ದೇಶಾದ್ಯಂತ ಲಾಕ್ ಡೌನ್ ನಿಂದಾಗಿ ಕಾಲೇಜುಗಳು, ಕಚೇರಿಗಳು ಹಾಗೂ ಶಾಲೆಗಳನ್ನು ಕ್ಲೋಸ್ ಮಾಡಲಾಗಿದೆ. ಜನರು ತಮ್ಮ ಮನೆಗಳಲ್ಲೇ ನೆಲೆಸಿದ್ದಾರೆ. ಮನೆಯಲ್ಲೇ ಸೆರೆವಾಸ ಅನುಭವಿಸುತ್ತಿರುವುದರಿಂದ ಅನೇಕ ಜನರು ಒತ್ತಡ ಹಾಗೂ ಆತಂಕಕ್ಕೆ ಒಳಗಾಗುತ್ತಿದ್ದಾರೆ. ಲಾಕ್ ಡೌನ್ ಸಮಸ್ಯೆ ಮಧ್ಯೆ ಒತ್ತಡ ಹಾಗೂ ಆತಂಕವನ್ನು ನಿವಾರಿಸುವುದು ಹೇಗೆ… ಇಲ್ಲಿದೆ ಕಂಪ್ಲೀಟ್ ಮಾಹಿತಿ.

ಸಂಗೀತ, ಚಿತ್ರಕಲೆಯಲ್ಲಿ ಹವ್ಯಾಸ ಬೆಳೆಸಿಕೊಳ್ಳಿ
ಮನೆಯಲ್ಲಿದ್ದಾಗ ಮಾನಸಿಕ ಖಿನ್ನತೆ ಅತಿ ಹೆಚ್ಚು ಕಾಡುತ್ತಿರುತ್ತದೆ. ಅಂಥ ಸಂದರ್ಭದಲ್ಲಿ ಒಳ್ಳೆಯದನ್ನು ಓದಲು ಪ್ರಾರಂಭಿಸಿ. ನೀವು ಬಯಸಿದರೆ, ಚಿತ್ರಕಲೆ, ಸಂಗೀತ ಮುಂತಾದ ಹವ್ಯಾಸಗಳಲ್ಲಿ ಪಾಲ್ಗೊಳ್ಳಬಹುದು.
ಬೆಳಿಗ್ಗೆ ವಾಕಿಂಗ್ ಮಾಡುವುದು
ಮನೆಯಲ್ಲೇ ಬೆಳಿಗ್ಗೆ ವಾಕಿಂಗ್ ಮಾಡಲು ಪ್ರಯತ್ನಿಸಿ. ತಾಜಾ ಗಾಳಿಯಲ್ಲಿ ಮುಕ್ತವಾಗಿ ಉಸಿರಾಡುವ ಮೂಲಕ ನಿಮ್ಮ ಮೆದುಳು ಸರಿಯಾದ ದಿಕ್ಕಿನಲ್ಲಿ ಚಲಿಸುತ್ದೆ. ಹೀಗಾಗಿ ನೀವು ಎಲ್ಲದ್ದರ ಬಗ್ಗೆ ಹೈಪರ್ ಆಗಿರುವುದಿಲ್ಲ.
ಸ್ನೇಹಿತರೊಂದಿಗೆ ಮಾತನಾಡಿ..
ಆಪ್ತರ ಜತೆ ಮಾತನಾಡುವುದರಿಂದ ಆತಂಕವನ್ನು ನಿವಾರಿಸಬಹುದಾಗಿದೆ. ಇಂತಹ ಸಂದರ್ಭದಲ್ಲಿ ನೀವು ವೀಡಿಯೋ ಕಾನ್ಫೆರೆನ್ಸ್ ಮೂಲಕ ಸ್ನೇಹಿತರ ಜತೆ ಸಂಪರ್ಕ ಸಾಧಿಸಬಹುದು. ಅಥವಾ ಕುಟುಂಬದ ಸದಸ್ಯರ ಜತೆ ಮಾತನಾಡಬಹುದು.

ವ್ಯಾಯಾಮ
ವ್ಯಾಯಾಮವು ಆರೋಗ್ಯವನ್ನು ಪಡೆಯುವುದರ ಜತೆಗೆ ಒತ್ತಡವನ್ನು ಕಡಿಮೆ ಮಾಡುತ್ತದೆ. ವ್ಯಾಯಾಮವು ನಮ್ಮ ದೇಹದಿಂದ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ. ಇದರಿಂದಾಗಿ ನಮ್ಮ ಒತ್ತಡವು ಕೆಲವೇ ಕ್ಷಣಗಳಲ್ಲಿ ಕಣ್ಮರೆಯಾಗುತ್ತದೆ. ಆದರೆ ನೀವು ವ್ಯಾಯಾಮ ಮಾಡದೇ ಹೋದರೆ 15 ರಿಂದ 20 ನಿಮಿಷಗಳ ಕಾಲ ವಾಕಿಂಗ್ ಮಾಡಿ.
ಆರೋಗ್ಯಕರ ಆಹಾರವನ್ನು ಅಳವಡಿಸಿಕೊಳ್ಳಿ
ನೀವು ಪ್ರತಿ ದಿನ ಸೇವಿಸುವ ಆಹಾರ ಆರೋಗ್ಯಕರವಾಗಿರುವಂತೆ ನೋಡಿಕೊಳ್ಳಿ. ಪೌಷ್ಟಿಕ ಭರಿತ ಆಹಾರ ಆರೋಗ್ಯವನ್ನು ಕಾಪಾಡುತ್ತದೆ. ಅಲ್ಲದೇ ಉತ್ತಮ ನಿದ್ರೆ ಮಾಡುವುದು ತುಂಬಾ ಮುಖ್ಯವಾಗುತ್ತದೆ. ನಿದ್ರೆಯ ಕೊರತೆ ಯಿಂದಾಗಿ ಜನರು ವಿವಿಧ ಮಾನಸಿಕ ಹಾಗೂ ದೈಹಿಕ ಕಾಯಿಲೆಗಳಿಂದ ಬಳಲುತ್ತಿರುತ್ತಾರೆ. ಚೆನ್ನಾಗಿ ನಿದ್ರೆ ಮಾಡಿದರೆ ದೇಹದ ಶಕ್ತಿ ದಿನವಿಡೀ ಉಳಿಯುತ್ತದೆ. ಅಲ್ಲದೇ ನಿಮ್ಮ ಕೆಲಸವನ್ನು ನೀವು ಸರಿಯಾಗಿ ಮಾಡಲು ಸಾಧ್ಯವಾಗುತ್ತದೆ. ನಿಮ್ಮ ಮನಸ್ಥಿತಿ ಮೊದಲಿಗಿಂತಲೂ ಉತ್ತಮವಾಗಿರುತ್ತದೆ. ಪ್ರತಿಯೊಬ್ಬ ವ್ಯಕ್ತಿ 7 ರಿಂದ 8 ಗಂಟೆಗಳ ಕಾಲ ನಿದ್ರೆ ಮಾಡಬೇಕು.
ಆಧ್ಯಾತ್ಮಿಕ ಸಂಪರ್ಕ
ಯಾವುದೇ ಕಷ್ಟದ ಸಮಯದಿಂದ ಹೊರಬರಲು ದೇವರ ಅನುಗ್ರಹ ಬಹಳ ಮುಖ್ಯ. ನಿಮ್ಮ ಧರ್ಮಕ್ಕೆ ಅನುಗುಣವಾಗಿ ಧಾರ್ಮಿಕ ಪುಸ್ತಕಗಳು ಮತ್ತು ಆಧ್ಯಾತ್ಮಿಕತೆಯನ್ನು ಹೆಚ್ಚಿಸುವ ಪುಸ್ತಕಗಳು ಓದುವುದನ್ನು ಪ್ರಯತ್ನಿಸಿ. ಇದು ನಿಮ್ಮ ಒತ್ತಡವನ್ನು ಹೊರಹಾಕಲು ದೊಡ್ಡ ಮಾರ್ಗವೆಂದೇ ಹೇಳಬಹುದು.
ಒತ್ತಡ ನಿವಾರಿಸುವ ಇತರ ಮಾರ್ಗಗಳು!
1.ಲಾಕ್ ಡೌನ್ ಗೆ ನಿಮ್ಮನ್ನು ನೀವು ನಿರತರಾಗಿರಿ.
2.ಮನೆಯಲ್ಲಿಯೇ ನಿಮ್ಮ ದಿನಚರಿಯನ್ನು ನಿರ್ಧರಿಸಿ.
3.ಕುಟುಂಬ ಸದಸ್ಯರ ಜತೆ ಸಮಯ ಕಳೆಯಿರಿ.
4.ಹೊಸದನ್ನು ಕಲಿಯಲು ಪ್ರಯತ್ನಿಸಿ
5.ಕ್ಯಾರಮ್ , ಚೇಸ್ ಮುಂತಾದ ಆಟಗಳನ್ನು ಆಡಿ.
6.ಈ ಯೋಗದಿಂದ ದೇಹ ಹಾಗೂ ಮನಸ್ಸು ಎರಡೂ ಶಾಂತವಾಗುತ್ತದೆ.
7.ಬೆಳಿಗ್ಗೆ 30 ನಿಮಿಷಗಳ ಕಾಲ ಪ್ರಾಣಾಯಾಮ ಮಾಡಿ
8.ಒತ್ತಡ ನಿವಾರಿಸುವ ಹಲವು ಯೋಗಗಳಿವೆ. ಇದು ಮನಸ್ಸನ್ನು ಶಾಂತಗೊಳಿಸುತ್ತದೆ. ಒತ್ತಡ ರಹಿತ ಜೀವನ ನಿಮ್ಮದಾಗುತ್ತದೆ. ಆರೋಗ್ಯಕರ 9.ಸಮತೋಲನ ಆಹಾರ ಸೇವಿಸಿ.