ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತಮ್ಮ ಅತ್ಯುತ್ತಮ ಅಭಿನಯದ ಮೂಲಕ ಹಲವು ಪ್ರೇಕ್ಷಕರ ಗಮನ ಸೆಳೆದಿದ್ದರು. ಬಾಲಿವುಡ್ ನಲ್ಲಿ ತಮ್ಮ ಗುರುತನ್ನು ಇಂದಿಗೂ ಕಾಪಾಡಿಕೊಂಡು ಬರುತ್ತಿದ್ದಾರೆ. ತಮ್ಮ ಅಮೋಘ ಅಭಿನಯ ಅಷ್ಟೇ ಅಲ್ಲದೇ ಸೌಂದರ್ಯದಿಂದಲೇ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರು ಸದಾ ಸುಂದರವಾಗಿ ಕಾಣಲು ಏನು ಮಾಡುತ್ತಾರೆ. ಯಾವ ಬ್ಯೂಟಿ ಟಿಪ್ಸ್ ಅನುಸರಿಸುತ್ತಾರೆ ಎಂಬುದು ಹಲವು ಅಭಿಮಾನಿಗಳಿಗೆ ಕೂತುಹಲ ಇದ್ದೇ ಇರುತ್ತೆ. ಈ ಹಿನ್ನಲೆಯಲ್ಲಿ ಇವತ್ತು ನಾವು ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರ ಸೌಂದರ್ಯ ರಹಸ್ಯದ ಬಗ್ಗೆ ತಿಳಿಸಿದ್ದೇವೆ.

ದೀಪಿಕಾ ಪಡುಕೋಣೆ ಸೌಂದರ್ಯದ ರಹಸ್ಯವೇನು..?
ಶೂಟಿಂಗ್ ಇದ್ದರೆ ಮಾತ್ರ ಮೇಕಪ್..!
ದೀಪಿಕಾ ಪಡುಕೋಣೆ ಕೇವಲ ಶೂಟಿಂಗ್ ಇದ್ದಾಗ ಮಾತ್ರ ಮೇಕಪ್ ಮಾಡ್ತಾರಂತೆ. ದೀಪಿಕಾ ಸ್ನಾನ ಮಾಡುವಾಗ ಲೂಫಾ ಉಪಯೋಗಿಸುತ್ತಾರೆ. ಇದು ರಕ್ತ ಪರಿಚಲನೆಯನ್ನು ಸರಿಯಾಗಿಡುವುದಲ್ಲದೇ, ಚರ್ಮದ ಡೆಡ್ ಕೋಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ ಎಂದು ನಂಬುತ್ತಾರೆ.
ಕೊಬ್ಬರಿ ಎಣ್ಣೆ ಉಪಯೋಗಿಸುತ್ತಾರೆ.ದೀಪಿಕಾ ಪಡುಕೋಣೆ ಮುಖಕ್ಕೆ ಟ್ಯಾನಿಂಗ್ ಇದ್ದಾಗ ಕೊಬ್ಬರಿ ಎಣ್ಣೆಯನ್ನು ಬಳಸುತ್ತಾರೆ. ತೆಂಗಿನ ಎಣ್ಣೆಯಲ್ಲಿ ಚಿಟಿಕೆ ಅರಶಿಣ ಸೇರಿಸಿ ಮುಖಕ್ಕೆ ಮಸಾಜ್ ಮಾಡಿ.
ಕ್ಲೆನ್ಸರ್ ನಿಂದ ಮೇಕಪ್ ತೆಗೆಯುವುದು
ದೀಪಿಕಾ ಫೇಶಿಯಲ್ ಮಾಡಿಸುವುದಿಲ್ಲ. ಬದಲಾಗಿ ಮೇಕಪ್ ಮಾಡಿದ ತಕ್ಷಣ ಕ್ಲೆನ್ಸರ್ ನಿಂದ ಸ್ವಚ್ಛ ಮಾಡುತ್ತಾರೆ. ಮಾಯಿಶ್ಚರೈಸರ್ ಬಳಸುತ್ತಾರೆ.
ದೀಪಿಕಾ ಪಡುಕೋಣೆ ವಾರಕ್ಕೊಮ್ಮೆ ಕೊಬ್ಬರಿ ಎಣ್ಣೆಯಿಂದ ಕೂದಲಿಗೆ ಮಸಾಜ್ ಮಾಡುತ್ತಾರೆ. ಅವರು ಬಾಲ್ಯದಿಂದಲೂ ಅವರು ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡಿಕೊಳ್ಳುವುದರಿಂದ ಅನೇಕ ಪ್ರಯೋಜನಗಳನ್ನು ಕಾಣಬಹುದಾಗಿದೆ.
ಇದಲ್ಲದೇ ಅವರು ಹೇರ್ ಸ್ಪಾವನ್ನು ಸಹ ತೆಗೆದುಕೊಳ್ಳುತ್ತಾರೆ. ಆರೋಗ್ಯಕರ ಆಹಾರವು ಸೌಂದರ್ಯ ಹೆಚ್ಚಿಸುತ್ತದೆ ಎಂಬುದು ಅವರ ಅಭಿಪ್ರಾಯ. ಅವರು ಉಪ್ಪಿಟ್ಟು, ಹಾಲು. ಮಸೂರ್ ದಾಲ್. ರೈಸ್, ಸಲಾಡ್, ರೊಟ್ಟಿ ಮತ್ತು ಫ್ರೈ ಮೀನು, ಫಿಲ್ಟರ್ ಕಾಫಿ, ಹಸಿರು ತರಕಾರಿಗಳು ಸೇವಿಸುತ್ತಾರಂತೆ. ಅನಾರೋಗ್ಯಕರ ಜಂಕ್ ಫುಡ್ ನ್ನು ದೀಪಿಕಾ ಸೇವಿಸುದಿಲ್ಲವಂತೆ.ಚರ್ಮವನ್ನು ಹೈಡ್ರೇಟ್ ಮಾಡಲು ಸಾಕಷ್ಟು ನೀರು ಕುಡಿಯುತ್ತಾರೆ. ನೀರು ಕುಡಿಯುವುದರಿಂದ ಚರ್ಮದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಹೇಳಬಹುದು.

ನಿಮ್ಮ ಚರ್ಮವನ್ನು ಮೃದುವಾಗಿಡಲು ಯಾವಾಗಲೂ ಉತ್ತಮ ಬ್ರ್ಯಾಂಡ್ ಮಾಯಿಶ್ಚರೈಸರ್ ಬಳಸಬೇಕು. ಒಣ ಚರ್ಮ ಹೊಂದಿದ್ದರೆ, ಮಾಯಿಶ್ಚರೈಸರ್ ಮುಖ್ಯವಾಗುತ್ತದೆ. ಏಕೆಂದರೆ, ಒಣ ಚರ್ಮ ಹೊಂದಿದ್ದವರು ಮೇಕಪ್ ಹಾಕಿದಾಗ, ತುಂಬಾ ತೊಂದರೆ ಅನುಭವಿಸುತ್ತಾರೆ. ಮಾರುಕಟ್ಟೆಯಲ್ಲಿ ಅನೇಕ ಉತ್ತಮ ಬ್ರ್ಯಾಂಡ್ ಗಳ ಮಾಯಿಶ್ಚರೈಸರ್ ಗಳನ್ನು ಕಾಣಬಹುದು.ಟಿವಿ ಹಾಗೂ ಪತ್ರಿಕೆಗಳಲ್ಲಿ ಸೌಂದರ್ಯವರ್ಧಕ ಉತ್ಪನ್ನಗಳನ್ನು ನೋಡಿ, ಅವುಗಳನ್ನು ಖರೀದಿಸಲು ಮುಂದಾಗಬೇಡಿ. ಅದಕ್ಕೂ ಮೊದಲು, ಚರ್ಮ ತಜ್ಞರನ್ನು ಭೇಟಿ ಮಾಡಿ, ಸಲಹೆ ಪಡೆದುಕೊಳ್ಳಬಹುದು. ವಾರಕ್ಕೆ 1ರಿದಂ 2 ಬಾರಿ ನಿಮ್ಮ ಚರ್ಮವನ್ನು ಎಫ್ಫೋಲಿಯೇಟ್ ಮಾಡಿ. ಇದರಿಂದ ಚರ್ಮದ ಡೆಡ್ ಕೋಶಗಳನ್ನು ನಿವಾರಿಸಲು ನೆರವಾಗುತ್ತದೆ.
ನಿಮ್ಮ ಮುಖದಲ್ಲಿ ಮೊಡವೆಗಳಿದ್ದರೆ ನಿಯಮಿತವಾಗಿ ಚಿಕಿತ್ಸೆ ನೀಡಬೇಕು. ಸಾಮಾನ್ಯವಾಗಿ ಮೊಡವೆ ಕಲೆಗಳು ಶಾಶ್ವತವಾಗಿ ಉಳಿಯುತ್ತವೆ. ಹೀಗಾಗಿ ದೀರ್ಘಕಾಲದವರೆಗೆ ಮೊಡವೆ ಗುಳ್ಳೆಗಳನ್ನು ಹೊಂದಿದ್ದರೆ, ಕೊಬ್ಬರಿ ಎಣ್ಣೆಯಿಂದ ಲಘುವಾಗಿ ಮಸಾಜ್ ಮಾಡಿ. ಇದರಿಂದ ಪ್ರಯೋಜನ ಪಡೆದುಕೊಳ್ಳಬಹುದು.