ಗ್ರೀನ್ ಟೀ, ಮಿಲ್ಕ್ ಟೀ, ಹೀಗೆ ವಿವಿಧ ಟೀಗಳನ್ನು ಕೇಳಿದ್ದೇವೆ. ಆದ್ರೆ ಬಾಳೆಹಣ್ಣಿನ ಟೀ ಬಗ್ಗೆ ನಿಮಗೆ ತಿಳಿದಿದೆಯೇ. ಬಾಳೆಹಣ್ಣಿನ ಟೀ ಯಿಂದ ಹಲವು ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ನಿದ್ರೆ ಸಮಸ್ಯೆಯಿಂದ ಬಳಲುತ್ತಿರುವವರು ಬಾಳೆಹಣ್ಣಿನ ಸೇವಿಸುವುದರಿಂದ ಅನೇಕ ಲಾಭಗಳಿವೆ. ಹಾಗಾಗಿ ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸಬೇಕಾದರೆ, ಉತ್ತಮ ನಿದ್ರೆ ಹೊಂದಬೇಕಾದರೆ ಬಾಳೆಹಣ್ಣಿನ ಟೀ ಒಮ್ಮೆ ಟ್ರೈ ಮಾಡಬಹುದು.

ಮೂಳೆಗಳ ಆರೋಗ್ಯಕ್ಕೂ ಬಾಳೆಹಣ್ಣಿನ ಟೀ ಹೆಚ್ಚು ಉಪಯುಕ್ತ ಎಂದು ಹೇಳಲಾಗುತ್ತದೆ. ಬಾಳೆಹಣ್ಣಿನಲ್ಲಿ ಪೌಷ್ಟಿಕಾಂಶ ಒಳಗೊಂಡಿದ್ದು, ನಿದ್ರೆಯ ಸಮಸ್ಯೆಯನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇನ್ನು ತೂಕ ಹಾಗೂ ಒತ್ತತಡ ಸಮಸ್ಯೆಯಿಂದ ನೀವು ಬಳಲುತ್ತಿದ್ದರೆ, ಪ್ರತಿ ದಿನ ರಾತ್ರಿ ಮಲಗುವ ಮುನ್ನ ಅರ್ಧ ಗಂಟೆಯ ಸಮಯದಲ್ಲಿ ಈ ಚಹಾವನ್ನು ಸೇವಿಸಬಹುದಾಗಿದೆ.
ಬಾಳೆಹಣ್ಣು ಎಲ್ಲಾ ಜನರು ತುಂಬಾ ಇಷ್ಟಪಡುವ ಹಣ್ಣು. ಬಾಳೆಹಣ್ಣು ಬಹಳ ಪೌಷ್ಟಿಕ ಮತ್ತು ಪ್ರಯೋಜನಕಾರಿ ಹಣ್ಣು ಎಂದು ಹೇಳಬಹುದು. ನೀವು ಬಾಳೆಹಣ್ಣಿನಿಂದ ವಿವಿಧ ಖಾದ್ಯಗಳನ್ನು ಮಾಡಿರಬಹುದು. ಆದ್ರೆ ಬಾಳೆಹಣ್ಣಿನ ಸಿಪ್ಪೆಯ ಟೀ ಬಗ್ಗೆ ನಿಮಗೆ ತಿಳಿದಿದೆಯೇ. ಯೆಸ್ ಚಹಾ ತಯಾರಿಸಲು ಬಾಳೆಹಣ್ಣನ್ನು ಬಳಸಲಾಗುತ್ತದೆ. ಬಾಳೆಹಣ್ಣಿನ ಚಹಾದ ಪ್ರಯೋಜನಗಳು ಅನಾರೋಗ್ಯ ಸಮಸ್ಯೆಗಳಿಂದ ದೂರವಿಡುತ್ತವೆ.
ಮಧುಮೇಹ, ಹೃದ್ರೋಗ, ಹಾಗೂ ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿರುವವರು ಬಾಳೆ ಹಣ್ಣಿನ ಚಹಾ ಪ್ರಯೋಜನಕಾರಿಯಾಗಿದೆ ಎಂದು ಹೇಳಬಹುದು.
ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ, ಬಾಳೆಹಣ್ಣಿನ ಚಹಾವನ್ನು ಸೇವಿಸಬಹುದಾಗಿದೆ. ಬಾಳೆಹಣ್ಣಿನಲ್ಲಿ ಉತ್ತಮ ಪ್ರಮಾಣದ ಫೈಬರ್ ಇದ್ದು, ದೇಹವನ್ನು ಸಧೃಡವಾಗಿಡಲು ನೆರವಾಗುತ್ತದೆ. ಪ್ರತಿ ದಿನ 1 ಬಾಳೆಹಣ್ಣು ಸೇವಿಸುವುದರಿಂದ ದೈನಂದಿನ ನಾರಿನ 10 ಪ್ರತಿಶತವನ್ನು ಪಡೆದುಕೊಳ್ಳಬಹುದು. ಇದರಲ್ಲಿರುವ ವಿಟಮಿನ್ ಬಿ 6 ಡಯಾಬಿಟಿಸ್ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ.ಉರಿಯೂತ ಸಮಸ್ಯೆಯನ್ನು ನಿವಾರಣೆ ಮಾಡಲು ಬಾಳೆಹಣ್ಣಿನ ಚಹಾವನ್ನು ಬಳಸಬಹುದಾಗಿದೆ. ವಾಯು ಸಮಸ್ಯೆ ಇದ್ದವರು ಸಹ ಸೇವಿಸಬಹುದು. ಬಾಳೆಹಣ್ಣಿನ ಚಹಾ ಸೇವಿಸುವುದರಿಂದ ಹೊಟ್ಟೆಯ ಉರಿಯೂತ ನಿವಾರಿಸಬಹುದಾಗಿದೆ.

ನಿದ್ರಾಹೀನತೆ ಸಮಸ್ಯೆಯನ್ನು ಬಾಳೆಹಣ್ಣಿನ ಚಹಾ ನಿವಾರಿಸುತ್ತದೆ. ನಿದ್ರೆಯ ಕೊರತೆಯಿಂದ ತೊಂದರೆಗೆ ಒಳಗಾಗಿದ್ದರೆ, ಬಾಳೆ ಹಣ್ಣಿನ ಚಹಾವನ್ನು ಟೈ ಮಾಡಿ. ಇದರಲ್ಲಿ ಪೊಟ್ಯಾಸಿಯಂ, ಮೆಗ್ನೀಸಿಯಮ್ ಮತ್ತು ಟ್ರಿಫ್ಟೊಫಾನ್ ಎಂಬ ಮೂರು ಪ್ರಮುಖ ಪೋಷಕಾಂಶಗಳಿವೆ,ಹೀಗಾಗಿ ನಿದ್ರೆಯ ಗುಣಮಟ್ಟವನ್ನು ಸುಧಾರಿಸಲು ನೆರವಾಗುತ್ತದೆ.
ಖಿನ್ನತೆಯಂತಹ ಮಾನಸಿಕ ಸಮಸ್ಯೆಗಳಿಗೆ ಬಾಳೆಹಣ್ಣಿನ ಚಹಾ ಪ್ರಯೋಜನಕಾರಿಯಾಗಬಲ್ಲದ್ದು, ಸಿರೊಟೋನಿನ್ ದೇಹದಲ್ಲಿ ಒತ್ತಡ ಹಾಗೂ ಖಿನ್ನತೆಯನ್ನು ಹೆಚ್ಚಿಸುವ ಹಾರ್ಮೋನುಗಳನ್ನು ನಿಯಂತ್ರಿಸುತ್ತದೆ.
ಕಣ್ಣುಗಳನ್ನು ಆರೋಗ್ಯವಾಗಿಡಲು ಮತ್ತು ದೃಷ್ಟಿಯ ಸಾಮರ್ಥ್ಯವನ್ನು ಹೆಚ್ಚಿಸಲು ಬಾಳೆಹಣ್ಣಿನ ಚಹಾ ಪ್ರಯೋಜನಕಾರಿ. ಅಧ್ಯಯನಗಳ ಪ್ರಕಾರ, ಬಾಳೆಹಣ್ಣಿನ ಚಹಾ ಕಣ್ಣುಗಳನ್ನು ರಕ್ಷಿಸುತ್ತದೆ.
ಹೃದಯವನ್ನು ಆರೋಗ್ಯವಾಗಿಡಲು ಬಾಳೆಹಣ್ಣಿನ ಚಹಾ ಪ್ರಮುಖ ಪಾತ್ರವಹಿಸುತ್ತದೆ. ಬಾಳೆಹಣ್ಣಿನಿಂದ ಮಾಡಿದ ಚಹಾದಲ್ಲಿ ಉತ್ತಮ ಪ್ರಮಾಣದ ಪೊಟ್ಯಾಶಿಯಂ ಮತ್ತು ಮೆಗ್ನೀಶಿಯಂ ಇದ್ದು, ಶೇ 27 ರಷ್ಟು ಹೃದಯ ಸಂಬಂಧಿತ ಕಾಯಿಲೆಗಳಿಂದ ದೂರವಿರಬಹುದು.
ಗರ್ಭಾವಸ್ಥೆಯಲ್ಲಿ ಬಾಳೆಹಣ್ಣು ಸೇವನೆಯು ಗರ್ಭೀಣಿಯರಿಗೆ ಒಳ್ಳೆಯದು ಎಂದು ಹೇಳಲಾಗುತ್ತದೆ. ಬಾಳೆಹಣ್ಣಿನ ಚಹಾ ಸೇವನೆಯೂ ಅನೇಕ ರೀತಿಯ ಪ್ರಯೋಜನಗಳನ್ನು ನೀಡುತ್ತದೆ. ಬಾಳೆಹಣ್ಣಿನಲ್ಲಿರುವ ಪೊಟ್ಯಾಶಿಯಂ ಮಗುವಿಗೆ ಜನ್ಮ ನೀಡುವ ಮಹಿಳೆಯರಿಗೆ ಒಳ್ಳೆಯದು ಎಂದು ಹೇಳಬಹುದು. ಬಾಳೆಹಣ್ಣಿನ ಚಹಾ ನಿಯಮಿತವಾಗಿ ಸೇವಿಸುವುದರಿಂದ ಗರ್ಭಾವಸ್ಥೆಯಲ್ಲಿ ಮಧುಮೇಹವನ್ನು ತಡೆಗಟ್ಟಬಹುದಾಗಿದೆ. ನಿದ್ರೆಯ ಕೊರತೆಯನ್ನು ನೀಗಿಸಲು ಇದು ಸಹಕಾರಿಯಾಗಿದೆ.