ಸೇಬು ಹಣ್ಣು ವಿಶ್ವದ ಅತ್ಯಂತ ಜನಪ್ರಿಯ ಹಣ್ಣುಗಳಲ್ಲಿ ಒಂದು. ಅನೇಕ ಜನರು ಸೇಬು ಹಣ್ಣನ್ನು ಪ್ರತಿ ನಿತ್ಯ ಸೇವಿಸುತ್ತಾರೆ. ಆದ್ರೆ ಸೇಬು ತಿನ್ನುವಾಗ ಇದರಲ್ಲಿರುವ ಬೀಜಗಳನ್ನು ಅಗೆಯುತ್ತಾರೆ ಮತ್ತು ನುಂಗುವುದುಂಟು. ಆದ್ರೆ ನಿಮಗೆ ಗೊತ್ತಾ. ಸೇಬು ಹಣ್ಣಿನಲ್ಲಿರುವ ಬೀಜಗಳನ್ನು ವಿಷಕಾರಿ ಎಂದು ಪರಿಗಣಿಸಲಾಗುತ್ತದೆ.

ಕೆಲವರು ಸೇಬು ಹಣ್ಣಿನಲ್ಲಿರುವ ಬೀಜಗಳನ್ನು ವಿಷಕಾರಿ ಎಂದು ಪರಿಗಣಿಸಿದರೆ, ಮತ್ತೆ ಕೆಲವರು ಪ್ರಯೋಜನಕಾರಿ ಎಂದು ಹೇಳುತ್ತಾರೆ. ಅಮಿಗ್ಡಾಲಿನ್ ಸೇಬು ಬೀಜದಲ್ಲಿ ಕಂಡು ಬರುವ ರಾಸಾಯನಿಕ ವಸ್ತು, ಹೈಡ್ರೋಡನ್ ಸೈನೈಡ್ ಆಗಿ ಪರಿವರ್ತನೆಯಾಗುತ್ತದೆ. ಇದರ ಬೀಜಗಳು ಹೆಚ್ಚು ವಿಷಕಾರಿ ಎಂದು ಹೇಳಲಾಗುತ್ತದೆ. ಹೆಚ್ಚಾಗಿ ಸೇಬು ಹಣ್ಣನ್ನು ಸೇವಿಸುವುದರಿಂದ ಮಿದುಳಿಗೆ ಹಾಗೂ ಹೃದಯಕ್ಕೆ ಹಾನಿಯುಂಟುಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಮತ್ತು ಸಾವಿಗೂ ಕಾರಣವಾಗಬಹುದಂತೆ.
ಸೇಬುಹಣ್ಣು ಆರೋಗ್ಯಕ್ಕೆ ಪ್ರಯೋಜನಕಾರಿಯಾದರೂ, ಸೇಬು ತಿನ್ನುವಾಗ ಅದರ ಬೀಜಗಳನ್ನು ಸೇವಿಸುವುದನ್ನು ತಪ್ಪಿಸಬೇಕು.
ಸೇಬು ಬೀಜಗಳು ಯಾಕೆ ವಿಶಕಾರಿಯಾಗಿರುತ್ತವೆ.
ಸೇಬು ಬೀಜದಲ್ಲಿರುವ ಅಮಿಗಾಲ್ಡಿನ್, ಹೈಡ್ರೋಜನ್ ಸೈನೈಡ್ ಎಂಬ ವಿಷಕಾರಿ ವಸ್ತುವಿನ ಉತ್ಪಾದನೆಗೆ ಕಾರಣವಾಗುತ್ತದೆ. ಆದ್ರೆ ಬೀಜದಲ್ಲಿರುವ ಅಮಿಗಾಲ್ಡಿನ್ ಸಾಂದ್ರತೆ ನೈಸರ್ಗಿಕವಾಗಿ ಕಡಿಮೆ ಇರುತ್ತದೆ. ಸೇಬು ಹಣ್ಣಿನ ಬೀಜಗಳನ್ನು ಹೆಚ್ಚಾಗಿ ಅಗೆಯುವುದು, ತಿನ್ನುವುದು ಸೈನೈಡ್ ವಿಷ ಮಾರಕ ಎನ್ನಬಹುದು.
ಒಬ್ಬ ವ್ಯ್ಕತಿ ಪಿತ್ತಜನಕಾಂಗ ಕಾಯಿಲೆಯಿಂದ ಬಳಲುತ್ತಿದ್ದರೆ, ಅಥವಾ ಇತರ ಕಾಯಿಲೆಯಿಂದ ಬಳಲುತ್ತಿದ್ದರೆ, ಈ ಸಂದರ್ಭದಲ್ಲಿ ಸೇಬು ಹಣ್ಣಿನ ಬೀಜಗಳನ್ನು ಸೇವಿಸಬಾರದು.ಇನ್ನು ಸೇಬಿನ ಬೀಜಗನ್ನು ನುಂಗಿದರೆ, ಬೀಜದ ಹೊರಗಿರುವ ಗಟ್ಟಿ ಪದರ ವಿಷಕಾರಿ ಸಂಯುಕ್ತವನ್ನು ಬಿಡುಗಡೆ ಮಾಡುತ್ತದೆ.

ಆ್ಯಪಲ್ ಸೀಡ್ ಸೈನೈಡ್ ಎಷ್ಟು ಮಾರಕ.
.?
ದೇಹದ ತೂಕದ ಪ್ರತಿಯಾಗಿ ಕಿಲೋ ಗ್ರಾಂಗೆ ಕನಿಷ್ಠ 1 ರಿಂದ 2 ಮಿ.ಗ್ರಾಂ ಹೈಡ್ರೋಜನ್ ಸೈನೈಡ್ ಮಾರಕ ಎಂದು ಕರೆಯಲಾಗುತ್ತದೆ. ಅಂದರೆ, ಸರಾಸರಿ, 165 ಪೌಂಡ್ ಅಥವಾ 75 ಕೆ.ಜಿ ತೂಕವಿರುವ ವ್ಯಕ್ತಿಗೆ ಸುಮಾರು 210 ಬೀಜದ ಸೇಬುಗಳು ಮಾರಕ ಎನ್ನಬಹುದು. 1 ಗ್ರಾಂ ಸೇಬು ಬೀಜದಲ್ಲಿ ಅಮಿಗ್ಡಾಲಿನ್ ಪ್ರಮಾಣ 1 ರಿಂದ 4 ಮಿ.ಗ್ರಾಂ ವರೆಗೆ ಇರುತ್ತದೆ.
ಸೇಬು ಬೀಜದಲ್ಲಿರು ಸೈನೈಡ್ ಹೇಗೆ ಕಾರ್ಯನಿರ್ವಹಿಸುತ್ತದೆ..?
ಸೈನೈಡ್ ಅನ್ನು ಮಾರಕ ವಿಷ ಎಂದು ಕರೆಯಲಾಗುತ್ತದೆ.ಸೈನೈಡ್ ಮೂಲವಾಗಿರುವ ಅಮಿಗ್ಡಾಲಿನ್ ಸೇಬು ಬೀಜಗಳು ಹಾಗೂ ಇತರ ಹಣ್ಣುಗಳಲ್ಲಿ ಈ ವಿಷಕಾರಿ ಕಂಡು ಬರಬಹುದು. ಸೇಬುಹಣ್ಣಿನ ಪದರ ಬಲವಾದ ಪರದ ಹೊಂದಿರುತ್ತದೆ. ಸೇಬು ತಿನ್ನುವಾಗ ಬೀಜಗಳನ್ನು ಅಗಿದರೆ, ಅಮಿಗ್ಡಾಲಿನ್ ಕಾರ್ಯ ನಿರ್ವಹಿಸುತ್ತದೆ. ಇದು ದೇಹದ ಜೀರ್ಣಕಾರಿ ಕಿಣ್ವಗಳಿಗೆ ಒಡ್ಡಿಕೊಂಡು ತಕ್ಷಣ ಹೈಡ್ರೋಡನ್ ಸೈನೈಡ್ ಅನ್ನು ಉತ್ಪಾದಿಸುತ್ತದೆ. ಇದ್ರಿಂದ ಮಿದುಳು ಹಾಗೂ ಹೃದಯಕ್ಕೆ ಹಾನಿಯಾಗಬಲ್ಲದ್ದು. ಸೈನೈಡ್ ದೇಹಕ್ಕೆ ಪ್ರವೇಶಿಸಿದಾಗ, ಇದು ರಕ್ತದ ಆಮ್ಲಜನಕವನ್ನು ಸಾಗಿಸುವ ಸಾಮರ್ಥ್ಯವನ್ನ ನಿರ್ಬಂಧಿಸುತ್ತದೆ.

ಸೇಬು ಬೀಜ ಸೇವನೆ ಮಾಡಿದ್ರೆ ಆಗುವ ತೊಂದರೆಗಳು!
ಸೇಬು ಬೀಜ ಸೇವನೆಯಿಂದ ವ್ಯಕ್ತಿಯಲ್ಲಿ ಈ ಲಕ್ಷಣಗಳು ಕಂಡು ಬರಬಹುದು, ತಲೆನೋವು, ವಾಕರಿಕೆ, ವಾಂತಿ, ತಲೆ ತಿರುಗುವಿಕೆ, ದೌರ್ಬಲ್ಯ ರೋಗ ಲಕ್ಷಣಗಳು ಕಂಡು ಬರಬಹುದು. ಇನ್ನು ಉಸಿರಾಟದ ತೊಂದರೆ ಕೂಡಾ ಕಾಣಿಸಿಕೊಳ್ಳಬಹುದು.
ಸೇಬು ಬೀಜದ ಎಣ್ಣೆಯ ಬಳಕೆಯಿಂದ ಅಪಾಯ ಹೆಚ್ಚಾಗಬಹುದ ?
ಸೇಬು ಬೀಜದ ಎಣ್ಣೆಯಲ್ಲಿ ಕಂಡು ಬರುವ ಅಮಿಗ್ಡಾಲಿನ್ ಪ್ರಮಾಣವು ಸಾಮಾನ್ಯವಾಗಿ ಬಹಳ ಕಡಿಮೆ ಇರುತ್ತದೆ. ಕೆಲವು ಅಧ್ಯಯನಗಳ ಪ್ರಕಾರ, ಉತ್ಕರ್ಷಣ ನಿರೋಧಕಂತೆ ಕಾರ್ಯ ನಿರ್ವಹಿಸುತ್ತದೆ. ಮತ್ತೊಂದು ಅಧ್ಯಯನದ ಪ್ರಕಾರ , ಆ್ಯಪಲ್ ಬೀಜದ ಎಣ್ಣೆ ಬ್ಯಾಕ್ಟೇರಿಯಾ ಮತ್ತು ಸೋಂಕುಗಳ ಸಕ್ರಿಯ ಉತ್ಪನ್ನವಾಗಿದೆ ಎಂದು ಹೇಳಲಾಗಿದೆ, ಈ ಎಣ್ಣೆಯನ್ನು ಬಳಸುವುದು ಅಷ್ಟು ಒಳ್ಳೆಯದಲ್ಲ. ಆದ್ರೆ ಈ ಎಣ್ಣೆ ಕೂದಲನ್ನು ಕಂಡೀಶನಿಂಗ್ ಮಾಡಲು, ಕೂದಲು ಉದರುವಿಕೆಯ ಸಮಸ್ಯೆ ತಡೆಗಟ್ಟಲು, ಹಾಗೂ ತ್ವಚೆಯ ರಕ್ಷಣೆಗಾಗಿ ಉಪಯುಕ್ತ ಎಂದು ಹೇಳಲಾಗುತ್ತದೆ.