Monday to Friday - 10 AM to 12 Noon , 5 PM to 7 PM
Kannada
Fee Structure
Rs 312.0 for a 30 Minutes Session
Price
₹312.0 ₹390.0 20.0% off
Spark.Live Guarantee
All Sessions are Live and Interactive
100% Vetted by Spark.Live Team
Easy Refunds on Cancelled Sessions
Support for UPI, Debit Card, Credit Card, Netbanking, EMI and more
ಭಾರತ ದೇಶ ವೈವಿಧ್ಯಮಯವಾದ ಸಂಸ್ಕೃತಿಗಳ ಸಮಾಗಮದ ದೇಶ. ಇಲ್ಲಿ ಸಾಕಷ್ಟು ಧರ್ಮ, ಜಾತಿಗಳ ಜನಸಮುದಾಯ ಭಾವೈಕ್ಯತೆಯಿಂದ ಬದುಕು ನಡೆಸುತ್ತಿದ್ದಾರೆ. ಇವರಲ್ಲಿ ಹಿಂದೂಗಳು ಕೂಡ ಪ್ರಮುಖರು. ಹಿಂದೂ ಸಂಸ್ಕೃತಿ ಮತ್ತು ಧರ್ಮದಲ್ಲಿ ಹಲವು ಆಚರಣೆಗಳು ಮತ್ತು ಗ್ರಂಥಗಳು ಸಾಕಷ್ಟು ಪ್ರಾಚೀನತೆ ಮತ್ತು ಪ್ರಾಮುಖ್ಯತೆಯನ್ನು ಹೊಂದಿವೆ. ಜೀವನ ವಿಧಾನ, ಶಾಂತಿ ಸಮಾಧಾನ ಆಯುಷ್ಯ ಆರೋಗ್ಯ ಹೀಗೆ ಎಲ್ಲದಕ್ಕೂ ಹಿಂದೂ ಧಾರ್ಮಿಕ ಗ್ರಂಥಗಳು ಮತ್ತು ಸಾಂಸ್ಕೃತಿಕ ಗ್ರಂಥಗಳು ದಾರಿ ತೋರಿಸಿವೆ. ಹಾಗಾಗಿ ಅಂತಹ ಹಿಂದೂ ಗ್ರಂಥಗಳ ಅಧ್ಯಯನ ಮಾಡುವುದು ಉತ್ತಮವಾದ ಹವ್ಯಾಸ. ಇನ್ನು ಬಹಳ ಮುಖ್ಯವಾದ ಮತ್ತೊಂದು ವಿಚಾರವೆಂದ್ರೆ, ವೇದ ಉಪನಿಷತ್ತು ಭಗವದ್ಗೀತೆ ಮತ್ತು ಮತ್ತಿತರೆ ಹಿಂದೂ ಗ್ರಂಥಗಳ ಅಧ್ಯಯನ ಮಾಡುವವರು ಮತ್ತು ಅಂಥವರಿಂದ ಉಪನ್ಯಾಸ ಪ್ರವಚನ ಮತ್ತು ಮಾರ್ಗದರ್ಶನ ಪಡೆಯುವುದು. ಇದರಿಂದ ಜೀವನದ ನೆಮ್ಮದಿಗೆ ಸಹಾಯಕವಾಗಬಹುದು. ಹಾಗಾಗಿ ಸಾಮೂಹಿಕವಾಗಿ ಉಪನ್ಯಾಸ ಆಲಿಸುವುದು ಒಳ್ಳೆಯ ಹವ್ಯಾಸ.
ಕರ್ನಾಟಕದಲ್ಲಿ ವೇದ ಉಪನಿಷತ್ ಭಗವದ್ಗೀತೆ ಸೇರಿದಂತೆ ಹಲವಾರು ಗ್ರಂಥಗಳ ಅಧ್ಯಯನ ಮಾಡಿ ಕರಗತ ಮಾಡಿಕೊಂಡವರು ಸಾಕಷ್ಟು ಜನರಿದ್ದಾರೆ. ಅದರಲ್ಲಿ ಪ್ರಮುಖರು ಬೆಂಗಳೂರು ಮೂಲದ ಗೀತಾ ಶಂಕರ್. ತಮ್ಮ ೭ ನೇ ವಯಸ್ಸಿನಲ್ಲಿಯೇ ಭಗವದ್ಗಿತೆಯ ೧೮ ಅಧ್ಯಾಯಗಳನ್ನು ಮತ್ತು ಉಪನಿಷತ್ತುಗಳ ಕಂಠ ಪಾಠ ಮಾಡಿದವರು, ತಮ್ಮ ೧೮ ನೇ ವಯಸ್ಸಿನಲ್ಲಿಯೇ ಉಪನ್ಯಾಸಗಳನ್ನು ನೀಡುತ್ತಾ ಬಂದಿದ್ದಾರೆ. ತಮ್ಮ ಶಿಕ್ಷಣ ಪೂರೈಸಿದ ನಂತರ ಬದುಕಿನುದ್ದಕ್ಕೂ ಆಧ್ಯಾತ್ಮ ಶಿಕ್ಷಣ ಪ್ರಸಾರ ಮಾಡುತ್ತಾ ಬಂದಿದ್ದಾರೆ. ಆಧ್ಯಾತ್ಮದ ಅರಿವು ಮೂಡಿಸುವುದೆ ಇವರ ಬದುಕಿನ ಧ್ಯೇಯವಾಗಿದೆ. ಬೆಂಗಳೂರಿನ ಶಂಕರಾನಂದ ಆಶ್ರಮದಲ್ಲಿ ಸೇವೆಗೈದು ಮತ್ತು ಶಿಕ್ಷಣ ಪಡೆದ ಇವರ ತಂದೆ ತಾಯಿಯವರಿಂದ ಇವರು ಸ್ಪೂರ್ತಿ ಪಡೆದುಕೊಂಡವರು. ಇವರ ತಂದೆಯವರು ಕೂಡ, ಭಗವದ್ಗೀತೆ ಉಪನಿಷತ್ ಬ್ರಹ್ಮಸೂತ್ರ, ವಿಚಾರ ಸಾಗರ ಮತ್ತು ವಿಚಾರ ಚಂದ್ರೋದಯ ಸೇರಿದಂತೆ ಹಲವಾರು ಗ್ರಂಥಗಳಿಗೆ ಸರಳ ವ್ಯಾಖ್ಯಾನದ ಕೃತಿಗಳನ್ನು ರಚಿಸಿದ್ದಾರೆ. ಶ್ರೀಮತಿ ಗೀತಾ ಶಂಕರ್ ರವರು ಕೂಡ ಹಲವಾರು ಕೃತಿಗಳನ್ನು ಬರೆದಿದ್ದಾರೆ. ಜೊತೆಗೆ ಭಜನೆ, ವಿಷ್ಣು ಸಹಸ್ರನಾಮ, ದೇವಿ ಕೌಸ್ತುಭ, ಸೌಂದರ್ಯಲಹರಿ ಶಂಕರಾನಂದಲಹರಿ ಸೇರಿದಂತೆ ಶಂಕರಾಚಾರ್ಯರ ಸ್ತೋತ್ರಗಳ ಪ್ರಸಾರದ ಧ್ವನಿಮುದ್ರಿಕೆಗಳನ್ನು ಬಿಡುಗಡೆಗೊಳಿಸಿದ್ದಾರೆ. ಇಂತಹ ಶ್ರೀಮತಿ ಗೀತಾ ಶಂಕರ್ ರವರು ಶೃಂಗೇರಿಯಲ್ಲಿ ಜರುಗಿದ, ಭಗವದ್ಗೀತೆಯ ೧೮ ಅಧ್ಯಾಯಗಳ ಕಂಠಪಾಠ ಪ್ರವಚನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಪುರಸ್ಕೃತರಾಗಿದ್ದಾರೆ. ಜೊತೆಗೆ ಇವರಿಗೆ ಈಗಾಗಲೇ ಹಲವು ಅಭಿನಂದನೆ ಪುರಸ್ಕಾರಗಳು ಲಭಿಸಿವೆ. ಅಮೆರಿಕಾದಲ್ಲಿರುವ ಇವರ ಮಗಳು ಕೂಡ ಇವರ ಆಧ್ಯಾತ್ಮ ಪ್ರಸಾರ ಮತ್ತು ಉಪನ್ಯಾಸಗಳಿಗೆ ಸಾಕಷ್ಟು ಪ್ರೋತ್ಸಾಹಿಸಿ ಸಂಘಟಿಸುತ್ತಿದ್ದಾರೆ. ಇಂತಹ ಶ್ರೀಮತಿ ಗೀತಾ ಶಂಕರ್ ರವರು, ತಮ್ಮ ಸಾಕಷ್ಟು ಪ್ರವಚನ, ಉಪನ್ಯಾಸ ಮತ್ತು ಆಧ್ಯಾತ್ಮ ಶಿಬಿರಗಳಿಂದ ಸಾಕಷ್ಟು ಖ್ಯಾತಿಗಳಿಸಿದ್ದಾರೆ. ನೀವು ಸಂಘಟಿತರಾಗಿ ಇವರನ್ನು ಆಹ್ವಾನಿಸಿ. ಉಪನ್ಯಾಸಗಳನ್ನು ಆಲಿಸಿ ಜೀವನಚೈತನ್ಯ ಪಡೆಯಿರಿ. ಶ್ರೀಮತಿ ಗೀತಾ ಶಂಕರ್ ರವರ ಈ ಉಪನ್ಯಾಸದ ಪಯಣ ಹೀಗೆ ಸಾಗಲಿ.
Show More