ಅಶ್ವಗಂಧ ಆಯುರ್ವೇದ ಔಷಧಿಗಳಲ್ಲಿ ಬಳಸಲಾಗುತ್ತದೆ. ಅಸಂಖ್ಯಾತ ಪ್ರಯೋಜನಗಳನ್ನು ಪಡೆದಿರುವ ಅಶ್ವಗಂಧ ಹಲವು ಶತಮಾನಗಳಿಂದ ವಿಶ್ವದಾಂದ್ಯತ ಬಳಸಲಾಗುತ್ತದೆ. ವಿಜ್ಞಾನಿಗಳು ಅಶ್ವಗಂಧವನ್ನು ಪ್ರಬಲ ಔಷಧಿ ಎಂದು ಕರೆದಿದ್ದಾರೆ. ಈ ಕಾರಣಕ್ಕಾಗಿ ಇದರ ಬಳಕೆಯು ಅನೇಕ ದೈಹಿಕ ತೊಂದರೆಗಳನ್ನು , ಅಸ್ವಸ್ಥತೆಗಳನ್ನು ಮತ್ತು ರೋಗಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ.
ಅಶ್ವಗಂಧದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಗುಣಗಳಿದ್ದು, ಆಂಟಿ ಸ್ರ್ಟೆಸ್ ಮತ್ತು ಆಂಟಿ ಬ್ಯಾಕ್ಟೇರಿಯಲ್ ಗುಣಗಳನ್ನು ಹೊಂದಿದೆ.

ಅಶ್ವಗಂಧ ಔಷಧಿಯ ರೂಪದಲ್ಲಿ ಬಳಸಲಾಗುತ್ತದೆ ಅದನ್ನು ಹೇಗೆ ಯಾವ ಪ್ರಮಾಣದಲ್ಲಿ ಬಳಸಲಾಗುತ್ತದೆ. ಎಂಬುದನ್ನು ಆಯುರ್ವೇದ ವೈದ್ಯರು ಮಾತ್ರ ಚೆನ್ನಾಗಿ ಸಲಹೆ ನೀಡಬಲ್ಲರು. ಆದ್ದರಿಂದ ಉಪಯೋಗಿಸುವ ಮುನ್ನ ವೈದ್ಯರ ಸಲಹೆ ಪಡೆಯಬೇಕು, ಅಶ್ವಗಂಧ ಎಂದರೇನು, ಅದರ ಪ್ರಯೋಜನಗಳೇನು ಎಂಬುದರ ಬಗ್ಗೆ ತಿಳಿದುಕೊಳ್ಳೋಣ.
ಅಶ್ವಗಂಧ ಎಂದರೇನು…?
ಅಶ್ವಗಂಧದ ವೈಜ್ಞಾನಿಕ ಹೆಸರು ವಿಥಾನಿಯಾ ಸೋಮ್ನಿಫೆರಾ . ಸಾಮಾನ್ಯ ಪರಿಭಾಷೆಯಲ್ಲಿ ಇದನ್ನು ಅಶ್ವಗಂಧ ಎಂದು ಕರೆಯಲಾಗುತ್ತದೆ. ಇದರ ಸಸ್ಯ 35-75 ಸೆ. ಮೀ ಇದ್ದು, ಭಾರತದ ಮಧ್ಯಪ್ರದೇಶ, ಪಂಜಾಬ್, ಗುಜರಾತ್, ರಾಜಸ್ಥಾನದಲ್ಲಿ ಬೆಳೆಯಲಾಗುತ್ತದೆ. ಇದಲ್ಲದೇ, ಚೀನಾ ಮತ್ತು ನೇಪಾಳದಲ್ಲಿಯೂ ಇದನ್ನು ಹೇರಳವಾಗಿ ಬೆಳೆಯಲಾಗುತ್ತದೆ.
ಅಶ್ವಗಂಧದ ಪ್ರಯೋಜನಗಳು..!
ಅಶ್ವಗಂಧ ದೇಹಕ್ಕೆ ಹೆಚ್ಚು ಪ್ರಯೋಜನಕಾರಿ ಎಂದು ನಂಬಲಾಗಿದೆ. ಇದರ ಬಳಕೆಯಿಂದ ಮೆದುಳಿನ ಕಾರ್ಯವನ್ನು ಸುಧಾರಿಸುತ್ತದೆ. ವರದಿ ಪ್ರಕಾರ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಹಾಗೂ ಪುರುಷರಲ್ಲಿ ಲೈಂಗಿಕ ಮತ್ತು ಫಲವತ್ತತೆಯನ್ನು ಸುಧಾರಿಸಲು ನೆರವಾಗುತ್ತದೆ. ಅಲ್ಲದೇ ಒತ್ತಡ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಅಶ್ವಗಂಧದಲ್ಲಿ ಉತ್ಕರ್ಷಣ ನಿರೋಧಕ ಗುಣಗಳಿದ್ದು, ಇದು ದೇಹದಲ್ಲಿ ಸ್ವತಂತ್ರ ರಾಡಿಕಲ್ ರೂಪುಗೊಳ್ಳುವುದನ್ನು ತಡೆಯಲು ಸಹಾಯ ಮಾಡುತ್ತದೆ. ಇತರೆ ಕಾಯಿಲೆಗಳನ್ನು ನಿವಾರಿಸಲುವಲ್ಲಿ ಪ್ರಮುಖಪಾತ್ರವಹಿಸುತ್ತದೆ. ಈ ಲೇಖನದಲ್ಲಿ ಅಶ್ವಗಂಧವನ್ನು ಹೇಗೆ ಸೇವಿಸಬೇಕು.. ಅಶ್ವಗಂಧದ ಪುಡಿಯ ಪ್ರಯೋಜನಗಳೇನು ಎಂಬುದನ್ನು ವಿವರಿಸಲಾಗಿದೆ.
ಕೊಲೆಸ್ಟ್ರಾಲ್
ಅಶ್ವಗಂಧದಲ್ಲಿ ಉತ್ಕರ್ಷಣ ನಿರೋಧಕ ಮತ್ತು ಆಂಟಿ ಇನ್ಫಾಮೇಟರಿ ಗುಣಗಳಿವೆ. ಈ ಕಾರಣಕ್ಕಾಗಿ, ಇದು ಎಲ್ಲಾ ರೀತಿಯ ಹೃದಯ ಸಮಸ್ಯೆಗಳಿಂದ ರಕ್ಷಿಸಲು ನೆರವಾಗುತ್ತದೆ. ಅಶ್ವಗಂಧ ಪುಡಿ ಸೇವಿಸುವುದರಿಂದ ಹದಯ ಸ್ನಾಯುಗಳನ್ನು ಬಲಪಡಿಸಬಹುದು. ಮತ್ತು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮೆಡಿಕಲ್ ಸೈನ್ಸ್ ನ ಸಂಶೋಧನೆ ಪ್ರಕಾರ. ಅಶ್ವಗಂಧ ವು ಹೇರಳವಾಗಿರುವ ಹೈಪೋಲಿಪಿಡೆಮಿಕ್ ಎಂದು ಕಂಡು ಬಂದಿದೆ. ಇದು ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಕೆಲವರಿಗೆ ಸಹಾಯ ಮಾಡುತ್ತದೆ.
ನಿದ್ರಾಹೀನತೆ
ನಿದ್ರಾಹೀನತೆ ಕೊರತೆ ಇರುವವರು ವೈದ್ಯರ ಸಲಹೆ ಮೇರೆಗೆ ಅಶ್ವಗಂಧವನ್ನು ಸೇವಿಸಬಹುದು. ಅಶ್ವಗಂಧ ಎಲೆಗಳಲ್ಲಿ ಟ್ರೈಥಿಲೀನ್ ಗ್ಲೈಕಾಲ್ ಎಂಬ ಸಂಯುಕ್ತವಿದೆ. ಇದು ಉತ್ತಮ ನಿದ್ರೆಗೆ ಸಹಾಯಕಾರಿ. ನಿದ್ರಾ ಹೀನತೆಯಿಂದ ಬಳಲುತ್ತಿರುವವರು ಅಶ್ವಗಂಧವನ್ನು ಸೇವಿಸುವುದರಿಂದ ಹಲವು ಪ್ರಯೋಜನಗಳನ್ನು ಪಡೆಯಬಹುದು.

ಉದ್ವೇಗ ಕಡಿಮೆ ಮಾಡಲು
ಒತ್ತಡದಿಂದ ಹಲವು ಜನರು ಅಕಾಲಿಕ ವಯಸ್ಸಾಗುವಿಕೆಗೆ ತುತ್ತಾಗುತ್ತಿದ್ದಾರೆ. ಅಶ್ವಗಂಧ ಒತ್ತಡ ಹಾಗೂ ಆತಂಕದ ದುಷ್ಪರಿಣಾಮವನ್ನು ನಿವಾರಿಸುತ್ತದೆ. ವಾಸ್ತವವಾಗಿ ಒತ್ತಡ ಸಮಸ್ಯೆ ವಿರೋಧಿ ಗುಣಗಳು ಅಶ್ವಗಂಧದಲ್ಲಿವೆ.
ಪುರುಷರಿಗೆ ಉಪಯುಕ್ತ
ಅನೇಕ ಪುರುಷರು ಕಡಿಮೆ ಲೈಂಗಿಕ ಆಸಕ್ತಿಯನ್ನು ಹೊಂದಿರುತ್ತಾರೆಯ ಪುರುಷರಲ್ಲಿ ಕಂಡು ಬರುವ ಬಂಜೆತನ ಮುಂತಾದ ಸಮಸ್ಯೆಗಳನ್ನು ಅಶ್ವಗಂಧ ನಿವಾರಿಸಬಲ್ಲದ್ದು. ಪುರುಷರಲ್ಲಿ ಲೈಂಗಿಕ ಸಾಮರ್ಥ್ಯವನ್ನು ಸುಧಾರಿಸುವ ಮೂಲಕ ಸುಧಾರಿಸುತ್ತದೆ.
ಕಾಯಿಲೆ
ಈ ಆಯುರ್ವೇದ ಗಿಡಮೂಲಿಕೆ ಕ್ಯಾನ್ಸರ್ ನಂತಹ ಮಾರಣಾಂತಿಕ ಕಾಯಿಲೆಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಅಶ್ವಗಂಧದಲ್ಲಿ ಆಂಟಿ ಟ್ಯೂಮರ್ ಗುಣಗಳಿವೆ. ಇದು ಗಡ್ಡೆಗಳು ಬೆಳೆಯದಂತೆ ತಡೆಯುತ್ತದೆ. ಅಲ್ಲದೇ, ನೇರವಾಗಿ ಕ್ಯಾನ್ಸರ್ ಗುಣಪಡಿಸಲು ಇದನ್ನು ಬಳಸಲಾಗುವುದಿಲ್ಲ. ಆದ್ರೆ ಕ್ಯಾನ್ಸರ್ ತಡೆಗಟ್ಟಲು ಮಾತ್ರ ಉಪಯೋಗಿಸಬಹುದು. ಯಾರಿಗಾದರೂ ಕ್ಯಾನ್ಸರ್ ಇದ್ದರೆ, ಅಂಥವರಿಗೆ ವೈದ್ಯರಿಂದ ಚಿಕಿತ್ಸೆ ನೀಡಬೇಕು. ವೈದ್ಯರ ಸಲಹೆ ಮೇರೆಗೆ ಅಶ್ವಗಂಧವನ್ನು ತೆಗೆದುಕೊಳ್ಳಬೇಕು.

ಮಧುಮೇಹ ನಿವಾರಣೆ
ಅಶ್ವಗಂಧ ಆಯುರ್ವೇದ ಔಷಧಿಯಂತೆ ಮಧುಮೇಹವನ್ನು ನಿವಾರಣೆ ಮಾಡಬಹುದಾಗಿದೆ. ಇದು ಹೈಪೊಗ್ಲಿಸಿಮಿಕ್ ಗುಣಗಳನ್ನು ಹೊಂದಿದೆ ,ಗ್ಲೂಕೋಸ ಪ್ರಮಾಣವನ್ನು ಕಡಿಮೆ ಮಾಡಲು ನೆರವಾಗುತ್ತದೆ.
ಉತ್ತಮ ರೋಗನಿರೋಧಕ ಶಕ್ತಿ
ದೇಹದ ರೋಗ ನಿರೋಧಕ ಶಕ್ತಿ ಉತ್ತಮವಾಗಿದ್ದರೆ, ವಿವಿಧ ರೀತಿಯ ಕಾಯಿಲೆಗಳನ್ನು ದೂರವಿಡಬಹುದು. ಅಶ್ವಗಂಧವನ್ನು ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಇದು ರೋಗಗಳ ವಿರುದ್ಧ ಹೋರಾಡಲು ನೆರವಾಗುತ್ತದೆ.
ಥೈರಾಯ್ಡ್
ದೇಹದ ಹಾರ್ಮೋನುಗಳು ಅಸಮತೋಲನಗೊಂಡಾಗ , ದೇಹದ ತೂಕವು ಕಡಿಮೆಯಾಗಲು ಅಥವಾ ಹೆಚ್ಚಿಸಲು ಪ್ರಾರಂಭವಾಗುತ್ತದೆ.
ಇದರೊಂದಿಗೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಹಂತವನ್ನು ಥೈರಾಯ್ಡ್ ಎಂದು ಕರೆಯಲಾಗುತ್ತದೆ. ಥೈರಾಯ್ಡ್ ಸಮಯದಲ್ಲಿ ಅಶ್ವಗಂಧವನ್ನು ಸೇವಿಸುವುದರಿಂದ ವೈದ್ಯರ ಸಲಹೆಯ ಮೇರೆಗೆ ಪ್ರಯೋಜನಕಾರಿ ಎಂದು ಹೇಳಬಹುದು.
ಕಣ್ಣಿನ ಕಾಯಿಲೆ ನಿವಾರಣೆ
ಹೆಚ್ಚು ಜನರು ಕಣ್ಣಿನ ಕಾಯಿಲೆಗಳನ್ನು ಎದುರಿಸುತ್ತಿರುತ್ತಾರೆ. ಅನೇಕ ಜನರು ಕಣ್ಣಿನ ಪೂರೆ ಸಮಸ್ಯೆಯಿಂದ ಕುರುಡುತನ ಅನುಭವಿಸಬಹುದು.
ಈ ನಿಟ್ಟಿನಲ್ಲಿ ಕಣ್ಣಿನ ಪೊರೆ ಹಾಗೂ ಇತರ ಸಮಸ್ಯೆಗಳ ವಿರುದ್ಧ ಹೋರಾಡಲು ಅಶ್ವಗಂಧ ನೆರವಾಗುತ್ತದೆ. ಕಣ್ಣಿನ ಪೊರೆ ಬೆಳೆಯದಂತೆ ತಡೆಯುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.
ಸಂಧಿವಾತ ನಿವಾರಣೆ…
ಸಂಧಿವಾತ ಅನುಭವಿಸುವ ಜನರಿಗೆ ಕುಳಿತುಕೊಳ್ಳಲು ಹಾಗೂ ನಡೆಯಲು ಕಷ್ಟವಾಗುತ್ತದೆ. ಅಶ್ವಗಂಧವನ್ನು ಮೂಲ ರಸವನ್ನು ಬಳಸುವುದರಿಂದ ಸಂಧಿವಾತಕ್ಕೆ ಸಂಬಂಧಿಸಿದ ರೋಗ ಲಕ್ಷಣಗಳನ್ನು ಕಡಿಮೆ ಮಾಡಬಹುದು. ಮತ್ತು ನೋವು ನಿವಾರಣೆಯಾಗುತ್ತದೆ. ಸಂಧಿವಾತ ತೀವ್ರ ಹಂತದಲ್ಲಿ, ಮನೆ ಮದ್ದುಗಳ ಜತೆಗೆ, ವೈದ್ಯಕೀಯ ಚಿಕಿತ್ಸೆಯೂ ಅಗತ್ಯವಿರುತ್ತದೆ.
ಬಲವಾದ ಸ್ನಾಯುಗಳನ್ನು ಪಡೆಯಲು
ಮೂಳೆಗಳು ದುರ್ಬಲವಾಗಿದ್ದರೆ, ದೇಹದಲ್ಲಿ ಅನೇಕ ಸಮಸ್ಯೆಗಳು ಎದುರಾಗಬಹುದು. ಅಶ್ವಗಂಧ ಸೇವನೆಯಿಂದ ಸ್ನಾಯುಗಳಿಗೆ ಪ್ರಯೋಜನಕಾರಿಯಾಗಿದೆ. ಇದರೊಂದಿಗೆ, ಸ್ನಾಯುಗಳು ಬಲಗೊಳ್ಳುವುದರ ಜತೆಗೆ ಮೆದುಳು ಮತ್ತು ಸ್ನಾಯುಗಳ ನಡುವೆ ಉತ್ತಮ ಹೊಂದಾಣಿಕೆಯಾಗಿದೆ. ಜಿಮ್ ಗೆ ಹೋಗುವವರು, ಕುಸ್ತಿಪಟುಗಳು ಅಶ್ವಗಂಧವನ್ನು ಉಪಯೋಗಿಸುತ್ತಾರೆ.