Shantala Madhu

Verified

1

Live Services

About Me

ಯೋಗಪಟುಗಳ ಆಶಾಕಿರಣ ``ಶ್ರೀಮತಿ ಶಾಂತಲಾ ಮಧು'', ಕಲೆ, ಸಂಗೀತ ಮತ್ತು ಯೋಗ ವಿಜ್ಞಾನಗಳಲ್ಲಿ ಸಾಕಷ್ಟು ನೈಪುಣ್ಯವಿರುವ ಉತ್ಸಾಹಿ ಶ್ರೀಮತಿ ಶಾಂತಲಾ ಮಧು. ಅವರನ್ನ ಕಂಡಾಗ ಎಂತಹವರಿಗೂ ಚೈತನ್ಯ ಮೂಡುತ್ತದೆ. ಯೋಗಸಾಧನೆ, ಚಿತ್ರಕಲೆ, ಸಿತಾರ ವಾದನ ಸಾಧಿಸುವುದೆ ಒಂದು ತಪಸ್ಸಿನ ಶಕ್ತಿ ಇದ್ದ ಹಾಗೆ. ಅದೆಲ್ಲವನ್ನು ಸಾಧಿಸಲು ಸಾಕಷ್ಟು ತಾಳ್ಮೆ ಪರಿಶ್ರಮ ಬೇಕಾಗುತ್ತದೆ. ಅಗಾಧವಾದ ಪರಿಶ್ರಮ ಹಾಕಿ ಯೋಗಸಾಧಕಿಯಾಗಿದ್ದಾರೆ ಶ್ರೀಮತಿ ಶಾಂತಲಾ ಮಧು. ಜೊತೆಗೆ ರಾಷ್ಟ್ರಮಟ್ಟದ ಚಿತ್ರಕಲಾವಿದೆಯಾಗಿಯೂ ಹೆಸರುವಾಸಿಯಾಗಿದ್ದಾರೆ. ಸಿತಾರ್ ನುಡಿಸಿ ವಾದ್ಯ ಸಂಗೀತ ರಸಸೃಷ್ಠಿಯಲ್ಲಿಯೂ ಎತ್ತಿದ ಕೈ ಎನಿಸಿಕೊಂಡಿದ್ದಾರೆ. ಇಂತಹ ಬಹುಮುಖ ಪ್ರತಿಭೆಯಾಗಿರುವ ಶಾಂತಲಾ ಮಧು ರವರು ಪ್ರಸ್ತುತ ಶ್ರೀ ಯೋಗ ಸೆಂಟರ್ಗೆ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ದೇಶವಿದೇಶಗಳಲ್ಲಿ ಯೋಗ ಧ್ಯಾನದ ಬಗ್ಗೆ ಸಾಕಷ್ಟು ತರಬೇತಿ ಶಿಬಿರಗಳನ್ನು ನಡೆಸಿದ ಅನುಭವ ಇವರದ್ದು. ವಿವಿಧ ದೇಶಗಳಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಯೋಗಾಭ್ಯಾಸವನ್ನು ವರದಾನವಾಗಿ ನೀಡಿದ್ದಾರೆ. ಸಮಾಧಾನ ಎಂಬ ಆಪ್ತ ಸಲಹಾ ಕೇಂದ್ರದಲ್ಲಿ ಸಮಾಲೋಚಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಮಿಸಸ್ ಇಂಡಿಯಾ ಮೈ ಐಡೆಂಟಿಟಿ ೨೦೧೯, ಸೇರಿದಂತೆ ವಿವಿಧ ಪ್ರಶಸ್ತಿ ಮತ್ತು ಪುರಸ್ಕಾರಗಳು ಇವರನ್ನು ಅರಸಿ ಬಂದಿವೆ. ಸಾಮಾಜಿಕವಾಗಿಯೂ ಸಾಕಷ್ಟು ತೊಡಗಿಸಿಕೊಂಡಿದ್ದಾರೆ. ಇಂತಹ ಬಹುಮುಖ ಪ್ರತಿಭಾವಂತ ಶ್ರೀಮತಿ ಶಾಂತಲಾ ಮಧು ಅವರ ಸಲಹೇ ಮಾರ್ಗದರ್ಶನದಲ್ಲಿ ಯೋಗ, ಧ್ಯಾನದ ವಿಚಾರವಾಗಿ ಕಲಿಯುವುದು ತುಂಬಾನೆ ಇದೆ. ಇವರನ್ನ ಸಂಪರ್ಕಿಸಿ ತರಬೇತಿಗೆ ಸೇರಿಕೊಳ್ಳಿ. ಜೀವನದಲ್ಲಿ ಆರೋಗ್ಯದ ಸುಯೋಗ ನಿಮ್ಮದಾಗಲಿ. ಶ್ರೀಮತಿ ಶಾಂತಲಾ ಮಧು ಅವರು, ನಿಮ್ಮ ಯೋಗದ ಬದುಕಿಗೂ ಆಶಾಕಿರಣವಾಗಲಿ. ಶ್ರೀ ಯೋಗ ಸೆಂಟರ್ ನಿಂದ ಉತ್ಸಾಹದ ಚಿಲುಮೆಯಾಗಲಿ ನಿಮ್ಬದುಕು.

Live Services (1)

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.