆ ಹಗುರವಾಗಿ ಕೈಗಳಿಂದ ಹಚ್ಚಿ ಮತ್ತು ಬೆಳಿಗ್ಗೆ ನಿಮ್ಮ ಮುಖವನ್ನು ನೀರಿನಿಂದ ತೊಳೆಯಿರಿ.
ಕೊಬ್ಬರಿ ಎಣ್ಣೆಯ ಇತರ ಪ್ರಯೋಜನಗಳು
ಕೊಬ್ಬರಿ ಎಣ್ಣೆಯನ್ನು ಬ್ಯಾಕ್ಟೇರಿಯಾ ವಿರೋಧಿ, ಶಿಲೀಂದ್ರ ವಿರೋಧಿ ಮತ್ತು ಆಂಟಿ ವೈರಲ್ ಗುಣಗಳಿವೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಹಾಗಾಗಿ ಎಲ್ಲಾ ಸಮಸ್ಯೆಗಳಿಗೂ ಕೊಬ್ಬರಿ ಎಣ್ಣೆಯೇ ಅತ್ಯುತ್ತಮ ಆಯ್ಕೆ ಎಂದು ಹೇಳಬಹುದು.
ಕೊಬ್ಬರಿ ಎಣ್ಣೆ ತೂಕ ಇಳಿಕೆಗೆ
ಒಸಡು ರೋಗಗಳು ಮತ್ತು ಹಲ್ಲು ನೋವು ನಿವಾರಣೆ
ಪಿತ್ತಕೋಶದ ಕಾಯಿಲೆಯ ಲಕ್ಷಣಗಳನ್ನು ತಡೆಗಟ್ಚುತ್ತದೆ
ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ
ಶಕ್ತಿಯನ್ನು ಸುಧಾರಿಸುತ್ತದೆ
ಮೆಮೊರಿ ಸುಧಾರಿಸುತ್ತದೆ
ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ
ಉರಿಯೂತವನ್ನು ಕಡಿಮೆ ಮಾಡುತ್ತದೆ
ಹಾರ್ಮೋನುಗನ್ನು ಸಮತೋಲನ ಗೊಳಿಸಲು ಸಹಾಯ ಮಾಡುತ್ತದೆ.
ಆದರೆ ಕೊಬ್ಬರಿ ಎಣ್ಣೆಯಲ್ಲಿ ನೈಸರ್ಗಿಕ ಉತ್ಪನ್ನ ಹೆಚ್ಚಾಗಿರುವುದರಿಂದ ಚರ್ಮಕ್ಕೆ ಅತ್ಯುತ್ತಮ ಎಂದು ಹೇಳಬಹುದು. ಕೊಬ್ಬರಿ ಎಣ್ಣೆ ಮಾಯಿಶ್ಚರೈಸರ್ ಹಾಗೂ ಕ್ಲೆನ್ಸರ್ ಮತ್ತು ಸನ್ ಸ್ಕ್ರೀನ್ ಆಗಿ ಬಳಸಬಹುದು. ಈ ತೈಲವು ನಿಮ್ಮ ಚರ್ಮವನ್ನು ರಕ್ಷಿಸುತ್ತದೆ. ಇದರಲ್ಲಿರುವ ಉತ್ಕರ್ಷಣಾ ನಿರೋಧಕಗಳು ಚರ್ಮದ ಅನೇಕ ಸಮಸ್ಯೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತವೆ. ಕೊಬ್ಬರಿ ಎಣ್ಣೆಯು ಕೊಬ್ಬಿನಾಮ್ಲಗಳನ್ನು ಹೊಂದಿರುವುದರಿಂದ ಉರಿಯೂತವನ್ನು ಕಡಿಮೆ ಮಾಡುತ್ತದೆ. ನಿಮ್ಮ ಸೌಂದರ್ಯ ದಿನಚರಿಯಲ್ಲಿ ಕೊಬ್ಬರಿ ಎಣ್ಣೆಯನ್ನು ಬಳಸಬಹುದಾಗಿದೆ.
ಫೇಸ್ ವ್ಯಾಶ್
ಕೊಬ್ಬರಿ ಎಣ್ಣೆಯನ್ನು ಒಂದು ಬಟ್ಟಿಲಿನಲ್ಲಿ ಕರಗಿಸಿ 1 ಟೀ ಸ್ಪೂನ್ ಅಡಿಗೆ ಸೋಡಾ ಮತ್ತು 5 ಟೀ ಸ್ಪೂನ್ ಸಾರಭೂತ ತೈಲಗಳನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ. ಮನೆಯಲ್ಲೇ ಈ ಫೇಸ್ ವ್ಯಾಶ್ ತಯಾರಿಸಬಹುದು.
ಲಿಮ್ ಬಾಮ್
ಯಾವುದೇ ತುಟಿ ಸಮಸ್ಯೆಗಳಿಗೆ ಕೊಬ್ಬರಿ ಎಣ್ಣೆ ಪರಿಹಾರ ನೀಡುತ್ತದೆ. ನಿಮ್ಮ ಲಿಮ್ ಬಾಮ್ ಗೆ ಕೊಬ್ಬರಿ ಎಣ್ಣೆಯನ್ನು ಮಿಕ್ಸ್ ಮಾಡಿ ಹಚ್ಚಿಕೊಳ್ಳಬಹುದು. ಇದು ನಿಮ್ಮ ಒಣ ತುಟಿಗಳನ್ನು ಮೃದುಗೊಳಿಸುತ್ತದೆ.
ನೈಟ್ ಕ್ರೀಮ್
ಮಾಯಿಶ್ಚರೈಸರ್ ಕ್ರೀಮ್ ಗೆ ಕೆಲ ಹನಿಗಳಷ್ಟು ಕೊಬ್ಬರಿ ಎಣ್ಣೆಯನ್ನು ಹಚ್ಚುವುದರಿಂದ ಮೊಡವೆ ಸೇರಿದಂತೆ ಅನೇಕ ಸಮಸ್ಯೆಗಳನ್ನು ನಿವಾರಿಸಬಹುದು. ರಾತ್ರಿ ಮಲಗುವ ಮೊದಲು ಕ್ರೀಮ್ ಹಚ್ಚಿ , ಇಲ್ಲವೇ ನಿಮ್ಮ ಮುಖದ ಸುತ್ತಲೂ ಕೊಬ್ಬರಿ ಎಣ್ಣೆಯನ್ನು ಹಚ್ಚಬಹುದು.
ಸನ್ ಬರ್ನ್ ರಿಲೀಫ್
ಸೂರ್ಯನ ಕಿರಣಗಳಿಂದ ಆಗುವ ತ್ವಚೆಯ ಹಾನಿಯನ್ನು ಕೊಬ್ಬರಿ ಎಣ್ಣೆ ತಡೆಯುತ್ತದೆ. ಸನ್ ಬರ್ನ್ ನಿಂದಾಗಿ ನೀವು ವಯಸ್ಸಾದಂತೆ ಕಾಣುವೀರಿ. ಹಾಗಾಗಿ ಕೊಬ್ಬರಿ ಎಣ್ಣೆಯಿಂದ ಚರ್ಮ ಪುನ ನಿರ್ಜಲೀಕರಣಗೊಳಿಸಲು ಸಹಾಯ ಮಾಡುತ್ತದೆ. ತುರಿಕೆ, ಮುಖ ಕೆಂಪಾಗುವಿಕೆ ಮೊದಲಾದ ಸಮಸ್ಯೆಯನ್ನು ನಿವಾರಿಸಲು ಇದು ನೆರವಾಗುತ್ತದೆ.
ಮೇಕಪ್ ತೆಗೆಯಲು
ಮೇಕಪ್ ತೆಗೆಯಲು ನೀವು ಕೊಬ್ಬರಿ ಎಣ್ಣೆಯನ್ನು ಬಳಸಬಹುದು. ರಾಸಾಯನಿಕ ವಸ್ತುಗಳಿಂದ ಮೇಕಪ್ ತೆಗೆದುಹಾಕುವ ಬದಲು, ಅದನ್ನು ತೆಂಗಿನ ಎಣ್ಣೆಯಿಂದ ತೆಗೆದುಹಾಕಿ. ಇದು ನಿಮ್ಮ ಚರ್ಮವನ್ನು ಹೈಡ್ರೇಟಿಂಗ್ ಮತ್ತು ಮೃದುಗೊಳಿಸುತ್ತದೆ. ಕೊಬ್ಬರಿ ಎಣ್ಣೆ ಚರ್ಮದ ಸುಕ್ಕನ್ನು ತಡೆಗಟ್ಟಲು ನಿವಾರಣೆಯಾಗುತ್ತದೆ.