ಸುಲಭ ಪರಿಹಾರಕ್ಕಾಗಿ ವಿಪ್ರಸೇವಾ ಜ್ಯೊತಿಷ್ಯ ಕೇಂದ್ರ

 Availability

Monday to Friday - 10 AM to 12 Noon, 4 PM to 8 PM

 Language

Kannada, English

 Fee Structure

Rs 323.60 for a 30 Minutes Session

 Price

₹323.6 ₹460.0   29% offSpark.Live Assurance

 Vetted and certified Experts

 Live one-on-one sessions

 Available over Audio, Video and Text

 100% satisfaction guaranteed

 Highly secure payment gateway

 Private, secure and encrypted

Program Description

ಭಾರತೀಯರು ಸಾಕಷ್ಟು ಪುರಾಣ, ಕಾವ್ಯ ಮತ್ತು ನಂಬಿಕೆಗಳೊಂದಿಗೆ ಬದುಕುವ ಮನುಷ್ಯರು. ಹಾಗಾಗಿ ಮಹಾನ್ ಕಾವ್ಯಗಳು, ಶಾಸ್ತ್ರ ಪುರಾಣಗಳಲ್ಲಿ ಇಂದಿಗೂ ಸಾಕಷ್ಟು ನಂಬಿಕೆ ಇದೆ. ಆದ್ಧರಿಂದ ಹಲವು ಶಾಸ್ತ್ರಗಳು, ಪುರಾಣಗಳು ಮತ್ತು ಕಾವ್ಯಗಳು ಚಿರಕಾಲ ತಮ್ಮ ಮಹತ್ವವನ್ನು ಉಳಿಸಿಕೊಂಡು ಬಂದಿವೆ. ಇಂಥಹ ಶಾಸ್ತ್ರ, ಗ್ರಂಥಗಳ ಮತ್ತು ವಿದ್ವತ್‌ನ ಸಾಲಿನಲ್ಲಿ ಪ್ರಮುಖವಾದದ್ದು ಜ್ಯೋತಿಷ್ಯ ಶಾಸ್ತ್ರ ಅಥವಾ ಜ್ಯೋತಿರ್ವಿಜ್ಞಾನ. ಇದರಲ್ಲಿ ಮನುಷ್ಯನ ಬದುಕಿನುದ್ದಕ್ಕೂ ಬರುವ ಸವಾಲುಗಳು ಸಮಸ್ಯೆಗಳು ಮತ್ತು ಅವುಗಳನ್ನು ನಿಭಾಯಿಸಿಕೊಳ್ಳಲು ಬೇಕಾದ ಪರಿಹಾರೋಪಾಯಗಳನ್ನು ನೀಡುವ ಕೆಲಸವನ್ನು ಜ್ಯೋತಿಷ್ಯ ಕಾಲಾಂತರಕ್ಕೂ ಮಾಡುತ್ತಾ ಬಂದಿದೆ. ಸಮಸ್ಯೆಗಳು ಮನುಷ್ಯನಿಗಲ್ಲದೆ ಮರಕ್ಕೆ ಬರುತ್ತವೆಯೇ ಎಂಬ ಮಾತಿನಂತೆ, ಮನುಷ್ಯನಿಗೆ ಬರುವ ಸಮಸ್ಯೆಗಳನ್ನು ಮನುಷ್ಯನೆ ಬಗೆಹರಿಸಿಕೊಳ್ಳಬೇಕು. ಆದರೆ ಅದು ಹೇಗೆ ಏನು ಎಂಬುವುದನ್ನು ತಿಳಿಸಿಕೊಡಲು ಗುರು ಬೇಕಾಗುತ್ತಾನೆ. ಆ ಗುರುವಿನ ಸ್ಥಾನವನ್ನ ತುಂಬುವುದೆ ಈ ಜ್ಯೋತಿಷ್ಯ ಶಾಸ್ತ್ರ ಮತ್ತು ವಿದ್ವತ್ ‌ಪೂರ್ಣ ಜ್ಯೋತಿಷಿಗಳು. ಇಂಥಹ ವಿಶಿಷ್ಟವಾದ ಜ್ಯೋತಿಷ್ಯ ಕೇಂದ್ರವೆ, ವಿಪ್ರಸೇವಾ ಜ್ಯೋತಿಷ್ಯ ಕೇಂದ್ರ. ಇದರ ಸಾರಥಿಗಳೆ ಡಾ. ಮಂಜುನಾಥ್ ‌ಭಟ್ ರವರು. ಇವರನ್ನು ಸಂಪರ್ಕಿಸಿ ನಿಮ್ಮ ಸಮಸ್ಯೆ ಸವಾಲುಗಳನ್ನು ಮುಕ್ತವಾಗಿ ಹೇಳಿಕೊಂಡು ಉತ್ತಮ ಪರಿಹಾರೋಪಾಯಗಳನ್ನು ಕಂಡುಕೊಳ್ಳಿ.

About Dr Manjunath K Bhat  

ಇಂಟರ್‌ನ್ಯಾಷನಲ್ ಐಕಾನ್ ಅಸ್ಟ್ರಾಲಾಜರ್ ಪ್ರಶಸ್ತಿ ಲಭಿಸಿದೆ. ವಿಪ್ರಸೇವಾ ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸಿ ಕಾರ್ಯನಿರ್ವಹಿಸುತ್ತಿದ್ದಾರೆ. ಭಾರತೀಯ ಬ್ರಾಹ್ಮಣ ಮಹಾಸಂಘದ ಬೆಂಗಳೂರು ಜಿಲ್ಲೆಯ ಅಧ್ಯಕ್ಷರಾಗಿದ್ದಾರೆ.

ಕರ್ನಾಟಕದ ಕೆಲವೇ ಕಲವು ಪ್ರಸಿದ್ಧ ಮತ್ತು ಅನುಭವಿ ಜ್ಯೋತಿಷಿಗಳಲ್ಲಿ ಪ್ರಮಖರಾವರು ಡಾ. ಮಂಜುನಾಥ್‌ಭಟ್‌ರವರು. ಬೆಂಗಳೂರು ಮೂಲದ ಇವರು, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಜ್ಯೊತಿಷ್ಯ ಅಧ್ಯಯನ ಮಾಡಿದ್ದಾರೆ. ಜೊತೆಗೆ ವಾಸ್ತುಶಾಸ್ತ್ರದಲ್ಲಿಯೂ ಕೂಡ ಡಿಪ್ಲೋಮಾ ಪದವಿ ಪಡೆದಿದ್ದಾರೆ. ಡಾ. ಮಂಜುನಾಥ್‌ಭಟ್ ರವರು ಕಳೆದ ೨೦ ವರ್ಷಗಳಿಂದ ಜ್ಯೋತಿಷ್ಯ ಶಾಸ್ತ್ರದ ಸೇವೆಯಲ್ಲಿದ್ದಾರೆ. ಸಾವಿರಾರು ಜಾತಕಗಳ ಪರಿಶೀಲನೆ ಮಾಡಿದ್ದಾರೆ. ಅನೇಕ ಸಮಸ್ಯೆಗಳ ವಿಶ್ಲೇಷಣೆ ಮಾಡಿ ಪರಿಹಾರೋಪಾಯಗಳನ್ನು ಒದಗಿಸಿದ್ದಾರೆ. ಕರ್ನಾಟಕದ ಪ್ರಮುಖ ವಾಹಿನಿಗಳ ಜ್ಯೋತಿಷ್ಯ ಚರ್ಚಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅನೇಕ ವಿಮರ್ಷೆಗಳನ್ನು ಮಾಡಿದ್ದಾರೆ. ಜ್ಯೊತಿಷ್ಯಕ್ಕೆ ಸಂಬಂಧಪಟ್ಟಂತೆ ಜಾಗತಿಕ ಮಟ್ಟದ ಸಭೆ, ಸಮಾರಂಭ ಮತ್ತು ಸಮಾವೇಶಗಲ್ಲಿ ಭಾಗವಹಿಸಿದ ಅನುಭವಿಗಳು ಡಾ. ಮಂಜುನಾಥ್‌ಭಟ್. ಬ್ಯಾಂಕಾಕ್‌ನಲ್ಲಿ ನಡೆದ ಸಮಾವೇಶದಲ್ಲಿ, ಇಂಟರ್‌ನ್ಯಾಷನಲ್ ಐಕಾನ್ ಅಸ್ಟ್ರಾಲಾಜರ್ ಎಂಬ ಪುರಸ್ಕಾರದೊಂದಿಗೆ ಗೋಲ್ಡ್‌ಮೆಡಲ್ ನೀಡಿ ಅಭಿನಂದಿಸಲಾಗಿದೆ. ಜಾಗತಿಕ ಮಟ್ಟದಲ್ಲಿ ಕನ್ನಡ ಜ್ಯೋತಿಷ್ಯದ ಶಕ್ತಿಯನ್ನು ಪಸರಿಸಿದ್ದಾರೆ. ಸದ್ಯ ನಾಡಿನಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಡಾ. ಮಂಜುನಾಥ್‌ಭಟ್ ಜ್ಯೋತಿಷ್ಯ ಮತ್ತು ವಾಸ್ತು ಸಲಹೆ ವಿಶ್ಲೇಷಣೆ ಪರಿಹಾರೋಪಾಯಗಳನ್ನು ನೀಡುವ ತಮ್ಮ ವೃತ್ತಿಯನ್ನಾಗಿ ಮಾಡಿಕೊಂಡಿದ್ದಾರೆ. ಸಾಕಷ್ಟು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಬಂದಿದ್ದಾರೆ. ಜೊತೆಗೆ ಸಾಮಾಜಿಕವಾಗಿ ಮತ್ತು ಸಾರ್ವಜನಿಕವಾಗಿ ಸೇವೆಸಲ್ಲಿಸಲು ವಿಪ್ರಸೇವಾ ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸಿ ಕಾರ್ಯನಿರ್ವಹಿಸುತ್ತಿದ್ದಾರೆ. ದತ್ತಿ ಧಾರ್ಮಿಕ ಕಾರ್ಯಗಳು, ದೇವಸ್ಥಾನದ ಸೇವೆ ಮತ್ತು ಗೋಶಾಲೆಗಳ ಸೇವೆಯನ್ನು ಮಾಡಲಾಗುತ್ತಿದೆ. ಜೊತೆಗೆ ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘದ ಬೆಂಗಳೂರು ಜಿಲ್ಲೆಯ ಅಧ್ಯಕ್ಷರಾಗಿಯೂ ಸೇವೆಸಲ್ಲಿಸುತ್ತಿದ್ದಾರೆ. ೨೦೧೭ರಲ್ಲಿ ಅಂತರಾಷ್ಟ್ರೀಯ ತಮಿಳು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಇಂತಹ ಅನುಭವಿ ಜ್ಯೋತಿಷಿ ಡಾ. ಮಂಜುನಾಥ್‌ರವರಿಂದ ಸಲಹೆಗಳನ್ನು ಪಡೆಯಲು ನಿಮಗೂ ಮುಕ್ತ ಅವಕಾಶವಿದೆ. ಕರೆಮಾಡಿ ನಿಮ್ಮ ಸಮಸ್ಯೆಗಳಿಂದ ಮುಕ್ತವಾಗಿರಿ.

Customers Also Bought

Show More 

ನಿಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳಿ

ಪ್ರಸಿದ್ಧ ಸಂಖ್ಯಾಶಾಸ್ತ್ರಜ್ಞ ಮತ್ತು ದೂರದರ್ಶನ ವ್ಯಕ್ತಿತ್ವ₹2300.0  ₹1606.2

ಈ ವರ್ಷ ನಿಮಗಾಗಿ ಏನಿದೆ ಎಂದು ತಿಳಿಯಲು ನೀವು ಬಯಸುವಿರಾ?

ಜ್ಯೋತಿಷಿ ಮತ್ತು ಆಧ್ಯಾತ್ಮಿಕ ಸಲಹೆಗಾರ₹1530.0  ₹1070.8

Loading, please wait ...