ಒತ್ತಡದ ಪರಿಸ್ಥಿತಿ , ಭಯ, ಆತಂಕ ಇವೆಲ್ಲದಕ್ಕೂ ನಮ್ಮ ದೇಹ ವಿಭಿನ್ನವಾಗಿ ಪ್ರತಿಕ್ರಿಯಿಸುತ್ತದೆ. ನಮ್ಮ ಜೀವನದ ವಿವಿಧ ಹಂತಗಳಲ್ಲಿ ಅನೇಕ ವಿಷಯಗಳ ಬಗ್ಗೆ ಯೋಚಿಸುತ್ತೇವೆ. ಮಕ್ಕಳು ತಮ್ಮ ಪರೀಕ್ಷೆ ಬಗ್ಗೆ ಚಿಂತಿಸಬಹುದು. ವಯಸ್ಕರು ಉದ್ಯೋಗದ ಬಗ್ಗೆ, ಪೋಷಕರು ಮಕ್ಕಳ ಮದುವೆ ಬಗ್ಗೆ, ಹಿರಿಯರು ಕುಟುಂಬದ ಜವಾಬ್ದಾರಿ ಬಗ್ಗೆ ಚಿಂತಿಸಬಹುದು. ಆದ್ರೆ ಚಿಂತೆನೇ ಜೀವನ ಆಗಬಾರದು. ಚಿಂತೆ ತಡೆಯಲು ಅನೇಕ ಸಲ ಹಲವರು ಪ್ರಯತ್ನಿಸುತ್ತಾರೆ. ಆದ್ರೆ ಅದನ್ನು ಹತೋಟಿಗೆ ತರಲು ಸಾಧ್ಯವಾಗುವುದಿಲ್ಲ. ಅಂಥ ಸಂದರ್ಭದಲ್ಲಿ ಆತಂಕ ನಮ್ಮನ್ನು ಸುತ್ತಲೂ ಆವರಿಸುತ್ತದೆ. ಅಗತ್ಯಕ್ಕಿಂತ ಹೆಚ್ಚಿನದನ್ನು ಯೋಚನೆ ಮಾಡುತ್ತೀರಿ. ಸಣ್ಣ ಸಣ್ಣ ವಿಷಯಗಳ ಬಗ್ಗೆ ತುಂಬಾ ಬೇಸರಗೊಳ್ಳುತ್ತೀರಿ. ಆದ್ರೆ ಆತಂಕ ತಡೆಯುವುದಾದರೂ ಹೇಗೆ.. ಪರಿಹಾರಗಳೇನು.. ಇಲ್ಲಿದೆ.

ಆತಂಕ ಎಂದರೇನು..?
ಆತಂಕ ಹೊಂದಿರುವ ವ್ಯಕ್ತಿ ಯಾವಾಗಲು ಗಾಬರಿಯಲ್ಲಿರುತ್ತಾನೆ. ಈ ಕಾಯಿಲೆಯಲ್ಲಿ ಕಂಡು ಬರುವ ಲಕ್ಷಣಗಳೆಂದರೆ, ಯಾವಾಗಲೂ ಆತಂಕವಿರುವುದು, ಗಂಟಲು ಒಣಗುವುದು , ಏರುಸಿರು ಬಿಡುವುದು, ಹೊಟ್ಟೆಯಲ್ಲಿ ಸಂಕಟವಾಗುವುದು.ಆತಂಕದಲ್ಲಿರುವ ವ್ಯಕ್ತಿ ತನಗೆ ತನ್ನ ಸಂಬಂಧಿಕರಿಗೆ ಏನಾದರೂ ಕೆಟ್ಟದಾಗಬಹುದು ಎಂದು ಗಾಬರಿಗೊಂಡಿರುತ್ತಾನೆ. ಜೀವನದ ಎಲ್ಲಾ ಸಂದರ್ಭಗಳಲ್ಲಿ ತನಗೆ ಸೋಲುಗುತ್ತದೆಯೋನೋ ಎಂದು ಯಾವಾಗಲೂ ಚಿಂತೆಯಲ್ಲಿ ಮುಳುಗಿರುತ್ತಾನೆ. ಸಣ್ಣ ದೊಡ್ಡ ಸಂದರ್ಭಗಳನ್ನು ಕಲ್ಸಿಸಿಕೊಂಡು ಸದಾ ಆತಂಕದಲ್ಲಿರುವುದು.ಇದ್ರಿಂದ ವ್ಯಕ್ತಿ ಮದ್ಯಪಾನ, ನಿದ್ರೆ ಮಾತ್ರೆಗಳ ಮೊರೆ ಹೋಗುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಮಹಿಳೆಯರಲ್ಲಿ ಖಿನ್ನತೆ ಮತ್ತು ಅಸೂಯೆ ಹೆಚ್ಚಲು ಲೈಂಗಿಕ ಹಿಂಸೆ ಕಾರಣವಂತೆ..!
ಇತ್ತೀಚಿನ ದಿನಗಳಲ್ಲಿ ಅತ್ಯಾಚಾರ ಪ್ರಕರಣಗಳು ಹಾಗೂ ಲೈಂಗಿಕ ದೌರ್ಜನ್ಯಗಳು ಹೆಚ್ಚಲು ಕಾರಣ. ಇದ್ರಿಂದ ಮಹಿಳೆಯರಲ್ಲಿ ಖಿನ್ನತೆ, ಆತಂಕ ,ಒತ್ತಡ ಹಾಗೂ ಆತ್ಮಹತ್ಯೆಯಂತಹ ಮಾನಸಿಕ ಸಮಸ್ಯೆಗಳು ಹೆಚ್ಚುತ್ತವೆ. ಮಾನಸಿಕ ಅಸ್ವಸ್ಥತೆ ನಿಮ್ಮ ಆಲೋಚನೆ ಹಾಗೂ ಅರ್ಥಮಾಡಿಕೊಳ್ಳುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ನೀವು ಒತ್ತಡಕ್ಕೊಳಗಾದಾಗ ಯಾರೊಂದಿಗೆ ಮಾತನಾಡಬೇಕು ಎಂದು ಅನ್ನಿಸುವುದಿಲ್ಲ. ನಿಮ್ಮ ಕುಟುಂಬದ ಸ್ನೇಹಿತರೊಂದಿಗೆ ಮಾತನಾಡುವುದಿಲ್ಲ. ಆದರೆ ಈ ಒತ್ತಡವು ನಿಮ್ಮ ಆತ್ಮಸಾಕ್ಷಿಯ ಮೇಲೆ ಭಾರವಾಗಿ ಪರಿಣಮಿಸುತ್ತದೆ. ಅದೇ ಮಾನಸಿಕ ಅಸ್ವಸ್ಥರನ್ನಾಗಿ ಮಾಡುತ್ತದೆ. ಆದ್ರೆ ಇದನ್ನು ತಡೆಗಟ್ಟುವುದು ಹೇಗೆ..
1. ವಾಕ್ ಗೆ ಹೋಗಿ!
ಕೆಲವು ಗಂಭೀರ ಸಮಸ್ಯೆಯ ಕಾರಣದಿಂದಾಗಿ ನೀವು ಆತಂಕಕ್ಕೊಳಗಾಗಿದ್ದರೆ ಮತ್ತು ಅದು ನಿಮ್ಮನ್ನು ಹೆಚ್ಚು ಕಾಡುತ್ತಿದ್ದರೆ, ಯಾವುದೇ ಕೆಲಸದಲ್ಲಿ ನಿಮಗೆ ಏಕಾಗ್ರತೆ ಇರಲ್ಲ. ಇದ್ರಿಂದ ವಿಶ್ರಾಂತಿ ಪಡೆಯಲು ಸಾಧ್ಯವಾಗುವುದಿಲ್ಲ. ಗಮನ ಬೇರೆಡೆಗೆ ಹರಿಸಲು ಸಾಧ್ಯವಾಗದಿದ್ದರೆ, ಆಗ ನೀವು ಮಾಡಬೇಕಾದದ್ದು ಇಷ್ಟೇ, ಪ್ರಕೃತಿಯ ಮಧ್ಯೆ, ಇಂಪಾದ ಗಾಳಿಯ ಮಧ್ಯೆ ವಾಕ್ ಮಾಡಿ.. ಇದ್ರಿಂದ ಸಮಸ್ಯೆ ಹತೋಟಿಗೆ ಬರಬಹುದು.

2. ಮನಸ್ಸನ್ನು ಶಾಂತಗೊಳಿಸುವ ಹಾಡನ್ನು ಕೇಳಿ!
ಇದು ಅತ್ಯಂತ ರೆಸ್ಟ್ ಪ್ರಕ್ರಿಯೆಗಳಲ್ಲಿ ಒಂದು. ನೀವು ತುಂಬಾ ಚಿಂತೆಗೀಡಾದಾಗ, ಅಥವಾ ಒತ್ತಡಕ್ಕೆ ಒಳಗಾದಾಗ ಧ್ವನಿ ಚಿಕಿತ್ಸೆ ಒಂದೇ ನಿಮ್ಮ ಆತಂಕವನ್ನು ಕಡಿಮೆ ಮಾಡಲು ಉತ್ತಮ ಮಾರ್ಗವಾಗಿದೆ. ನಿಮ್ಮ ಮನಸ್ಸನ್ನು ಶಾಂತಗೊಳಿಸುವ ಕೆಲ ಹಾಡುಗಳನ್ನು ಪ್ಲೇ ಮಾಡಿ ಕೇಳಿ.
3. ಧ್ಯಾನ ಮಾಡಲು ಪ್ರಾರಂಭಿಸಿ..!
ದೀರ್ಘಕಾಲ ಆರೋಗ್ಯವಾಗಿರಲು ಧ್ಯಾನ ಕೂಡಾ ಒಂದು. ಆಳವಾದ ಉಸಿರುನ್ನು ಪದೇ ಪದೇ ತೆಗೆದುಕೊಳ್ಳವುದರಿಂದ ಮನಸ್ಸನ್ನು ನಿಯಂತ್ರಿಸಲು ಸಾಧ್ಯ. ಹಾಗೂ ಧ್ಯಾನದ ಮೂಲಕ ದೇಹವನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ.
4. ಸಕ್ಕರೆ ಸೇವನೆ ಕಡಿಮೆ ಮಾಡಿ..!
ನಿಮಗೆ ಸಕ್ಕರೆ ಸೇವನೆ ಮಾಡುವುದು ಇಷ್ಟ ಇರಬಹುದು. ಒತ್ತಡದಲ್ಲಿದಾಗ ಸಾಮಾನ್ಯವಾಗಿ ಹೆಚ್ಚು ಸಕ್ಕರೆ ತಿನ್ನಲು ಪ್ರಾರಂಭಿಸುತ್ತಾಪೆ. ಇದು ಕಡಿಮೆ ಒತ್ತಡ ಉಂಟು ಮಾಡುತ್ತದೆ. ಆದ್ರೆ ಆತಂಕ ನಿಮಗೆ ಎದುರಾದಾಗ, ನೀವು ಸಕ್ಕರೆ ತಿನ್ನುವುದನ್ನು ಅವೈಡ್ ಮಾಡಬೇಕು. ಸಂಶೋಧಕರ ಪ್ರಕಾರ, ಹೆಚ್ಚು ಸಕ್ಕರೆ ಸೇವಿಸುವುದರಿಂದ ದೇಹಕ್ಕೆ ಹಾನಿಯಾಗುತ್ತದೆ. ನಿಮಗೆ ಆತಂಕ ಇದ್ದಾಗ ಒತ್ತಡವನ್ನು ಹೆಚ್ಚಿಸುತ್ತದೆ. ಹೀಗಾಗಿ ಆಹಾರದಲ್ಲಿ ಸಕ್ಕರೆ ಕಡಿಮೆಮಾಡುವುದು ಒಳ್ಳೆಯದು.

ವೇಳಾಪಟ್ಟಿ ತಯಾರಿಸಿ.!
ಆತಂಕದಲ್ಲಿರುವ ಜನರು ಆಗಾಗ್ಗೆ ಕೆಲ ವಡುವಳಿಕೆಗಳಲ್ಲಿ ಸಿಲುಕಿಕೊಂಡಿರುತ್ತಾರೆ. ಹಾಗಾಗಿ ಇದನ್ನು ತೊಡೆದುಹಾಕಲು ಶೆಡ್ಯೂಲ್ ತಯಾರಿಸುವುದು, ಅದು ಅತ್ಯಂತ ಪರಿಣಾಮಕಾರಿ ಮಾರ್ಗಗಳಲ್ಲಿ ಒಂದು. ನಿಮ್ಮ ದೇಹದ ಮೇಲೆ ನಿಯಂತ್ರಣ ಸಾಧಿಸಲು ವೇಳಾಪಟ್ಟಿ ಮಾಡಬೇಕು. ಪ್ರತಿಯೊಂದಕ್ಕೂ ಒಂದು ನಿರ್ದಿಷ್ಟ ಸಮಯ ಮಾಡಬೇಕು. ಯಾವ ಸಮಯದಲ್ಲಿ ಮಲಗಬೇಕು.. ಬೇಗನೆ ಎದ್ದು ಆರೋಗ್ಯಕರ ಆಹಾರ ತೆಗೆದುಕೊಳ್ಳುವುದು. ಈ ತಂತ್ರವು ನಿಮಗೆ ಸ್ವಾವಲಂಬಿಗಳಾಗಲು ಸಹಾಯ ಮಾಡುತ್ತದೆ.
ಕೆಫೀನ್ ಸೇವಿಸಬೇಡಿ..!
ನಿಮ್ಮ ಆತಂಕ, ಒತ್ತಡ ಹಾಗೂ ನಿದ್ರೆಯ ಕೊರತೆಯಿಂದಾಗಿ ತಾತ್ಕಾಲಿಕವಾಗಿ ಕಾರ್ಯನಿರ್ವಹಿಸಲು ಕೆಫೀನ್ ನಿಮಗೆ ಸಹಾಯ ಮಾಡುತ್ತದೆ. ಆದ್ರೆ ಇದನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹ ಮತ್ತು ಮನಸ್ಸಿಗೆ ಅತ್ಯಂತ ಹಾನಿಕಾರಕವಾಗಿದೆ. ಆತಂಕ ಹೊಂದಿರುವ ಜನರು ಕೆಫೀನ್ ಕಾರಣದಿಂದಾಗಿ ಅವರ ದೇಹ ನಡಗಲು ಪ್ರಾರಂಭಿಸುತ್ತದೆ. ಇದು ಅಸ್ವಸ್ಥತೆಯನ್ನು ಉಂಟು ಮಾಡಬಹುದು. ಇನ್ನಷ್ಟು ಆರೋಗ್ಯ ಹದಗೆಡಿಸುತ್ತದೆ ಹಾಗಾಗಿ ಕೆಫೀನ್ ಸೇವನೆ ಮಾಡಬೇಡಿ.
ಗಾಬರಿ ಅತಂಕ ಎಲ್ಲರಲ್ಲೂ ಕಂಡು ಬರುತ್ತದೆ. ಆದ್ರೆ ಅತಿಯಾದರೆ ಯಾವುದೂ ಒಳ್ಳೆಯದಲ್ಲ. ಕಾಯಿಲೆ ತೀವ್ರ ಸ್ವರೂಪ ಪಡೆದುಕೊಳ್ಳಬಹುದು. ಹಾಗಾಗಿ ಮನೋ ವೈದ್ಯರನ್ನು ಭೇಟಿಯಾಗಿಸಲಹೆ ಪಡೆದುಕೊಳ್ಲಬಹುದು.