ಕೊರೊನೊ ವೈರಸ್ ನಿಂದ ವಿಶ್ವದಾಂದ್ಯತ ಸಾವನ್ನಪ್ಪಿದವರ ಸಂಖ್ಯೆ 4 ಸಾವಿರ ದಾಟಿದೆ. ವಿಶ್ವದಾಂದ್ಯತ 1,20,000 ಕ್ಕೂ ಹೆಚ್ಚು ಜನರು ಈ ವೈರಸ್ ಗೆ ತುತ್ತಾಗಿದ್ದಾರೆ. ಭಾರತದಲ್ಲಿ ಕೊರೊನಾ ಪ್ರಕರಣಗಳು ಸಂಖ್ಯೆ 78ಕ್ಕೆ ಏರಿದೆ. ಅದರಲ್ಲಿ 14 ವಿದೇಶಿ ಪ್ರಜೆಗಳು ಸೇರಿದ್ದಾರೆ. ಸ್ವಚ್ಛತೆ ಜತೆಗೆ ಕೊರೊನಾ ತಡೆಗಟ್ಟಲು ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಮುಖ್ಯ. ಇದ್ದಕ್ಕಾಗಿ ಆಂಟಿ ವೈರಲ್ ಆಹಾರವನ್ನು ತೆಗೆದುಕೊಳ್ಳಬೇಕಾಗುತ್ತದೆ. ನಿಮ್ಮ ರೋಗನಿರೋಧಕ ಶಕ್ತಿ ಹೆಚ್ಚಿಸಲು ಮತ್ತು ಸಾಂಕ್ರಾಮಿಕ ಕಾಯಿಲೆಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ನೀವು ಸಿದ್ದರಿರಬೇಕು. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳು ಆಂಟಿ ವೈರಲ್ ಆಹಾರಗಳು ಇಲ್ಲಿವೆ.

ಬೆಳುಳ್ಳಿ
ಬೆಳ್ಳುಳ್ಳಿ ಅನೇಕ ರೀತಿಯ ಸೋಂಕುಗಳಿಂದ ನಿಮ್ಮನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಆದರೆ ನಿಯಮಿತವಾಗಿ ಸೇವಿಸುವುದು ಬಹಳ ಮುಖ್ಯ, ಬೆಳ್ಳುಳ್ಳಿ ತಿನ್ನುವ ಅಭ್ಯಾಸ ವನ್ನು ಇದುವರೆಗೆ ಬಳಸದವರೂ, ಬಳಸುವುದು ಸೂಕ್ತ. ಬೆಳ್ಳುಳ್ಳಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ನೆರವಾಗುತ್ತದೆ. ಬೆಳ್ಳುಳ್ಳಿಯನ್ನು ಹಲವು ರೀತಿಯಲ್ಲಿ ಬಳಕೆ ಮಾಡಬಹುದು. ಆಹಾರಗಳಲ್ಲಿ, ವಿವಿದ ತರಕಾರಿಗಳಲ್ಲಿ ಬೆಳ್ಳುಳ್ಳಿಯನ್ನು ಬಳಸಬಹುದಾಗಿದೆ. ಬೆಳ್ಳುಳ್ಳಿ ವಿಶಿಷ್ಟವಾದ ಸುವಾಸನೆಯನ್ನು ನೀಡುವ ಅಂಶವಾಗಿದೆ. ವೈರಸ್ ತೊಡೆದು ಹಾಕಲು ಪ್ರತಿ ದಿನ ಎರಡು ಬೆಳ್ಳುಳ್ಳಿ ಲವಂಗವನ್ನು ಬೆಚ್ಚಗನಿ ನೀರಿನಿಂದ ತೆಗೆದುಕೊಂಡು , ಅದನ್ನು ನಿಮ್ಮ ದಿನಚರಿಯಲ್ಲಿ ಸೇವಿಸಬಹುದು. ಇದಲ್ಲದೇ ಸೂಪ್ ತಯಾರಿಸಿ ಇದನ್ನು ಕುಡಿಯಬಹುದಾಗಿದೆ.
ನೆಲ್ಲಿಕಾಯಿ
ಪೌಷ್ಟಿಕಾಂಶ ಶಕ್ತಿಯಂತೆ ಆಮ್ಲಾ ದೇಹದ ರೋಗನಿರೋಧಕ ಶಕ್ತಿಯನ್ನು ಪೌಷ್ಟಿಕಾಂಶ ಶಕ್ತಿಯಂತೆ ಆಮ್ಲಾ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಮೊಗ್ಗು ಬೆಳ್ಳುಳ್ಳಿಯನ್ನು ಪುಡಿ ಮಾಡಿ, ಅರ್ಧ ಟೀ ಚಮಚ ತಾಜಾ ಆಮ್ಲಾವನ್ನು ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಹೆಚ್ಚಿಸುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಮೊಗ್ಗು ಬೆಳ್ಳುಳ್ಳಿಯನ್ನು ಪುಡಿ ಮಾಡಿ, ಅರ್ಧ ಟೀ ಚಮಚ ತಾಜಾ ಆಮ್ಲಾವನ್ನು ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

ಬೇವಿನ ಎಲೆ
ಭಾರತದಲ್ಲಿ ಜನರು ಮೂಲತಃ ಬೇವಿನ ಎಲೆಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುತ್ತಾರೆ. ಬೇವಿನ ಎಲೆಗಳು ಶಕ್ತಿಯುತ ರಕ್ತ ಶುದ್ದೀಕರಣ ಎಂದು ಪರಿಗಣಿಸಲಾಗಿದೆ. ಇದು ಆಂಟಿ ವೈರಲ್ ಮತ್ತು ಬ್ಯಾಕ್ಟೇರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಇದು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ.
ತುಳಸಿಯ ಎಲೆಗಳು
ತುಳಸಿಯ ಎಲೆಗ , ಶುಂಠಿ , ಕರಿ ಮೆಣಸು ತುಂಡುಗಳನ್ನು ನೀರಿನಲ್ಲಿ ಬೆರೆಸಿ, ಕಷಾಯ ತಯಾರಿಸಿ, ಇದು ಬ್ಯಾಕ್ಟೇರಿಯಾ ವಿರುದ್ಧ ಹೋರಾಡಲು ನೆರವಾಗುತ್ತದೆ. ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.

ಕರಿಮೆಣಸು, ಕಿತ್ತಳೆ ರಸ
ಪ್ರತಿ ದಿನ ಸ್ವಲ್ಪ ಮೆಣಸಿನ ಪುಡಿ, ತಾಜಾ ಕಿತ್ತಳೆ ರಸ ಕುಡಿಯಿರಿ. ಕಿತ್ತಳೆ ಆಂಟಿ ಆಕ್ಸಿಡೆಂಟ್ ಗಳು ಹೆಚ್ಚಾಗಿದ್ದು, ವಿಟಮಿನ್ ಸಿ ಸಮೃದ್ಧ ಮೂಲವೆಂದು ಪರಿಗಣಿಸಲಾಗಿದೆ. ಇದು ನಿಮ್ಮ ರೋಗನಿರೋಧಕ ಶಕ್ತಿಯನ್ನು ನೈಸರ್ಗಿಕವಾಗಿ ಹೆಚ್ಚಿಸಲು ಸಹಾಯ ಮಾಡುತ್ತದೆ.
ಶುಂಠಿ, ತುಳಸಿ
ರೋಗ ನಿರೋಧಕ ಶಕ್ತಿ ಹೆಚ್ಚಿಸಲು ನೀವು ಮಾಡಬೇಕಾಗಿರುವುದು ತಾಜಾ ಶುಂಠಿ ರಸವನ್ನು ತೆಗೆದುಕೊಳ್ಳಿ, ಅದರಲ್ಲಿ ಕೆಲವು ತುಳಸಿ ಎಲೆಗಳನ್ನು ಪುಡಿ ಮಾಡಿ. ಇದಕ್ಕೆ 1 ಚಮಚ ಜೇನುತುಪ್ಪ ಸೇರಿಸಿ. ಕೆಮ್ಮಿನಿಂದ ಪರಿಹಾರ ಪಡೆಯಲು ಮತ್ತು ದೇಹದ ಪ್ರತಿರೋಧಕ ಶಕ್ತಿ ಹೆಚ್ಚಿಸಲು ಪ್ರತಿ ದಿನ ಇದನ್ನು ತೆಗೆದುಕೊಳ್ಳಿ.

ಇನ್ನು ರೋಗ ನಿರೋಧಕ ಶಕ್ತಿ ಹೆಚ್ಚಲು ಪುದೀನಾ ಎಲೆಗಳನ್ನು ತುಳಸಿ ಎಲೆಗಳನ್ನು ಬೆರೆಸಿ ಬೆಳಿಗ್ಗೆ ತಿನ್ನಿರಿ. ಖಾಲಿ ಹೊಟ್ಟೆಯಲ್ಲಿ ಪ್ರತಿ ದಿನ ಎದ್ದ ನಂತರ, 5 ರಿಂದ 7 ತುಳಸಿ ಎಲೆಗಳನ್ನು , 2 ಕರಿಮೆಣಸು , 1 ಚಮಚ ಜೇನುತುಪ್ಪ ದೊಂದಿಗೆ ಪುಡಿ ಮಾಡಿ ಸೇವಿಸಿ. ನಂತರ ನೀರು ಕುಡಿಯಬೇಡಿ.
ದಾಲ್ಚಿನಿ
ಆರೊಮ್ಟಾಟಿಕ್ ಮಸಾಲೆ ನಿಮ್ಮ ನೆಚ್ಚಿನ ಭಕ್ಷ್ಯಗಳಿಗೆ ಪರಿಮಳವನ್ನು ಹೆಚ್ಚಿಸುತ್ತದೆ ದಾಲ್ಚಿನ್ನಿ ಆಂಟಿ ವೈರಲ್ ಗುಮಗಳನ್ನು ಹೊಂದಿದ್ದು, ರಕ್ತದೋತ್ತಡವನ್ನು ನಿಯಂತ್ರಿಸುವ ಸಾಮರ್ಥ್ಯ ಪಡೆದಿದೆ. ದಾಲ್ಚಿನ್ನಿ ದೇಹವನ್ನು ವೈರಲ್ ಸೋಂಕುಗಳಿಂದ ರಕ್ಷಿಸುತ್ತದೆ. ದಾಲ್ಚಿನ್ನಿ ರಾತ್ರಿ ಇಡೀ ನೀರಿನಲ್ಲಿ ನೆನೆಸಿ, ಬೆಳಿಗ್ಗೆ ಮರುದಿನ ಆ ನೀರನ್ನು ಕುಡಿಯಬಹುದು. ದಾಲ್ಚಿನ್ನಿ ನೀರಿನ ಜತೆಗೆ ಬೆಳಿಗ್ಗೆ 1 ಕಪ್ ಚಹಾ ಅಥವಾ ಕಾಫಿಯಲ್ಲಿ ಪರಿಮಳಯುಕ್ತ ಮಸಾಲೆ ಪಿಂಚ್ ಸೇರಿಸಿ ಕುಡಿಯಬಹುದು.

ಮೊಸರು
ಮುಖ್ಯವಾಗಿ ಮೊಸರಿನಲ್ಲಿ ಕಂಡು ಬರುವ ಪ್ರೊಬಯಾಟಿಕ್ ಇನ್ಫ್ಲುಯೆನ್ಸ್ ವೈರಸ್ ಉಸಿರಾಟದ ಸೋಂಕಿನ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ. ಇದಲ್ಲದೇ, ನ್ಯಾಷನಲ್ ಸೆಂಟರ್ ಫಾರ್ ಬಯೋಟೆಕ್ನಾಲಜಿ ಇನ್ಫಾರ್ಮೇಶನ್ ನಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ, ಮಕ್ಕಳಲ್ಲಿ ಉಸಿರಾಟದ ಹಾಗೂ ಸೋಂಕಿನ ಅಪಾಯವನ್ನು ಕಡಿಮೆಮಾಲು ಪ್ರೊಬಯಾಟಿಕ್ ಸೇವನೆ ಮಾಡುವುದು ಉತ್ತಮ ಮಾರ್ಗವೆಂದು ಪರಿಗಣಿಸಲಾಗಿದೆ. ಮೊಸರು ವಿವಿಧ ರುಚಿ ಗಳಲ್ಲಿ ಲಭ್ಯವಿರುವುದರಿಂದ ನೀವು ದಿನದ ಯಾವುದೇ ಸಮಯದಲ್ಲಿ ಇದನ್ನು ಸೇವಿಸಬಹುದು. ಮಧ್ಯಾಹ್ನ ಆಹಾರದ ಜತೆಗೆ ಮೊಸರು ತಿನ್ನುವುದು ಒಳ್ಳೆಯದು ಎಂದು ಪರಿಗಣಿಸಲಾಗಿದೆ. ನಿಮ್ಮ ನೆಚ್ಚಿನ ಸಿಹಿ ಭಕ್ಷ್ಯಗಳಲ್ಲಿ ಮೊಸರಿನೊಂದಿಗೆ ಸೇವಿಸಬಹುದು.

ಅಣಬೆ
ಅಣಬೆಯಲ್ಲಿ ಬೀಟಾ ಗ್ಲುಟನ್ ಅಂಶ ಹೆಚ್ಚಳವಾಗಿದ್ದು , ಇದು ಆಂಟಿ ವೈರಲ್ ಮತ್ತು ಬ್ಯಾಕ್ಟೋರಿಯಾದ ವಿರುದ್ಧ ಹೋರಾಡಲು ನೆರವಾಗುತ್ತದೆ. ಮಶ್ರೂಮ್ ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಉರಿಯೂತ ಮತ್ತು ಕಿರಿ ಕಿರಿಯನ್ನು ಕಡಿಮೆ ಮಾಡಲು ನೆರವಾಗುತ್ತದೆ. ನೀವು ಅಣಬೆಯನ್ನು ತೆಂಗಿನ ಎಣ್ಣೆಯಲ್ಲಿ ಫ್ರೈ ಮಾಡಬಹುದು. ಮೊದಲು ಅಣಬೆಯ ಮೇಲ್ಭಾಗವನ್ನು ಕತ್ತರಿಸಬೇಕು.