ಆರೋಗ್ಯಕ್ಕೆ ಪ್ಲಾಸ್ಟಿಕ್ ಬಳಕೆ ಎಷ್ಟು ಮಾರಕ ಎಂಬುದು ಎಲ್ಲರಿಗೂ ಗೊತ್ತು. ಕೆಲವರಿಗೆ ಅವಸರದಲ್ಲಿ ಪ್ಲಾಸ್ಟಿಕ್ ಬಾಕ್ಸ್ ನಲ್ಲಿ ಹಾಗೂ ಬಾಟಲ್ ನಲ್ಲಿ ನೀರು ಎಲ್ಲವನ್ನು ತುಂಬಿಸಿ ತೆಗೆದುಕೊಂಡು ಹೋಗುವ ಅಭ್ಯಾಸ ವಿರುತ್ತದೆ. ಇಂತಹ ಅಭ್ಯಾಸದಿಂದ ಪ್ಲಾಸ್ಟಿಕ್ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಇನ್ನು ಪ್ಲಾಸ್ಟಿಕ್ ವಸ್ತುಗಳನ್ನು ಬಳಸುವುದರಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಕೆಲವರು ಹಿಂದೆಗಿಂತಲೂ ಹೆಚ್ಚು ಜಾಗೃತರಾಗಿದ್ದಾರೆ. ಅದಕ್ಕಾಗಿಯೇ, ಪ್ಲಾಸ್ಟಿಕ್ ಬದಲಾಗಿ, ಪ್ರಕೃತಿ ಹಾಗೂ ಆರೋಗ್ಯಕ್ಕೆ ಹಾನಿಯಾಗದಂತೆ ಬಿದಿರಿನ ಬಾಟಲ್ ಗಳಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಪ್ಲಾಸ್ಟಿಕ್ ಅಪಾಯವನ್ನು ಗಮನದಲ್ಲಿಟ್ಟುಕೊಂಡೇ. ಬಿದಿರಿನ ಬಾಟಲಿಗಳ ಬಳಕೆ ಹೆಚ್ಚುತ್ತಿದೆ. ಬಿದಿರು ನವೀಕರಿಸಬಹುದಾದ ಸಂಪನ್ಮೂಲ. ಇದನ್ನು ನಿಯಮಿತವಾಗಿ ಉಪಯೋಗಿಸಬಹುದು. ಬ್ಯಾಕ್ಟೇರಿಯಾ, ಶೀಲಿಂದ್ರ ಪ್ಲಾಸ್ಟಿಕ್ ಗೆ ಹೋಲಿಸಿದರೆ ಇದು ಆರೋಗ್ಯಕ್ಕೆ ಹೆಚ್ಚು ಒಳ್ಳೆಯದು. ಬಿದಿರು ಸಂಪೂರ್ಣವಾಗಿ ನೈಸರ್ಗಿಕ ಅಂಶದಿಂದ ಕೂಡಿದೆ. ಇಂದಿನ ದಿನಗಳಲ್ಲಿ ಬಿದಿರಿನ ಉಪಯೋಗವನ್ನು ಪರಿಗಣಿಸಿ, ಬಿದಿರಿನ ಬಾಟಲಿಗಳನ್ನು ‘ಗ್ರೀನ್ ಗೋಲ್ಡ್’ ಎಂದು ಕರೆಯಲಾಗುತ್ತದೆ.

ಬಿದಿರಿನ ಬಾಟಲಿಯ ಆರೋಗ್ಯ ಪ್ರಯೋಜನಗಳು!
ಬಿದಿರಿನ ಬಾಟಲಿಯಲ್ಲಿ ನೀರು ಕುಡಿಯುವುದರಿಂದ ನಿಮ್ಮ ಹೃದಯ ಆರೋಗ್ಯಕರವಾಗಿರುತ್ತದೆ. ತಜ್ಞರ ಪ್ರಕಾರ, ಆರೋಗ್ಯವಾಗಿರಲು ಪ್ಲಾಸ್ಟಿಕ್ ಬಾಟಲಿಯ ಬದಲು, ಬಿದಿರಿನ ಬಾಟಲಿಯಲ್ಲಿ ನೀರು ಕುಡಿಯಬೇಕು. ಇದು ಹೃದಯವನ್ನು ಆರೋಗ್ಯವಾಗಿಡುವಲ್ಲಿ ನೆರವಾಗುತ್ತದೆ. ಮತ್ತು ವಯಸ್ಸಾಗುವಿಕೆಯನ್ನು ತಡೆಗಟ್ಟುತ್ತದೆ.
ಇನ್ನು ಬಿದಿರು ದೇಹಕ್ಕೆ ಅನೇಕ ರೀತಿಯಲ್ಲಿ ಉಪಯುಕ್ತವಾದದ್ದು, ನಿರ್ದಿಷ್ಟವಾಗಿ ಹೇಳುವುದಾದರೆ, ಹೃದಯವನ್ನು ಆರೋಗ್ಯವಾಗಿಡಲು, ಉಸಿರಾಟದ ಕಾಯಿಲೆಗಳನ್ನು ತಡೆಗಟ್ಟಲು ಮತ್ತು ಹೊಟ್ಟೆಯ ತೊಂದರೆಗಳನ್ನು ನಿವಾರಿಸಲು ಬಿದಿರು ಬಹಳ ಮುಖ್ಯ. ಇದು ಮಲಬದ್ಧತೆಯನ್ನು ನಿವಾರಿಸುತ್ತದೆ. ಮತ್ತು ಹೊಟ್ಟೆಯ ಹುಣ್ಣನ್ನು ತಡೆಗಟ್ಟುತ್ತದೆ.
ಈ ಕಾರಣಗಳಿಗಾಗಿಯೇ ಬಿದಿರು ಅತ್ಯುತ್ತಮ ಆಯ್ಕೆ.. ಏಕೆ?
ಬಿದಿರು ನೈಸರ್ಗಿಕವಾಗಿ ಬ್ಯಾಕ್ಟೇರಿಯಾ, ಶೀಲಿಂದ್ರ ವಿರೋಧಿ
ಬಿದಿರು ತುಂಬಾ ಪ್ರಬಲವಾಗಿರುತ್ತದೆ
3-5 ವರ್ಷಗಳಲ್ಲಿ ಬಿದಿರು ಕೊಯ್ಲು ಮಾಡಲು ಸಿಧ್ದವಾಗುತ್ತದೆ.
ಬಿದಿರಿನಲ್ಲಿ ನೀರು ಕುಡಿದರೆ ಹೆಚ್ಚು ಉಪಯುಕ್ತ.
ಬಿದಿರಿನ ಬಾಟಲಿಯಲ್ಲಿ ನೀರು ಕುಡಿಯುವುದರಿಂದ ದೇಹಕ್ಕೆ ವಿಟಮಿನ್ ಬಿ 6 , ಪೊಟ್ಯಾಶಿಯಂ , ತಾಮ್ರ, ಮ್ಯಂಗನೀಸ್ , ಸತು, ವಿಟಮಿನ್ ಬಿ2 , ಪ್ರೋಟೀನ್ , ಕಬ್ಬಿಣದಂತಹ ಪೋಷಕಾಂಶಗಳು ದೊರೆಯುತ್ತವೆ. ಬಿದಿರು ಶತಮಾನಗಳಿಂದಲೂ ಶುದ್ಧತೆಯನ್ನು ಕಾಪಾಡಿಕೊಂಡು ಬಂದಿದೆ. ಬಿದಿರಿನ ಬಾಟಲಿಯಲ್ಲಿ ನೀರು ಕುಡಿಯುವುದರಿಂದ ಯಾವುದೇ ರೀತಿಯ ಸೋಂಕು ಉಂಟಾಗುವುದಿಲ್ಲ.
ವಯಸ್ಸಾಗುವಿಕೆಯನ್ನು ತಡೆಗಟ್ಟುತ್ತದೆ…!
ಬಿದಿರಿನ ಬಾಟಲಿಯಲ್ಲಿ ನೀರನ್ನು ಕುಡಿಯುವುದರಿಂದ ಮಹಿಳೆಯರು ದೀರ್ಘಕಾಲ ಯಂಗ್ ಆಗಿ ಕಾಣಬಹುದು. ಏಕೆಂದರೆ ಬಿದಿರು ಸಾಕಷ್ಟು ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ. ಈ ಅಂಶಗಳು ನಮ್ಮ ಚರ್ಮಕ್ಕೆ ತಾರುಣ್ಯವನ್ನು ಹೆಚ್ಚಿಸುತ್ತವೆ. ಬಿದಿರಿನ ಬಾಟಲಿಯಲ್ಲಿ ಇರಿಸಿದ ನೀರನ್ನು ಮುಖ ತೊಳೆಯಲು ಉಪಯೋಗಿಸಿದರೆ ಮುಖದ ಸೌಂದರ್ಯ ಹೆಚ್ಚುತ್ತದೆ.

ಆರೋಗ್ಯಕ್ಕೂ ಬೆಸ್ಟ್..!
ಬಿದಿರಿನ ಬಾಟಲಿಗಳಲ್ಲಿ ಸಂಗ್ರಹವಾಗಿರುವ ನೀರಿನ ಬಳಕೆಯಿಂದ ದೇಹದಲ್ಲಿ ಕಾಲಜನ್ ಉತ್ಪಾದನೆ ಹೆಚ್ಚುತ್ತದೆ. ಚರ್ಮ ಮತ್ತು ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಈ ಅಂಶ ಬಹಳ ಮುಖ್ಯ, ವಾಸ್ತವವಾಗಿ, ಅದರಲ್ಲಿ ಸಿಲಿಕಾ ಪ್ರಮಾಣವು ತುಂಬಾ ಹೆಚ್ಚಾಗಿರುತ್ತದೆ.
ಮೂಳೆಗಳು ಬಲಗೊಳ್ಳಲು ಬಿದಿರು!
ಮೂಳೆಗಳು ದುರ್ಬಲಕೊಳ್ಳುವುದರಿಂದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಹೆಚ್ಚಾಗಿ ಮೂಳೆ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ಮೊಣಕಾಲು ನೋವು, ಬೆನ್ನು ನೋವು, ಮುಂತಾದ ಸಮಸ್ಯೆಗಳು ಸಾಮಾನ್ಯವಾಗಿ ಕಂಡು ಬರುತ್ತದೆ. ಆದ್ರೆ ಬಿದಿರಿನ ಬಾಟಲಿಯಲ್ಲಿ ನೀರು ಕುಡಿದರೆ, ದೇಹದ ಮೂಳೆಗಳು ಬಲಗೊಳ್ಳುತ್ತವೆ. ಬಿದಿರಿನಲ್ಲಿರುವ ಸಿಲಿಕಾ ಅಂಶ ಮೂಳೆಗಳನ್ನು ಬಲಗೊಳ್ಳಲು ಸಹಾಯ ಮಾಡುತ್ತದೆ.
ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿರುತ್ತದೆ.
ಕೊಲೆಸ್ಟ್ರಾಲ್ ಏರಿಳಿತದಿಂದಾಗಿ ಅಥವಾ ಕೊಲೆಸ್ಟ್ರಾಲ್ ಮಟ್ಟವು ತುಂಬಾ ಹೆಚ್ಚಿರುವವರಿಗೆ ಬಿದಿರು ಪ್ರಯೋಜನಕಾರಿಯಾಗಬಲ್ಲದ್ದು. ಬಿದಿರಿನ ಬಾಟಲಿಯಲ್ಲಿ ನೀರು ಕುಡಿಯುವುದರಿಂದ ಹೃದಯಘಾತ ಸಮಸ್ಯೆ ಸೇರಿದಂತೆ ಅನೇಕ ಕಾಯಿಲೆಗಳಿಂದ ರಕ್ಷಿಸುತ್ತದೆ.
ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ…
ಆಗಾಗ್ಲೆ, ಹವಾಮಾನದಲ್ಲಾಗುವ ಬದಲಾವಣೆಯಿಂದಾಗಿ ಮಹಿಳೆಯರು ವಿವಿಧ ರೀತಿಯ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಾರೆ. ಬಿದಿರಿನ ಬಾಟಲಿಯಲ್ಲಿ ಇಟ್ಟಿರುವ ನೀರನ್ನು ಕುಡಿಯುವುದರಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಅಲ್ಲದೇ ಬಿದಿರು ಶೀತದಿಂದಾಗುವ ಸಮಸ್ಯೆಗಳಿಂದ ದೇಹವನ್ನು ರಕ್ಷಿಸುತ್ತದೆ.

ನಿಮ್ಮ ಒಮ್ಮೆಯಾದರೂ ಬಿದಿರಿನ ಬಾಟಲಿಯಲ್ಲಿ ನೀರು ಕುಡಿಯಲು ಪ್ರಯತ್ನಿಸಬಹುದು. ದೈನಂದಿನ ಜೀವನದಲ್ಲಿ ಆರೋಗ್ಯವಾಗಿರಲು ಬಯಸಿದರೆ ಬಿದಿರು ನಿಮಗೂ ಉಪಯೋಗವಾಗಬಲ್ಲದ್ದು.
ಬಿದಿರಿನ ಇತರ ಉಪಯೋಗಗಳು..!
ಕಾಗದದ ತಯಾರಿಕೆಯಲ್ಲಿ ಹಾಗೂ ರಯಾನ್ ಬಟ್ಟೆಯ ತಯಾರಿಕೆಯನ್ನು ಬಿದಿರನ್ನು ಉಪಯೋಗಿಸಲಾಗುತ್ತದೆ
ಮನೆಗಳ ನಿರ್ಮಾಣದಲ್ಲಿ ಬಳಕೆ
ತೆಪ್ಪ, ದೋಣಿ,. ದೀಪದ ಕಂಬ, ಏಣಿ, ತೊಟ್ಟಿಲು, ಕೊಳಲುವಾದನದ ತಯಾರಿಕೆಯಲ್ಲಿ
ಕೃಷಿಯಲ್ಲಿ ಬಳಸುವ ವಿವಿಧ ಉಪಕರಣಗಳಲ್ಲಿ
ಪಿಠೋಪಕರಣ ತಯಾರಿಕೆಯಲ್ಲಿ ಕುರ್ಚಿ, ಮೇಜು, ಚಾಪೆ ಮತ್ತು ಬುಟ್ಟಿ. ಮಂಕರಿ , ಬೀಸಣಿಕೆಯಲ್ಲಿ
ಬಿದಿರಿನ ಚಿಗುರೆಲೆಯನ್ನು ಜಜ್ಜಿ, ಗಾಯ ಹಾಗೂ ಊತ ಉಂಟಾಗದರೆ ಲೇಪನ ಮಾಡಲಾಗುತ್ತದೆ. ಪಿತ್ತ ರಕ್ಷಕ, ಚರ್ಮರೋಗ , ವಾಂತಿ , ಅತಿಸಾರ ಸಾಮಾನ್ಯ ದೌರ್ಬಲ್ಯ, ಮೂತ್ರ ಸಮಸ್ಯೆ, ಜ್ವರಕ್ಕೆ ದಿವ್ಯಾಷಧಿ ಎಂದೇ ಹೇಳಬಹುದು.