Richard Swaroop8 | SparkLive Expert

Richard Swaroop8 


Can Speak: Kannada

Richard ian swaroop..


Similar Experts

ಯೋಗಪಟುಗಳ ಆಶಾಕಿರಣ ``ಶ್ರೀಮತಿ ಶಾಂತಲಾ ಮಧು'', ಕಲೆ, ಸಂಗೀತ ಮತ್ತು ಯೋಗ ವಿಜ್ಞಾನಗಳಲ್ಲಿ ಸಾಕಷ್ಟು ನೈಪುಣ್ಯವಿರುವ ಉತ್ಸಾಹಿ ಶ್ರೀಮತಿ ಶಾಂತಲಾ ಮಧು. ಅವರನ್ನ ಕಂಡಾಗ ಎಂತಹವರಿಗೂ ಚೈತನ್ಯ ಮೂಡುತ್ತದೆ. ಯೋಗಸಾಧನೆ, ಚಿತ್ರಕಲೆ, ಸಿತಾರ ವಾದನ ಸಾಧಿಸುವುದೆ ಒಂದು ತಪಸ್ಸಿನ ಶಕ್ತಿ ಇದ್ದ ಹಾಗೆ. ಅದೆಲ್ಲವನ್ನು ಸಾಧಿಸಲು ಸಾಕಷ್ಟು ತಾಳ್ಮೆ ಪರಿಶ್ರಮ ಬೇಕಾಗುತ್ತದೆ. ಅಗಾಧವಾದ ಪರಿಶ್ರಮ ಹಾಕಿ ಯೋಗಸಾಧಕಿಯಾಗಿದ್ದಾರೆ ಶ್ರೀಮತಿ ಶಾಂತಲಾ ಮಧು. ಜೊತೆಗೆ ರಾಷ್ಟ್ರಮಟ್ಟದ ಚಿತ್ರಕಲಾವಿದೆಯಾಗಿಯೂ ಹೆಸರುವಾಸಿಯಾಗಿದ್ದಾರೆ. ಸಿತಾರ್ ನುಡಿಸಿ ವಾದ್ಯ ಸಂಗೀತ ರಸಸೃಷ್ಠಿಯಲ್ಲಿಯೂ ಎತ್ತಿದ ಕೈ ಎನಿಸಿಕೊಂಡಿದ್ದಾರೆ. ಇಂತಹ ಬಹುಮುಖ ಪ್ರತಿಭೆಯಾಗಿರುವ ಶಾಂತಲಾ ಮಧು ರವರು ಪ್ರಸ್ತುತ ಶ್ರೀ ಯೋಗ ಸೆಂಟರ್ಗೆ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ದೇಶವಿದೇಶಗಳಲ್ಲಿ ಯೋಗ ಧ್ಯಾನದ ಬಗ್ಗೆ ಸಾಕಷ್ಟು ತರಬೇತಿ ಶಿಬಿರಗಳನ್ನು ನಡೆಸಿದ ಅನುಭವ ಇವರದ್ದು. ವಿವಿಧ ದೇಶಗಳಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಯೋಗಾಭ್ಯಾಸವನ್ನು ವರದಾನವಾಗಿ ನೀಡಿದ್ದಾರೆ. ಸಮಾಧಾನ ಎಂಬ ಆಪ್ತ ಸಲಹಾ ಕೇಂದ್ರದಲ್ಲಿ ಸಮಾಲೋಚಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಮಿಸಸ್ ಇಂಡಿಯಾ ಮೈ ಐಡೆಂಟಿಟಿ ೨೦೧೯, ಸೇರಿದಂತೆ ವಿವಿಧ ಪ್ರಶಸ್ತಿ ಮತ್ತು ಪುರಸ್ಕಾರಗಳು ಇವರನ್ನು ಅರಸಿ ಬಂದಿವೆ. ಸಾಮಾಜಿಕವಾಗಿಯೂ ಸಾಕಷ್ಟು ತೊಡಗಿಸಿಕೊಂಡಿದ್ದಾರೆ. ಇಂತಹ ಬಹುಮುಖ ಪ್ರತಿಭಾವಂತ ಶ್ರೀಮತಿ ಶಾಂತಲಾ ಮಧು ಅವರ ಸಲಹೇ ಮಾರ್ಗದರ್ಶನದಲ್ಲಿ ಯೋಗ, ಧ್ಯಾನದ ವಿಚಾರವಾಗಿ ಕಲಿಯುವುದು ತುಂಬಾನೆ ಇದೆ. ಇವರನ್ನ ಸಂಪರ್ಕಿಸಿ ತರಬೇತಿಗೆ ಸೇರಿಕೊಳ್ಳಿ. ಜೀವನದಲ್ಲಿ ಆರೋಗ್ಯದ ಸುಯೋಗ ನಿಮ್ಮದಾಗಲಿ. ಶ್ರೀಮತಿ ಶಾಂತಲಾ ಮಧು ಅವರು, ನಿಮ್ಮ ಯೋಗದ ಬದುಕಿಗೂ ಆಶಾಕಿರಣವಾಗಲಿ. ಶ್ರೀ ಯೋಗ ಸೆಂಟರ್ ನಿಂದ ಉತ್ಸಾಹದ ಚಿಲುಮೆಯಾಗಲಿ ನಿಮ್ಬದುಕು.

ಕರ್ನಾಟಕದಲ್ಲಿ ವೇದ ಉಪನಿಷತ್ ಭಗವದ್ಗೀತೆ ಸೇರಿದಂತೆ ಹಲವಾರು ಗ್ರಂಥಗಳ ಅಧ್ಯಯನ ಮಾಡಿ ಕರಗತ ಮಾಡಿಕೊಂಡವರು ಸಾಕಷ್ಟು ಜನರಿದ್ದಾರೆ. ಅದರಲ್ಲಿ ಪ್ರಮುಖರು ಬೆಂಗಳೂರು ಮೂಲದ ಗೀತಾ ಶಂಕರ್. ತಮ್ಮ ೭ ನೇ ವಯಸ್ಸಿನಲ್ಲಿಯೇ ಭಗವದ್ಗಿತೆಯ ೧೮ ಅಧ್ಯಾಯಗಳನ್ನು ಮತ್ತು ಉಪನಿಷತ್ತುಗಳ ಕಂಠ ಪಾಠ ಮಾಡಿದವರು, ತಮ್ಮ ೧೮ ನೇ ವಯಸ್ಸಿನಲ್ಲಿಯೇ ಉಪನ್ಯಾಸಗಳನ್ನು ನೀಡುತ್ತಾ ಬಂದಿದ್ದಾರೆ. ತಮ್ಮ ಶಿಕ್ಷಣ ಪೂರೈಸಿದ ನಂತರ ಬದುಕಿನುದ್ದಕ್ಕೂ ಆಧ್ಯಾತ್ಮ ಶಿಕ್ಷಣ ಪ್ರಸಾರ ಮಾಡುತ್ತಾ ಬಂದಿದ್ದಾರೆ. ಆಧ್ಯಾತ್ಮದ ಅರಿವು ಮೂಡಿಸುವುದೆ ಇವರ ಬದುಕಿನ ಧ್ಯೇಯವಾಗಿದೆ. ಬೆಂಗಳೂರಿನ ಶಂಕರಾನಂದ ಆಶ್ರಮದಲ್ಲಿ ಸೇವೆಗೈದು ಮತ್ತು ಶಿಕ್ಷಣ ಪಡೆದ ಇವರ ತಂದೆ ತಾಯಿಯವರಿಂದ ಇವರು ಸ್ಪೂರ್ತಿ ಪಡೆದುಕೊಂಡವರು. ಇವರ ತಂದೆಯವರು ಕೂಡ, ಭಗವದ್ಗೀತೆ ಉಪನಿಷತ್ ಬ್ರಹ್ಮಸೂತ್ರ, ವಿಚಾರ ಸಾಗರ ಮತ್ತು ವಿಚಾರ ಚಂದ್ರೋದಯ ಸೇರಿದಂತೆ ಹಲವಾರು ಗ್ರಂಥಗಳಿಗೆ ಸರಳ ವ್ಯಾಖ್ಯಾನದ ಕೃತಿಗಳನ್ನು ರಚಿಸಿದ್ದಾರೆ. ಶ್ರೀಮತಿ ಗೀತಾ ಶಂಕರ್ ರವರು ಕೂಡ ಹಲವಾರು ಕೃತಿಗಳನ್ನು ಬರೆದಿದ್ದಾರೆ. ಜೊತೆಗೆ ಭಜನೆ, ವಿಷ್ಣು ಸಹಸ್ರನಾಮ, ದೇವಿ ಕೌಸ್ತುಭ, ಸೌಂದರ್ಯಲಹರಿ ಶಂಕರಾನಂದಲಹರಿ ಸೇರಿದಂತೆ ಶಂಕರಾಚಾರ್ಯರ ಸ್ತೋತ್ರಗಳ ಪ್ರಸಾರದ ಧ್ವನಿಮುದ್ರಿಕೆಗಳನ್ನು ಬಿಡುಗಡೆಗೊಳಿಸಿದ್ದಾರೆ. ಇಂತಹ ಶ್ರೀಮತಿ ಗೀತಾ ಶಂಕರ್ ರವರು ಶೃಂಗೇರಿಯಲ್ಲಿ ಜರುಗಿದ, ಭಗವದ್ಗೀತೆಯ ೧೮ ಅಧ್ಯಾಯಗಳ ಕಂಠಪಾಠ ಪ್ರವಚನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಪುರಸ್ಕೃತರಾಗಿದ್ದಾರೆ. ಜೊತೆಗೆ ಇವರಿಗೆ ಈಗಾಗಲೇ ಹಲವು ಅಭಿನಂದನೆ ಪುರಸ್ಕಾರಗಳು ಲಭಿಸಿವೆ. ಅಮೆರಿಕಾದಲ್ಲಿರುವ ಇವರ ಮಗಳು ಕೂಡ ಇವರ ಆಧ್ಯಾತ್ಮ ಪ್ರಸಾರ ಮತ್ತು ಉಪನ್ಯಾಸಗಳಿಗೆ ಸಾಕಷ್ಟು ಪ್ರೋತ್ಸಾಹಿಸಿ ಸಂಘಟಿಸುತ್ತಿದ್ದಾರೆ. ಇಂತಹ ಶ್ರೀಮತಿ ಗೀತಾ ಶಂಕರ್ ರವರು, ತಮ್ಮ ಸಾಕಷ್ಟು ಪ್ರವಚನ, ಉಪನ್ಯಾಸ ಮತ್ತು ಆಧ್ಯಾತ್ಮ ಶಿಬಿರಗಳಿಂದ ಸಾಕಷ್ಟು ಖ್ಯಾತಿಗಳಿಸಿದ್ದಾರೆ. ನೀವು ಸಂಘಟಿತರಾಗಿ ಇವರನ್ನು ಆಹ್ವಾನಿಸಿ. ಉಪನ್ಯಾಸಗಳನ್ನು ಆಲಿಸಿ ಜೀವನಚೈತನ್ಯ ಪಡೆಯಿರಿ. ಶ್ರೀಮತಿ ಗೀತಾ ಶಂಕರ್ ರವರ ಈ ಉಪನ್ಯಾಸದ ಪಯಣ ಹೀಗೆ ಸಾಗಲಿ.

Astrologer and Spiritual Counsellor | ಪ್ರಸಿದ್ಧ ಸಂಖ್ಯಾಶಾಸ್ತ್ರಜ್ಞ ಮತ್ತು ದೂರದರ್ಶನ ವ್ಯಕ್ತಿತ್ವ

Other Related Consultations

ಟೆಲಿಪತಿ ಹೋಮಿಯೋಪತಿಯೊಂದಿಗೆ ನಿಮ್ಮ ರೋಗಗಳನ್ನು ಗುಣಪಡಿಸಬಹುದು.

ಪರವಾನಗಿ ಪಡೆದ ಹೋಮಿಯೋಪತಿ ವೈದ್ಯ ಮತ್ತು ಪ್ರಮಾಣೀಕೃತ ಪ್ರಾಣಿಕ್ ವೈದ್ಯ.₹650.0  ₹520.0

ಡಾ ಮಾಲಾ ಮುರಳೀಧರ್ ಅರಿವಿನ ಮತ್ತು ವರ್ತನೆಯ ಚಿಕಿತ್ಸೆಯನ್ನು ನೀಡುತ್ತಾರೆ

ಕೌನ್ಸೆಲಿಂಗ್ ಮತ್ತು ಸೈಕೋಥೆರಪಿಯಲ್ಲಿ ಸ್ನಾತಕೋತ್ತರ ಪದವಿ. ಮನೋವಿಜ್ಞಾನದಲ್ಲಿ ಪಿಎಚ್‌ಡಿ. 14 ವರ್ಷಗಳ ಅನುಭವವನ್ನು ಹೊಂದಿದ್ದಾರೆ.₹1110.0  ₹888.0

ಬದುಕಿಗೆ ಆಧ್ಯಾತ್ಮದ ಸ್ಪೂರ್ತಿ ಶ್ರೀಮತಿ ಗೀತಾ ಶಂಕರ್

ವೇದ ಉಪನಿಷತ್ ಭಗವದ್ಗೀತೆ ಅಧ್ಯಯನ ಮಾಡಿ ಕರಗತ ಮಾಡಿಕೊಂಡವರು. ೧೮ ನೇ ವಯಸ್ಸಿನಲ್ಲಿಯೇ ಉಪನ್ಯಾಸಗಳನ್ನು ನೀಡಿದ್ದಾರೆ. ಪ್ರವಚನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಪುರಸ್ಕೃತರಾಗಿದ್ದಾರೆ.₹390.0  ₹312.0