ಅಸ್ತಮಾ ಉಸಿರಾಟದ ಕಾಯಿಲೆಯಾಗಿದ್ದು, ಈ ರೋಗದಿಂದ ಬಳಲುತ್ತಿರುವವರಿಗೆ ಉಸಿರಾಟದ ತೊಂದರೆ ಹೆಚ್ಚಾಗಿರುತ್ತದೆ. ಉಸಿರಾಟದ ಕೊಳವೆಗಳಲ್ಲಿ ತಡೆ ಉಂಟಾದಾಗ ಈ ಸಮಸ್ಯೆ ಕಾಡಬಹುದು. ಸದ್ಯ ಕೊರೊನಾ ವೈರಸ್ ಜನರ ನಿದ್ದೆಗೆಡಿಸಿದೆ. ಜನರಲ್ಲಿ ಭಯ ಹಾಗೂ ಆತಂಕದ ವಾತಾವರಣ ಮೂಡಿಸಿದೆ. ಇಂಥ ಟೈಮ್ ನಲ್ಲಿ ಅಸ್ತಮಾ ರೋಗಿಗಳು ಜಾಗರೂಕರಾಗಿ ಇರಬೇಕಾದದ್ದು ಹೆಚ್ಚು ಜವಾಬ್ದಾರಿಯುತವಾದದ್ದು. ವಿಶೇಷವಾಗಿ ಅಸ್ತಮಾ, ಹೃದಯಾಘಾತ ಹಾಗೂ ಮಧುಮೇಹ ಮತ್ತು ಅಧಿಕ ರಕ್ತದೋತ್ತಡದಿಂದ ಬಳಲುತ್ತಿರುವ ಜನರಿಗೆ ಅಗ್ನಿ ಪರೀಕ್ಷೆಯಾಗಿದೆ. ಈ ಕಾಯಿಲೆಯಿಂದ ಬಳಲುತ್ತಿರುವವರು ಕೊರೊನಾ ಸೋಂಕಿನ ಅಪಾಯ ಎದುರಿಸುವ ಸಾಧ್ಯತೆ ಇದೆ. ನೀವು ಅಸ್ತಮಾ ಸಮಸ್ಯೆ ಹೊಂದಿದ್ದರೆ, ಈ ವಿಷಯಗಳ ಬಗ್ಗೆ ಕಾಳಜಿ ವಹಿಸಬೇಕು. ಕೊರೊನಾ ವೈರಸ್ ಸಮಯದಲ್ಲಿ ಅಸ್ತಮಾ ಸಮಸ್ಯೆಯಿಂದ ಬಳಲುತ್ತಿರುವವರು ಹೇಗೆಲ್ಲಾ ಇರಬೇಕು.. ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.

ಅಸ್ತಮಾ ಎಂದರೇನು…?
ಅಸ್ತಮಾ ಉಸಿರಾಟದ ಕಾಯಿಲೆಯಾಗಿದ್ದು, ಇದರಲ್ಲಿ ರೋಗಿಗೆ ಉಸಿರಾಡಲು ತೊಂದರೆಯಾಗುತ್ತದೆ. ಉಸಿರಾಟದ ಕೊಳವೆಗಳಲ್ಲಿ ತಡೆ ಉಂಟಾದಾಗ ಈ ಕಾಯಿಲೆ ಕಂಡು ಬರುತ್ತದೆ. ಈ ಸಮಸ್ಯೆ ಕೆಲವು ಬಾರಿ ಕಫ ಹಾಗೂ ಅಲರ್ಜಿಯಿಂದ (ಮಾಲಿನ್ಯ ಹಾಗೂ ಗಾಳಿ)ಯಿಂದ ಉಂಟಾಗಬಹುದು. ಉಸಿರಾಡಲು ತುಂಬಾ ಕಷ್ಟಕರವಾಗುತ್ತದೆ. ಈ ಸಮಯದಲ್ಲಿ ಕೊರೊನಾ ವೈರಸ್ ಶ್ವಾಸಕೋಶದ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ. ಹೀಗಾಗಿ ಅಸ್ತಮಾ ರೋಗಿಗಳು ಹೆಚ್ಚು ಜಾಗರೂಕರಾಗಿ ಇರಬೇಕಾದದ್ದು ಅಗತ್ಯ.
ಸಮತೋಲಿತ, ಆರೋಗ್ಯಕರ ಆಹಾರದ ಬಗ್ಗೆ ಕಾಳಜಿ ವಹಿಸಿ
ನೀವು ಅಸ್ತಮಾ ರೋಗಿಯಾಗಿದ್ದರೆ, ನಿಮ್ಮ ಆಹಾರ ಕ್ರಮದ ಬಗ್ಗೆ ವಿಶೇಷ ಗಮನ ಹರಿಸಬೇಕಾಗುತ್ತದೆ. ಇದಕ್ಕಾಗಿ ನೀವು ವಿಟಮಿನ್ – ಸಿ ಹೊಂದಿರುವ ಹೆಚ್ಚು ಹಣ್ಣುಗಳು ಹಾಗೂ ತರಕಾರಿಗಳನ್ನು ಸೇವಿಸಬೇಕು, ಇದು ಶ್ವಾಸಕೋಶದ ಎಲ್ಲಾ ತೊಂದರೆಗಳನ್ನು ನಿವಾರಿಸುತ್ತದೆ. ಇದಲ್ಲದೇ, ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವುದಿಲ್ಲ.
ದೇಹ ಹೈಡ್ರೀಕರಿಸಿ
ನೀವು ಹೆಚ್ಚು ಹೆಚ್ಚು ನೀರು ಕುಡಿಯುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕಾಗುತ್ತದೆ. ಇದು ದೇಹದಲ್ಲಿನ ವಿಷಯನ್ನು ಹೊರಹಾಕಲು ನೆರವಾಗುತ್ತದೆ. ಶ್ವಾಸಕೋಶದ ತಾಪಮಾನವನ್ನು ಸಮತೋಲನದಲ್ಲಿರಿಸುತ್ತದೆ. ಅಸ್ತಮಾ ರೋಗಿಗಳಿಗೆ ಉಸಿರಾಟದ ತೊಂದರೆ ಹೆಚ್ಚಾಗಿರುತ್ತದೆ. ಅಂತಹ ರೋಗಿಗಳು ಇದರಿಂದ ಪರಿಹಾರ ಪಡೆಯಲು ಬಾಯಿ ಇಂದ ಉಸಿರಾಡುವುದನ್ನು ಕಾಣಬಹುದು. ಹೀಗೆ ಮಾಡುವುದು ತಪ್ಪು. ನಿಮ್ಮ ಮೂಗಿನ ಮೂಲಕ ಉಸಿರಾಡಿ. ನೀವು ಬಾಯಿಯ ಮೂಲಕ ಉಸಿರಾಡಿದರೆ, ಶ್ವಾಸಕೋಶದ ಊತ ಹೆಚ್ಚಾಗಬಹುದು.

ಪ್ರಿವೆಂಟರ್ ಇನ್ಹೇಲರ್ ಬಳಕೆ ಮಾಡಿ
ಅಸ್ತಮಾ ಇರುವವರು, ವೈದ್ಯರು ಹೇಳಿರುವಂತೆ ಇನ್ಹೇಲರ್ ಅನ್ನು ಉಪಯೋಗಿಸಿ. ವೈರಸ್ ನಿಂದ ಉಂಟಾಗುವ ಅಸ್ತಮಾ ದಾಳಿಯ ಅಪಾಯವನ್ನು ಇದು ಕಡಿಮೆ ಮಾಡುತ್ತದೆ. ಪ್ರತಿ ದಿನ ಇನ್ಹೇಲರ್ ನ್ನು ನಿಮ್ಮೊಂದಿಗೆ ಇರಿಸಿಕೊಳ್ಳಿ. ಹೆಚ್ಚಿನ ಅಸ್ತಮಾ ರೋಗಿಗಳು ಕಾರ್ಟಿಕೊಲ್ಟೆರಾಯ್ಡ್ ಇನ್ಹೇಲರ್ ಗಳನ್ನು ಕೆಮ್ಮು, ಉಸಿರಾಟದ ತೊಂದರೆ, ಮತ್ತು ಎದೆಯ ಬಿಗಿತ ಮತ್ತು ಗಂಟಲು ನೋವನ್ನು ನಿವಾರಿಸಲು ಬಳಸುತ್ತಾರೆ. ಈ ಸಂದರ್ಭದಲ್ಲಿ ಯಾವಾಗಲೂ ನಿಮ್ಮೊಂದಿಗೆ ತಡೆಗಟ್ಟುವ ಇನ್ಹೇಲರ್ ಅನ್ನು ಇರಿಸಿಕೊಳ್ಳುವುದು ಉತ್ತಮ. ನಿಮಗೆ ಅಸ್ತಮಾ ಹೆಚ್ಚಾಗುತ್ತಿದೆ ಎಂದು ಅನ್ನಿಸಿದರೆ, ಸಹಾಯವಾಣಿ ಸಂಖ್ಯೆಗೆ ಕೂಡಲೇ ಸಂಪರ್ಕಿಸಿ.
ಸ್ವಚ್ಛತೆ ಕಡೆ ಗಮನ ನೀಡಿ
ಕರೊನೊ ವೈರಸ್ ಸಾಂಕ್ರಾಮಿಕ ರೋಗವನ್ನು ನಿವಾರಿಸಲು ಮನೆ ಸ್ವಚ್ಛವಾಗಿಟ್ಟುಕೊಳ್ಳುವುದು ಅಷ್ಟೇ ಮುಖ್ಯ. ಸ್ವಚ್ಛ ಗೊಳಿಸುವ ಬಗ್ಗೆ ವಿಶೇಷ ಗಮನ ಹರಿಸಬೇಕಾಗುತ್ತದೆ. ಯಾವುದೇ ಅನಗತ್ಯ ವಸ್ತುಗಳನ್ನು ಸ್ಪರ್ಶಿಸಿದ ಬಳಿಕ ದಯವಿಟ್ಟು ನಿಮ್ಮ ಕೈಗಳನ್ನು ತೊಳೆದು ಕೊಳ್ಳಿ. ಅಲ್ಲದೇ ಅಲ್ಕೋಹಾಲ್ ಹ್ಯಾಂಡ್ ಸ್ಯಾನಿಟೈಜರ್ ಮೂಲಕ ನಿಮ್ಮ ಕೈಗಳನ್ನು ಸ್ವಚ್ಚಗೊಳಿಸಿಕೊಳ್ಳಿ.
ಇನ್ನು ಉತ್ತಮ ಆಹಾರದ ಜತೆಗೆ ಈ ವಿಷಯಗಳ ಬಗ್ಗೆ ಗಮನದಲ್ಲಿಟ್ಟುಕೊಳ್ಳುವುದು ಮುಖ್ಯ. ಈ ಅಭ್ಯಾಸಗಳು ನಿಮ್ಮನ್ನು ದೀರ್ಘಕಾಲದವರೆಗೆ ಆರೋಗ್ಯವಾಗಿಡಲು ಸಹಾಯ ಮಾಡುತ್ತವೆ.
ಯಾರಿಗೆ ಅಪಾಯ ಹೆಚ್ಚು..?
ನೀವು ಈಗಾಗಲೇ ಯಾವುದಾದರೂ ಸಮಸ್ಯೆಯಿಂದ ಬಳಲುತ್ತಿದ್ದರೆ, ನೀವು ಇತರರಿಗಿಂತ ಬೇಗನೇ ಕೊರೊನಾ ವೈರಸ್ ಸೋಂಕನ್ನು ಪಡೆಯುವ ಸಾಧ್ಯತೆ ಹೆಚ್ಚು. ಆದರೆ ಕೊರೊನಾ ಸೋಂಕಿನ ನಂತರ ಇತರ ರೋಗಿಗಳಿಗಿಂತ ಪರಿಸ್ಥಿತಿ ಹೆಚ್ಚು ಗಂಭೀರವಾಗಿರುತ್ತದೆ. ದುರ್ಬಲ ರೋಗ ನಿರೋಧಕ ಶಕ್ತಿ , ಮಧುಮೇಹ ಮತ್ತು ಹೃದ್ರೋಗದಿಂದ ವಯಸ್ಸಾದವರು ಈಗಾಗಲೇ ಉಸಿರಾಟದ ಕಾಯಿಲೆಯಿಂದ (ಅಸ್ತಮಾ) ಇಂದ ಬಳಲುತ್ತಿರುವವರು ತೀವ್ರವಾಗಿ ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ.
ಈ ಸಮಯದಲ್ಲಿ ಅಧಿಕ ರಕ್ತದೋತ್ತಡ, ಉಸಿರಾಟದ ತೊಂದರೆ ಅಥವಾ ರೋಗ ನಿರೋಧಕ ಶಕ್ತಿ ದುರ್ಬಲವಾಗಿರುವ ಜನರು ವೈರಸ್ ನಿಯಂತ್ರಿಸಲು ಕಾಳಜಿ ವಹಿಸಬೇಕು. ಸೋಂಕು ಉಸಿರಾಟದ ಹಾಗೂ ಶ್ವಾಸಕೋಶದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಜ್ವರ ಲಕ್ಷಣಗಳು ಕಂಡು ಬಂದರೆ ತಕ್ಷಣ ವೈದ್ಯರನ್ನು ಸಂಪರ್ಕ ಮಾಡಿ.